Home Crime News ಮನೆಯ ಮುಂದೆ ನಿಲ್ಲಿಸಿದ್ದ ಬೈಕ್ಗೆ ಬೆಂಕಿ ಹಚ್ಚಿ ಕಿಡೆಗೇಡಿಗಳಿಂದ ವಿಕೃತಿ..!
ಶಿವಮೊಗ್ಗ : ಸಮೀಪದ ದೇವಕಾತಿಕೊಪ್ಪದಲ್ಲಿ ನಿನ್ನೆ ಮಧ್ಯರಾತ್ರಿ ಮನೆಯ ಮುಂದೆ ನಿಲ್ಲಿಸಿದ್ದ ಬೆಲೆ ಬಾಳುವ ಬೈಕ್ಗೆ ಬೆಂಕಿ ಹಚ್ಚಿರುವ ಘಟನೆ ನಡೆದಿದೆ.
ದೇವಕಾತಿಕೊಪ್ಪದ ಚಂದ್ರು (ಕುಮಾರ್) ಎಂಬುವವರ ಬೈಕ್ ಅನ್ನು ವಿಕೃತ ಮನಸ್ಸಿನ ಕಿಡಿಗೇಡಿಗಳು ತೆಂಗಿನಗರಿಗಳ ಸಹಾಯದಿಂದ ಬೆಂಕಿ ಹಚ್ಚಿದ್ದು, ಬೈಕ್ ಸಂಪೂರ್ಣ ಸುಟ್ಟು ಹೋಗಿದೆ. ಬೈಕ್ಗೆ ಹಚ್ಚಿನ ಬೆಂಕಿ ಅವರ ಮನೆಗೂ ಹತ್ತಿದ್ದು ಕೂಡಲೆ ಎಚ್ಚೆತ್ತ ಮನೆಯವರು ಹಾಗೂ ಅಕ್ಕಪಕ್ಕದವರು ಬೆಂಕಿ ನಂದಿಸಿ ಭಾರಿ ಪ್ರಮಾಣದ ಅನಾಹುತವನ್ನು ತಪ್ಪಿಸಿದ್ದಾರೆ.
ಕೂಲಿ ಕೆಲಸ ಮಾಡಿ ದಿನದ ದುಡಿಮೆ ನಂಬಿ ಬೈಕ್ ಕೊಂಡವರು ದುಷ್ಕರ್ಮಿಗಳ ಕೃತ್ಯದಿಂದ ನೊಂದುಕೊಳ್ಳುವಹಾಗಾಗಿದೆ. ಪ್ರಕರಣ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದೆ.
Related