ಮಲೆನಾಡಿನಲ್ಲಿ ಕ್ಷೀಣಿಸಿದ ಮುಂಗಾರು ಮಳೆ ; ಬಿತ್ತನೆ ಕಾರ್ಯ ಕುಂಠಿತ ! ರಸಗೊಬ್ಬರ, ಬಿತ್ತನೆ ಬೀಜ ದಾಸ್ತಾನು

0
232

ರಿಪ್ಪನ್‌ಪೇಟೆ: ಮಲೆನಾಡಿನಲ್ಲಿ ಜೂನ್ 10 ರಿಂದಲೇ ಮಳೆಗಾಲ ಆರಂಭವಾಗಬೇಕಾಗಿದ್ದು ಮಳೆಯ ಮುನ್ಸೂಚನೆ ಕಾಣುತ್ತಿಲ್ಲ ಎಂದು ರೈತರು ಮುಗಿಲು ನೋಡವ ಸ್ಥಿತಿ ನಿರ್ಮಾಣವಾಗಿದೆ.

ಮುಂಗಾರು ಮಳೆ ಆರಂಭವಾಗಿ ಮಲೆನಾಡಿನ ವ್ಯಾಪ್ತಿಯಲ್ಲಿ ಮೆಕ್ಕೆಜೋಳ ಮತ್ತು ಭತ್ತ ಬಿತ್ತನೆಯ ಕೃಷಿ ಚಟುವಟಿಕೆ ಭರದಿಂದ ಸಾಗಬೇಕಾಗಿದ್ದು ಮಳೆ ಇಲ್ಲದೆ ರೈತರಲ್ಲಿ ಆತಂಕಕ್ಕೆ ಎಡೆ ಮಾಡಿದಂತಾಗಿದೆ.

ಇಲ್ಲಿನ ಹೋಬಳಿಯ ರೈತ ಸಂಪರ್ಕ ಕೇಂದ್ರ ವ್ಯಾಪ್ತಿಯಲ್ಲಿ 13 ಸಾವಿರ ಹೆಕ್ಟರ್ ಕೃಷಿ ಭೂ ಪ್ರದೇಶ ಹೊಂದಿದ್ದು 2300 ಹೆಕ್ಟರ್ ಭೂ ಪ್ರದೇಶದಲ್ಲಿ ಭತ್ತ ಬೆಳೆಯನ್ನು ಹಾಕಲಾಗುತ್ತದೆ. 450 ಹೆಕ್ಟರ್ ಭೂ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲಾಗುತ್ತಿದ್ದು ಕೊಳವೆ ಬಾವಿಯ ನೀರು ಹರಿಸಿ ಕೇವಲ 10 ಹೆಕ್ಟರ್ ಭೂ ಪ್ರದೇಶದಲ್ಲಿ ಮೊಕ್ಕೆಜೋಳ ಬಿತ್ತನೆ ಮಾಡಲಾಗಿದೆ. ಬೀಜ ಬಿತ್ತನೆಗೆ ಸಕಾಲವಾಗಿದ್ದು ಉಳಿದಂತೆ ಮಳೆಯನ್ನಾದರಿ 440 ಹೆಕ್ಟರ್ ಪ್ರದೇಶದಲ್ಲಿ ಇನ್ನೂ ಬಿತ್ತನೆ ಮಾಡಬೇಕಾಗಿದೆ ಎಂದು ರೈತ ಸಂಪರ್ಕ ಕೇಂದ್ರದ ಸಹಾಯಕ ಕೃಷಿ ಅಧಿಕಾರಿ ಶಾಂತಮೂರ್ತಿ ಮಾಹಿತಿ ನೀಡಿದರು.

ರೈತ ಸಂಪರ್ಕ ಕೇಂದ್ರದಲ್ಲಿ ‘ಮಲ್ನಾಡ್ ಟೈಮ್ಸ್’ಜೊತೆ ಮಾತನಾಡಿ, ಈಗಾಗಲೇ ರೈತ ಸಂಪರ್ಕ ಕೇಂದ್ರದಲ್ಲಿ ಮಲೆನಾಡಿನ ಹವಾಮಾನಕ್ಕೆ ಅನುಗುಣವಾಗುವಂತಹ ಭತ್ತದ ತಳಿಗಳಾದ 1001 ಭತ್ತ 140 ಕ್ವಿಂಟಾಲ್, ಜಯ 10 ಕ್ವಿಂಟಾಲ್, ಜ್ಯೋತಿ 10 ಕ್ವಿಂಟಾಲ್, ಆರ್.ಎನ್.ಆರ್. 50 ಕ್ವಿಂಟಾಲ್, ಜೆ.ಜಿ.ಎಲ್. 30 ಕ್ವಿಂಟಾಲ್, ಅಭಿಲಾಷಾ 25 ಕ್ವಿಂಟಾಲ್, ಮೆಕ್ಕೆಜೋಳದ ತಳಿಗಳಾದ ಕಾವೇರಿ 50 ಕ್ವಿಂಟಾಲ್, ಸಿ.ಪಿ 30 ಕ್ವಿಂಟಾಲ್ ಬಿತ್ತನೆ ಬೀಜವನ್ನು ರೈತ ಸಂಪರ್ಕ ಕೆಂದ್ರದಲ್ಲಿ ದಾಸ್ತಾನು ಮಾಡಲಾಗಿದ್ದು ರೈತರು ಅಧಾರ್ ಕಾರ್ಡ್‌ನೊಂದಿಗೆ ಸಂಪರ್ಕ ಕೇಂದ್ರಕ್ಕೆ ಬಂದು ಬೀತ್ತನೆ ಬೀಜವನ್ನು ಖರೀದಿಸುವಂತೆ ಕೋರಿದ್ದಾರೆ.

ಇದರೊಂದಿಗೆ ಡಿಎಪಿ 13 ಟನ್, ಯೂರಿಯಾ 62 ಟನ್, 10-20-26 29 ಟನ್, ಸುಫಲಾ 19 ಗೊಬ್ಬರವನ್ನು ಸರ್ಕಾರದ ರಿಯಾಯಿತಿ ದರದಲ್ಲಿ ನೀಡಲಾಗುತ್ತದೆ. ಈ ಸೌಲಭ್ಯದ ಸದುಪಯೋಗವನ್ನು ಪಡೆದುಕೊಳ್ಳುವಂತೆ ರೈತರಿಗೆ ಮನವಿ ಮಾಡಿದರು.

ಕೆರೆಹಳ್ಳಿ ಹೋಬಳಿಯ ಕೆಂಚನಾಲ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಸರೂರು, ಆಲವಳ್ಳಿ, ಕೆಂಚನಾಲ ಗ್ರಾಮಗಳಲ್ಲಿ ಮಾತ್ರ ಮೆಕ್ಕಜೋಳ ಬಿತ್ತನೆಯನ್ನು ಮಾಡಲಾಗಿದೆ ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ರೈತ ಸಂಪರ್ಕ ಕೇಂದ್ರದ ಸಿಬ್ಬಂದಿಗಳಾದ ರಾಜೇಶ್, ಮಂಜುನಾಥ ಇನ್ನಿತರ ಸಿಬ್ಬಂದಿ ವರ್ಗ ಹಾಜರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here