ಮನೆಮನೆಗೆ ಭೇಟಿ ನೀಡಿ ಕಾನೂನು ಮಾಹಿತಿ ನೀಡಿದ ನ್ಯಾಯಾಧೀಶ ರವಿಕುಮಾರ್ ಕೆ.

0
689

ರಿಪ್ಪನ್‌ಪೇಟೆ: ಪ್ರತಿಯೊಂದು ಮನೆಗೂ ಕಾನೂನು ಅರಿವು ಮುಟ್ಟಿಸುವ ಗುರಿಯ ಪ್ರಯತ್ನದಲ್ಲಿ ಕಾನೂನು ಸಾಕ್ಷರತಾ ಅಭಿಯಾನ ಉದ್ದೇಶವಾಗಿದೆ ಎಂದು ಹೊಸನಗರ ಜೆಎಂಎಫ್‌ಸಿ ನ್ಯಾಯಾಧೀಶ ರವಿಕುಮಾರ್ ಕೆ.ಸಲಹೆ ನೀಡಿದರು.

ಬಾಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕಾನೂನು ಸೇವೆಗಳ ಪ್ರಾಧಿಕಾರ ವಕೀಲರ ಸಂಘ ಮತ್ತು 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಆಯೋಜಿಸಲಾದ ಉಚಿತ ಕಾನೂನು ಅರಿವು – ನೆರವು ಕಾರ್ಯಕ್ರಮದ ಅಂಗವಾಗಿ ಹಲವು ಗ್ರಾಮಗಳಲಿನ ಮನೆ-ಮನೆಗಳಿಗೆ ಭೇಟಿ ನೀಡಿ ಕಾನೂನು ರಚನೆಯಾಗಲು ಮೂಲ ಕಾರಣ ಭೂಮಿಯ ಮೇಲೆ ಬುದ್ದಿವಂತ ಜೀವಿ ಮನುಷ್ಯ ಕಾನೂನು ಮಾಡುವುದರ ಉದ್ದೇಶ ಸುಸ್ಥಿರ ಸಮಾಜವನ್ನು ನಿರ್ಮಾಣ ಮಾಡುವುದರೊಂದಿಗೆ ಜನಸಾಮಾನ್ಯರಿಗೆ ಕಾನೂನಿನ ಅರಿವು ಮೂಡಿಸುವುದು ಇದರ ಮೂಲ ಉದ್ದೇಶವಾಗಿದೆ.

ಲೋಕ ಅದಾಲತ್‌ಗಳ ಮೂಲಕ ವ್ಯಾಜ್ಯಗಳನ್ನು ಇತ್ಯರ್ಥ ಪಡಿಸಿಕೊಳ್ಳುವುದರಿಂದ ಅದು ಸುಪ್ರೀಂ ನ್ಯಾಯಾಲಯದ ಅದೇಶದಂತಾಗುವುದು ಈ ಬಗ್ಗೆ ರೈತ ನಾಗರೀಕರು ತಮ್ಮ ಯಾವುದೇ ಕ್ಲಿಷ್ಟಕರ ಸಮಸ್ಯೆಗಳನ್ನು ನ್ಯಾಯಲಯದಲ್ಲಿ ಎಳೆದಾಡುವುದರ ಬದಲು ಲೋಕ್ ಅದಾಲತ್ ಮೂಲಕ ರಾಜಿ ಸಂಧಾನದ ಮೂಲಕ ಪರಿಹರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳುವಂತೆ ಸಲಹೆ ನೀಡಿದ ಅವರು, ಗ್ರಾಮೀಣ ಪ್ರದೇಶದಲ್ಲಿ ಪಂಚಾಯ್ತಿಗಳು ಜನಸಾಮಾನ್ಯರಿಗೆ ದೊರೆಯುವ ಮೂಲಭೂತ ಸೌಲಭ್ಯಗಳು ಹಾಗೂ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡುವುದು ಅರ್ಹ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ದೊರಕುವ ಸವಲತ್ತುಗಳನ್ನು ತಲುಪಿಸುವಂತಹ ಕೆಲಸವಾಗಬೇಕು ಎಂದರು.

ಬಾಳೂರು ಸರ್ಕಾರಿ ಪ್ರಾಥಮಿಕ ಪಾಠಶಾಲೆ ಮತ್ತು ಅಂಗನವಾಡಿಗಳಲ್ಲಿನ ಮೂಲಭೂತ ಸೌಲಭ್ಯಗಳ ಕುರಿತು ಮಾಹಿತಿ ಪಡೆದ ಅವರು ಗ್ರಾಮಾಂತರಲ್ಲಿ ಶೌಚಾಲಯ ಸಮಸ್ಯೆಗಳ ಕುರಿತು ಸಾರ್ವಜನಿಕರ ಬಳಿಯಲ್ಲಿ ಚರ್ಚಿಸಿ ಪರಿಸರ ಸಂರಕ್ಷಣೆಗಾಗಿ ಪ್ರತಿಯೊಬ್ಬ ನಾಗರೀಕರು ತಮ್ಮ ಮನೆಯಲ್ಲಿ ಶೌಚಾಲಯವನ್ನು ಕಡ್ಡಾಯವಾಗಿ ನಿರ್ಮಿಸಿಕೊಳ್ಳುವುದು ಮತ್ತು ಮನೆಯ ಸುತ್ತಮುತ್ತ ಮರ-ಗಿಡಗಳನ್ನು ಬೆಳಸಿ ಪರಿಸರ ಉಳಿಸಿ ಶುದ್ದ ಗಾಳಿ ಬೆಳಕು ಪಡೆದು ಉತ್ತಮ ಆರೋಗ್ಯ ಹೊಂದಲು ಸಾಧ್ಯವೆಂದು ಕಿವಿಮಾತು ಹೇಳಿದರು.

ಒಂದೇ ದಿನದಲ್ಲಿ ಸುಮಾರು 1500 ಕ್ಕೂ ಅಧಿಕ ಜನರನ್ನು ಭೇಟಿ ಮಾಡಿ ಕಾನೂನು ಮಾಹಿತಿ ನೀಡಿರುವುದು ವಿಶೇಷವಾಗಿತ್ತು.

ಬಾಳೂರು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಲೀಲಾವತಿ ದೊಡ್ಡಯ್ಯ, ಉಪಾಧ್ಯಕ್ಷ ದಿವಾಕರ್, ಪಂಚಾಯತ್ ಅಭಿವೃದ್ದಿ ಅಧಿಕಾರಿ ಹಾಗೂ ಸಿಬ್ಬಂದಿವರ್ಗ ಆಶಾ, ಅಂಗನವಾಡಿ, ಆರೋಗ್ಯ ಕಾರ್ಯಕರ್ತೆಯರು, ಹಿರಿಯ ಪ್ರಾಥಮಿಕ ಪಾಠಶಾಲೆಯ ಶಿಕ್ಷಕ ವೃಂದ ಹಾಜರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here