ಹೊಸನಗರ: ಭಾರತ ದೇಶದಲ್ಲಿ ಕೊರೊನಾದ 2ನೇ ಅಲೆ ಅಬ್ಬರವಾಗಿ ಹಬ್ಬುತ್ತಿದೆ. ಅದರಲ್ಲಿಯೂ ಬೆಂಗಳೂರಿನಲ್ಲಿ ದಿನಕ್ಕೆ 10ಸಾವಿರಕ್ಕಿಂತಲೂ ಹೆಚ್ಚು ವೈರಸ್ ಕೇಸುಗಳು ಬರುತ್ತಿದೆ ಸೋಂಕು ಹೆಚ್ಚುತ್ತಿದೆ ಆದರೆ ಶಿವಮೊಗ್ಗ ಜಿಲ್ಲೆಯಲ್ಲಿ ಕೊರೊನಾ ವೈರಸ್ ಕೇಸು ಕಡಿಮೆಯಿದ್ದು ಕೆಲಸಕ್ಕಾಗಿ ಬೆಂಗಳೂರಿಗೆ ಹೋದವರು ಬೆಂಗಳೂರಿನಿಂದ ಹಳ್ಳಿ-ಹಳ್ಳಿಗಳ ಕಡೆಗೆ ಮುಖ ಮಾಡಿದ್ದಾರೆ ಇದರಿಂದ ಹಳ್ಳಿ-ಹಳ್ಳಿಗಳ ಕಡೆಗೂ ಕೊರೊನಾ ವೈರಸ್ಸ್ ಹರಡುವುದರಲ್ಲಿ ಅನುಮಾನವಿಲ್ಲ. ಆದ್ದರಿಂದ ರಾಜ್ಯ ಸರ್ಕಾರ ಹಾಗೂ ಉನ್ನತ ಸರ್ಕಾರಿ ಅಧಿಕಾರಿಗಳು ಸ್ವಲ್ಪ ದಿನಗಳ ಮಟ್ಟಿಗೆ ಬೆಂಗಳೂರಿನಿಂದ ಮಲೆನಾಡು ಪ್ರದೇಶವಾದ ಶಿವಮೊಗ್ಗ ಜಿಲ್ಲೆಯ ತಾಲ್ಲೂಕುಗಳಿಗೆ ಬರುವವರನ್ನು ತಡೆಯಬೇಕು ಹಾಗೂ ಕೊರೊನಾ ಹಳ್ಳಿ-ಹಳ್ಳಿಗಳಿಗೆ ಹಬ್ಬುವುದನ್ನು ನಿಲ್ಲಿಸಬೇಕೆಂದು ಇಲ್ಲಿನ ತಾಲ್ಲೂಕು ಪಂಚಾಯಿತಿ ಸದಸ್ಯ ಚಂದ್ರಮೌಳಿಗೌಡರವರು ಸರ್ಕಾರಕ್ಕೆ ಮನವಿ ಮಡಿದ್ದಾರೆ.
Related
Evarige corena bandre yelige hogthare anthe ?