ಮಲತಾಯಿ ಧೋರಣೆಯಿಂದ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆ ; ಟಿ.ಡಿ. ರಾಜೇಗೌಡ

0
94

ಶೃಂಗೇರಿ: ಮಲತಾಯಿ ಧೋರಣೆಯಿಂದ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗುತ್ತಿದೆ ಎಂದು ಶಾಸಕ ಟಿ.ಡಿ. ರಾಜೇಗೌಡ ಆರೋಪಿಸಿದರು.

ಹೇರೂರು ಗ್ರಾಮ ಪಂಚಾಯಿತಿಯ ಶಾಂತಿಪುರ, ಚಿಮ್ಮನಕೊಡಿಗೆಯ ಮೂಲಕ ಕುಂದೂರು ರಸ್ತೆಯನ್ನು ಸಂಪರ್ಕಿಸುವ ನೂತನ ಸೇತುವೆ ಉದ್ಘಾಟನೆಯ ಬಳಿಕ ಅವರು ಮಾತನಾಡಿದರು.

ಹಿಂದೆ ಸಮ್ಮಿಶ್ರ ಸರಕಾರವಿದ್ದಾಗ ಜಿಲ್ಲೆಗೆ 100 ಕೋಟಿ ರೂ. ಅನುದಾನ ತರಲಾಗಿತ್ತು. ಹಿಂದೆ ತೀರ್ಥಹಳ್ಳಿಯಲ್ಲಿ ಶಾಲಾ ಮಗುವೊಂದು, ವ್ಯವಸ್ಥಿತ ಸೇತುವೆಯಿಲ್ಲದೇ ಕಾಲು ಸಂಕದಲ್ಲಿ ನಡೆದುಕೊಂಡು ಹೋಗುವಾಗ ಬಿದ್ದು ಮೃತಪಟ್ಟಿತ್ತು. ಇಂಥಹಾ ಘಟನೆಗಳನ್ನು ಗಮನದಲ್ಲಿಟ್ಟುಕೊಂಡು ಅಂದು ಈ ಕುರಿತು ಶಾಸನ ಸಭೆಯಲ್ಲಿ ಪ್ರಸ್ಥಾಪಿಸಿದ್ದು, ಗ್ರಾಮೀಣ ಪ್ರದೇಶದ ರಸ್ತೆ ಹಾಗೂ ಸೇತುವೆಗಳನ್ನು ಅಭಿವೃದ್ಧಿಪಡಿಸುವ ಯೋಜನೆಗಳನ್ನು ರೂಪಿಸುವಂತೆ ಚರ್ಚಿಸಲಾಗಿತ್ತು.

ಆ ಅನುದಾನದಲ್ಲಿ ಹಲವೆಡೆ ಅನೇಕ ಕಾಮಗಾರಿಗಳಾಗಿದ್ದು, ಉಳಿದ 12 ಕೋಟಿಗೂ ಹೆಚ್ಚಿನ ಮೊತ್ತದ ಹಣವನ್ನು ಕ್ಷೇತ್ರದ ಶೃಂಗೇರಿ, ನರಸಿಂಹರಾಜಪುರ, ಕೊಪ್ಪ ತಾಲೂಕುಗಳ ಅಗತ್ಯ ಸೇತುವೆಗಳಿಗೆ ಸದ್ವಿನಿಯೋಗ ಮಾಡಿಕೊಳ್ಳಲು ನಿರಾಕರಿಸಲಾಗಿತ್ತು ಎಂದರು.

ಈ ನಿಟ್ಟಿನಲ್ಲಿ 5054 ಗ್ರಾಮ ಬಂಧು ಸೇತುವೆ ಯೋಜನೆಯಡಿ ಸುಮಾರು 40 ಲಕ್ಷ ರೂ ವೆಚ್ಚದಲ್ಲಿ ಶಾಂತಿಪುರದಲ್ಲಿ ಸೇತುವೆ ವ್ಯವಸ್ಥಿತವಾಗಿ ನಿರ್ಮಿಸಿದ್ದು, ಚಿಮ್ಮನಕೊಡಿಗೆ ಮೂಲಕ ಕುಂದೂರು ರಸ್ತೆಯನ್ನು ಸಂಪರ್ಕಿಸುವಲ್ಲಿ ಇದು ಅತ್ಯಂತ ಸಹಕಾರಿಯಾಗಲಿದೆ.

ಜಾಹಿರಾತು

LEAVE A REPLY

Please enter your comment!
Please enter your name here