ಮಲೆನಾಡಿಗೂ ಅಂಟಿದ ಬಾಲ್ಯವಿವಾಹವೆಂಬ ಸಾಮಾಜಿಕ ಪಿಡುಗು ; ಗ್ರಾಪಂ ಸದಸ್ಯರ ಸಹಕಾರದಿಂದಲೇ ನಡೆದ ಬಾಲ್ಯವಿವಾಹ ತಡವಾಗಿ ಬೆಳಕಿಗೆ !!

0
2899

ರಿಪ್ಪನ್‌ಪೇಟೆ : ಹುಂಚ ಸಮೀಪದ ಯಲ್ಲದಕೋಣೆ ಗ್ರಾಮದಲ್ಲಿ ಫೆ.27 ರಂದು ನಡೆದ ವಿವಾಹವು ಬಾಲ್ಯವಿವಾಹವೆಂದು ತಡವಾಗಿ ಬೆಳಕಿಗೆ ಬಂದಿದೆ. ಯಲ್ಲದಕೋಣೆ ಗ್ರಾಮದ ಯುವಕ ರಮೇಶ್ (33) ಎಂಬಾತ ಬಳ್ಳಾರಿ ಜಿಲ್ಲೆ ತಾಲ್ಲೂಕಿನ ಕೆ. ಕರ್ನಾರ್ ಹಟ್ಟಿಯ 16 ವರ್ಷದ ಬಾಲಕಿ ವಿವಾಹವಾಗಿದ್ದಾನೆ.

ವಧುವು ಅಪ್ರಾಪ್ತೆ ಎಂದು ಗೊತ್ತಿದ್ದರೂ ಗ್ರಾಮದ ರಾಘವೇಂದ್ರ, ಶಿವಾನಂದ, ಪ್ರವೀಣ, ಅನಿಲ್, ಶ್ರೀಧರ ಮತ್ತು ಇತರರು ಹುಂಚ ಗ್ರಾಮ ಪಂಚಾಯತ್‌ನ ಸದಸ್ಯರಾದ ಶ್ವೇತಾ ಶಿವಾನಂದ ಸಹಕಾರದಿಂದ ಬಾಲ್ಯ ವಿವಾಹವನ್ನು ನೆರವೇರಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ಘಟನೆ ಬಗ್ಗೆ ಮಾಹಿತಿ ಪಡೆದ ಶಿವಮೊಗ್ಗ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿಗಳು ತನಿಖೆಯನ್ನು ನಡೆಸುತ್ತಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here