ಮಲೆನಾಡಿನಲ್ಲಿ ಉತ್ತಮವಾಗಿ ಸುರಿಯುತ್ತಿರುವ ಉತ್ತರಾ ಮಳೆ: ಖೈರಗುಂದದಲ್ಲಿ ರಾಜ್ಯದಲ್ಲೇ ಅತ್ಯಧಿಕ ಮಳೆ! ಪ್ರವಾಸಿಗರ ಕಣ್ಮನ ತಣಿಸುತ್ತಿರುವ ಜೋಗ ಜಲಪಾತ

0
669

ಹೊಸನಗರ : ಮಲೆನಾಡಿನ ತವರೂರಾದ ಹೊಸನಗರದಲ್ಲಿ ಬಿಟ್ಟೂ ಬಿಡದೆ ಮಳೆ ಬರುತ್ತಿದೆ ಪುಬ್ಬ ಮಳೆ ಉತ್ತಮವಾಗಿ ಬಂದಿದೆ. ಈಗ ನಿನ್ನೆಯಿಂದ ಉತ್ತರಾ ಮಳೆಯು ಉತ್ತಮವಾಗಿ ಬರುತ್ತಿದ್ದು ಮಂಗಳವಾರ ಬೆಳಗ್ಗೆ 8 ಗಂಟೆಗೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ತಾಲೂಕಿನ ಖೈರಗುಂದದಲ್ಲಿ ರಾಜ್ಯದಲ್ಲೇ ಅತ್ಯಧಿಕ 201 ಸೆಂ.ಮೀ. ಮಳೆ ಸುರಿದಿದೆ.

ಉಳಿದಂತೆ ಹೊಸನಗರ 167.8, ಹುಲಿಕಲ್ 136, ಮಾಸ್ತಿಕಟ್ಟೆ 134, ಯಡೂರು 125, ಮಾಣಿ 110, ಚಕ್ರಾನಗರ 88, ಬಿದನೂರು-ನಗರ 62, ಜೋಗ ಜಲಾನಯನ ಪ್ರದೇಶ 51.5 ಮತ್ತು ಲಿಂಗನಮಕ್ಕಿಯಲ್ಲಿ 37.2 ಮಿಲಿ ಮೀಟರ್ ಮಳೆ ದಾಖಲಾಗಿದೆ.

1819 ಅಡಿ ಗರಿಷ್ಠ ಮಟ್ಟ ಹೊಂದಿದ ಲಿಂಗನಮಕ್ಕಿ ಜಲಾಶಯ ನೀರಿನ ಮಟ್ಟ ಇಂದು ಬೆಳಗ್ಗೆ 8:00 ಗಂಟೆಗೆ 1815.9 ಅಡಿ ತಲುಪಿದ್ದು ಕಳೆದ ವರ್ಷ ಇದೇ ಅವಧಿಗೆ 1809.25 ಅಡಿ ದಾಖಲಾಗಿದೆ.

ತಾಲೂಕಿನ ವಿವಿಧ ಜಲಾಶಯಗಳ ಇಂದಿನ ನೀರಿನ ಮಟ್ಟ:

ಮಾಣಿ ಡ್ಯಾಂ 587.62 ಮೀ.

ಪಿಕಪ್ ಡ್ಯಾಂ 562.84 ಮೀ.

ಚಕ್ರಾ ಡ್ಯಾಂ 570.20 ಮೀ.

ಸಾವೆಹಕ್ಲು ಡ್ಯಾಂ 578.24 ಮೀ.

ಜಾಹಿರಾತು

LEAVE A REPLY

Please enter your comment!
Please enter your name here