23.2 C
Shimoga
Sunday, November 27, 2022

ಮರಾಠರ ದೇಶಭಕ್ತ ಗ್ರಾಮದ ಅಭಿವೃದ್ಧಿಗೆ ಶಾಸಕ ಹರತಾಳು ಹಾಲಪ್ಪ ಸಂಕಲ್ಪ

ರಿಪ್ಪನ್‌ಪೇಟೆ : ಇಲ್ಲಿನ ಕೆರೆಹಳ್ಳಿ ಗ್ರಾಮದಲ್ಲಿ ಛತ್ರಪತಿ ಶಿವಾಜಿ ಮಹಾರಾಜ ಮರಾಠ ಸಮುದಾಯದವರ ದೇಶಭಕ್ತಿ ಮತ್ತು ಸಂಘಟನಾ ಶಕ್ತಿ ಹೊಂದಿದವರಾಗಿದ್ದು ಈ ಗ್ರಾಮದ ಸರ್ವಾಂಗೀಣ ಅಭಿವೃದ್ದಿಗೆ ಹೆಚ್ಚು ಒತ್ತು ನೀಡುವುದಾಗಿ ಶಾಸಕ ಹಾಲಪ್ಪಹರತಾಳು ಸಂಕಲ್ಪ ಮಾಡುವುದರೊಂದಿಗೆ ಸಮಾಜದ ಸಂಘಟನೆಗೆ ಪ್ರಸಂಶೆ ವ್ಯಕ್ತಪಡಿಸಿದರು.

ರಿಪ್ಪನ್‌ಪೇಟೆಯ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೆರೆಹಳ್ಳಿ ಗ್ರಾಮದ ರಾಮೇಶ್ವರ ದೇವಸ್ಥಾನದಲ್ಲಿ ದೀಪೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗ್ರಾಮಸ್ಥರ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಹಿಂದಿನ ಶಾಸಕರು ಹಾಗೂ ರಾಜ್ಯದ ಕಂದಾಯ ಸಚಿವರಾಗಿದ್ದ ಕಾಗೋಡು ತಿಮ್ಮಪ್ಪನವರು ಈ ಗ್ರಾಮದ ಅಭಿವೃದ್ದಿಗೆ ಹೆಚ್ಚು ಅನುದಾನವನ್ನು ಬಿಡುಗಡೆಗೊಳಿಸಿದ್ದಾರೆ ಅಭಿವೃದ್ದಿ ಮಾಡಿದವರನ್ನು ಮರೆಯದೇ ಅವರ ಮಾಡಿದ ಕೆಲಸವನ್ನು ಹೇಳಬೇಕು ಎಂದು ಹೇಳಿ ಈಗಾಗಲೇ ಮರಾಠ ಜನಾಂಗದವರಿಗೆ ಸ್ಮಶಾನ ಜಾಗ ಮತ್ತು ಎರಡು ಎಕರೆ ಜಾಗವನ್ನು ಸಮುದಾಯದವರ ಅಭಿವೃದ್ದಿಗೆ ಮಂಜೂರಾತಿ ಮಾಡುವುದರ ಬಗ್ಗೆ ಸರ್ಕಾರದ ಮಟ್ಟದಲ್ಲಿದ್ದು ತಕ್ಷಣ ಮಂಜೂರಾತಿ ಮಾಡಿಸುವ ಭರವಸೆ ನೀಡಿ ದೇವಸ್ಥಾನಕ್ಕೆ ಹಾಗೂ ಗ್ರಾಮದ ಸಂಪರ್ಕದ ಕೆಲವೇ ರಸ್ತೆಯ ಬಾಕಿ ಉಳಿದಿದೆ ಅದನ್ನು ಅಭಿವೃದ್ದಿ ಪಡಿಸುವುದಾಗಿ ಗ್ರಾಮಸ್ಥರ ಮನವಿಗೆ ಸ್ಪಂದಿಸುವ ಸಂಕಲ್ಪ ಮಾಡಿದರು.

ರಾಮೆಶ್ವರ ಸೇವಾ ಸಮಿತಿ ಅಧ್ಯಕ್ಷರು ಪದಾಧಿಕಾರಿಗಳು ಮತ್ತು ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಎಂ.ಬಿ.ಮಂಜುನಾಥ, ಆರ್.ಟಿ.ಗೋಪಾಲ, ಎನ್.ಸತೀಶ್,ಎಂ.ಸುರೇಶ್‌ಸಿಂಗ್, ಕೃಷ್ಣೋಜಿರಾವ್, ಎ.ಟಿ.ನಾಗರತ್ನ, ನಾಗರತ್ನ ದೇವರಾಜ್ ಸುಧೀಂದ್ರ ಪೂಜಾರಿ, ಪಿ.ಸುಧೀರ್, ರಾಮಚಂದ್ರ ಹರತಾಳು, ಕೆ.ಬಿ.ಹೂವಪ್ಪ, ದೇವೇಂದ್ರಪ್ಪಗೌಡ ನೆವಟೂರು, ಜಾಗದ್ದೆ ಉಮೇಶ್, ಟಿ.ಎಲ್.ಸುಂದರೇಶ್, ಗಣೇಶ್‌ಕೆರೆಹಳ್ಳಿ, ಇನ್ನಿತರ ಗ್ರಾಮಸ್ಥರು ಉಪಸ್ಥಿತರಿದ್ದರು.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!