ಮಲೆನಾಡಿನಲ್ಲಿ ನಡೆದ ಹೀನಕೃತ್ಯ ; ಬೆತ್ತಲೆ ವಿಡಿಯೋ ತೆಗೆದು ವರದಕ್ಷಿಣೆಗಾಗಿ ಪೀಡಿಸುತ್ತಿದ್ದ ಪತಿರಾಯನ ವಿರುದ್ಧ ಠಾಣೆ ಮೆಟ್ಟಿಲೇರಿದ ಸಂತ್ರಸ್ತೆ ಪತ್ನಿ !

0
2734

ಹೊಸನಗರ : ಮಲೆನಾಡಿನ ಹೆಬ್ಬಾಗಿಲಾಗಿರುವ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಂಚ ಹೋಬಳಿಯ ಗ್ರಾಮವೊಂದರ ಮಹಿಳೆಯೊಬ್ಬರು ತನ್ನ ಪತಿ ವರದಕ್ಷಿಣೆಗಾಗಿ ಬೆತ್ತಲೆ ವಿಡಿಯೋ ತೆಗೆದು ಹೀನಕೃತ್ಯ ಎಸಗಿ ಪೀಡಿಸುತ್ತಿದ್ದರೆ ಎಂದು ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅದರ ಡಿಟೇಲ್ಸ್ ಸ್ಟೋರಿ ಇಲ್ಲಿದೆ‌.

ಸಂತ್ರಸ್ತೆ ದಿನಾಂಕ:22-05-2021 ರಂದು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪೇಟೆ, ವೆಲ್ ಕಂ ಗೇಟ್ ನಿವಾಸಿ ಶೌಕತ್ ಖಾನ್ ರವರ ಮಗನಾದ ಸಲ್ಮಾನ್ ರವರನ್ನು ವಿವಾಹವಾಗಿದ್ದು ಮಾತುಕತೆಯಲ್ಲಿ 150 ಗ್ರಾಂ ಬಂಗಾರ ಮತ್ತು 04 ಲಕ್ಷ ರೂಪಾಯಿ ವರದಕ್ಷಿಣೆಯನ್ನು ಕೇಳಿದ್ದು ಸತ್ತಾರ್ ಸಾಬ್ ರವರ ಮಧ್ಯಸ್ಥಿಕೆಯಲಿ 90 ಗ್ರಾಂ ಬಂಗಾರ ಮತ್ತು 3 ಲಕ್ಷ ವರದಕ್ಷಿಣೆಯನ್ನು ಕೊಡಲು ಸಂತ್ರಸ್ತೆಯ ತಂದೆಯವರು ಒಪ್ಪಿಕೊಂಡಿದ್ದು, ಅದರಂತೆ ಮದುವೆಗೆ ಮುಂಚೆ 2 ಲಕ್ಷ ಹಣವನ್ನು ಹಾಗೂ 4 ಗ್ರಾಂ ಬಂಗಾರದ ಉಂಗುರವನ್ನು ಸತ್ತಾರ್ ಸಾಬ್ ರವರೊಂದಿಗೆ ಹೋಗಿ ಕೊಟ್ಟು ಬಂದಿರುತ್ತಾರೆ. ನಂತರ ದಿನಾಂಕ 22/05/2022 ರಂದು ಮದುವೆ ದಿನ 90 ಗ್ರಾಂ ತೂಕದ ಬಂಗಾರವನ್ನು ಸಂತ್ರಸ್ತೆಯ ಮೈ ಮೇಲೆ ಹಾಕಿ ಗೃಹೋಪಯೋಗಿ ಉಪಕರಣಗಳನ್ನು ಕೊಡಲಾಗಿತ್ತು. ಆದರೆ ಸಂತ್ರಸ್ತೆ ತಂದೆಯವರಿಗೆ ಉಳಿದ ಒಂದು ಲಕ್ಷ ರೂಪಾಯಿಯನ್ನು ಕೊಡಲು ಸಾಧ್ಯವಾಗಿರುವುದಿಲ್ಲ. ಆ ಸಮಯದಲಿ, ಮದುವೆ ಮನೆಯಲ್ಲಿ ಈ ವಿಚಾರವಾಗಿ ಗಲಾಟೆ ನಡೆದಿದ್ದು ಇನ್ನು ಒಂದು ವರ್ಷದಲ್ಲಿ ಕೊಡುವುದಾಗಿ ಸಂಧಾನ ಮಾಡಿಕೊಂಡಿದ್ದರಿಂದ ಮದುವೆಯಾಗಿತ್ತು. ನಂತರ ಸಂತ್ರಸ್ತೆ ಗಂಡನ ಮನೆಗೆ ಹೋಗಿ ಜೀವನ ಸಾಗಿಸಿದ್ದು ಸುಮಾರು ಒಂದು ತಿಂಗಳ ನಂತರ ಈಕೆಯ ಅತ್ತೆ ಮಾವ ರವರು ವರದಕ್ಷಿಣೆ ಹಣವನ್ನು ತಂದು ಕೊಡುವಂತೆ ಪೀಡಿಸಲು ಪ್ರಾರಂಭಿಸಿದರು, ಸಂತ್ರಸ್ತೆ ಗಂಡನೂ ಕೂಡ ಆಗಾಗೆ ಹಣ ತರುವಂತೆ ಪೀಡಿಸಿದ್ದು ಸಂತ್ರಸ್ತೆ ಸ್ವಲ್ಪ ಸಮಯ ಕೇಳಿರುತ್ತಾರೆ ನಂತರ ಗಂಡನ ಮನೆಗೆ ಬಂದು ಹೋಗುತಿದ್ದ ಗಂಡನ ತಂಗಿಯಾದ ಶೃಂಗೇರಿಯ ಕಿಗ್ಗಾ ವಾಸಿಯಾದ ನಾದಿನಿ ಸಹ ವರದಕ್ಷಿಣೆ ಹಣ ತರುವಂತೆ ಪೀಡಿಸಿ ಹಲ್ಲೆ ಮಾಡಿರುತ್ತಾರೆ. ದೈಹಿಕವಾಗಿ ಮಾನಸಿಕವಾಗಿ ನಿರಂತರವಾಗಿ ಕಿರುಕುಳ ನೀಡುತ್ತಿದ್ದು ಸಂತ್ರಸ್ತೆ ಗಂಡನಿಗೆ ಬೇರೆ ಹುಡುಗಿಯರೊಂದಿಗೆ ಅನೈತಿಕ ಸಂಬಂಧವಿರುವುದಾಗಿಯೂ ನೀನು ನಿನ್ನ ಬೆತ್ತಲೆ ವಿಡಿಯೋವನ್ನು ಬೇರೆಯವರಿಗೆ ಕಳುಹಿಸು ಇಲ್ಲವಾದರೆ ನನ್ನ ಮೊಬೈಲ್ ನಲ್ಲಿರುವ ನಿನ್ನ ಬೆತ್ತಲೆ ವಿಡಿಯೋವನ್ನು ಬೇರೆಯವರಿಗೆ ಕಳುಹಿಸುವುದಾಗಿ ಹೆದರಿಸುತ್ತಿದ್ದು, ಕಿರುಕುಳ ಜಾಸ್ತಿಯಾಗಿದ್ದರಿಂದ ತವರು ಮನೆಗೆ ಹೋಗುವುದಾಗಿ ಹೇಳಿದಾಗ, ವರದಕ್ಷಿಣೆ ತೆಗೆದುಕೊಂಡು ಬರುವುವಾದರೆ ಮಾತ್ರ ನಮ್ಮ ಮನೆಗೆ ಬರಲಿ ಹಾಗೆ ಬಂದರೆ ನಿನ್ನನ್ನು ಬಿಡುವುದಿಲ್ಲ ಎಂದು ಅತ್ತೆ ಮಾವ ಬೆದರಿಕೆ ಹಾಕಿರುತ್ತಾರೆ.

ದಿನಾಂಕ: 25/12/2021 ರಂದು ಸಂತ್ರಸ್ಥೆ ಗಂಡ ತವರು ಮನೆಗೆ ಬಿಡಲು ಬಂದಾಗ ಮನೆಯಲ್ಲಿ ನಡೆದ ವಿಚಾರವನ್ನು ನಿನ್ನ ತಂದೆ ತಾಯಿವರಿಗೆ ಹೇಳಿದರೆ ನಿನ್ನನ್ನು ಜೀವ ಸಹಿತ ಉಳಿಸುವುದಿಲ್ಲ ಎಂದು ಅವರ ಗಂಡ ಸಲ್ಮಾನ್ ರವರು ಜೀವಬೆದರಿಕೆ ಹಾಕಿರುತ್ತಾರೆ. ಅದೇ ದಿನ ತವರು ಮನೆ ಇರುವ ಹುಂಚ ಗ್ರಾಮಕ್ಕೆ ಬಂದು ಸಂತ್ರಸ್ತೆ ಗಂಡ ತಲಾಖ್ ನೀಡಿ ಹೋಗಿರುತ್ತಾರೆ.

ದಿನಾಂಕ:02-01-2022 ರಂದು ಸಂತ್ರಸ್ತೆಗೆ ಗಂಡ ಸಲ್ಮಾನ್ ಕರೆ ಮಾಡಿ ನೀನು ಮನೆಗೆ ಬರಬೇಕೆಂದಾಗ 2 ದಿನ ಬಿಟ್ಟು ಬರುವುದಾಗಿ ಹೇಳಿದಾಗ ಸಲ್ಮಾನ್ ನು ಹಾಗಾದರೆ ನೀನು ನಿನ್ನ ನಗ್ನ ವಿಡಿಯೋವನ್ನು ಸ್ನಾಪ್ ಚಾಟ್ ಅಪ್ ಲೋಡ್ ಮಾಡುವುದಾದರೆ ಮಾತ್ರ ನಿನ್ನನ್ನು ತವರು ಮನೆಯಲ್ಲಿ ಬಿಡುವುದಾಗಿ ಹೇಳಿದಾಗ ಸಂತ್ರಸ್ತೆ ಒಪ್ಪದೇ ಇದ್ದಾಗ ಅವಾಚ್ಯವಾಗಿ ಬೇ…. ನನ್ನ ಮಾತನ್ನು ನಡೆಸುವುದಕ್ಕೆ ಆಗಲ್ಲವಾ ಎಂದು ಬೈಯುತ್ತಾ ಬೈಯ್ದು ಕರೆ ಕಟ್ ಮಾಡಿರುತ್ತಾರೆ.

ವರದಕ್ಷಿಣೆ ತರುವಂತೆ ದೈಹಿಕವಾಗಿ ಮಾನಸಿಕವಾಗಿ ಹಿಂಸೆ ನೀಡಿ ಅವಾಚ್ಯಾಗಿ ಬೈಯ್ದು ಜೀವ ಬೆದರಿಕೆ ಹಾಕಿ ತಲಾಕ್ ನೀಡಿದ ಗಂಡ, ನಾದಿನಿ, ಅತ್ತೆ, ಮಾವ ಶೌಕತ್ ಖಾನ್ ರವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಂತ್ರಸ್ತೆ ದೂರು ನೀಡಿದ್ದಾರೆ.

ಜಗತ್ತನ್ನೇ ತಲ್ಲಣಗೊಳಿಸಿದ ಕೊರೊನಾದಂತಹ ಸಂಕಷ್ಟದ ಕಾಲದಲ್ಲಿ ತಮ್ಮ ಮಗಳು ಸುಖವಾಗಿರಲೆಂದು ಸಾಲಸೋಲ ಮಾಡಿ ಒಳ್ಳೆಯ ರೀತಿಯಲ್ಲಿ ಮದುವೆ ಮಾಡಿಕೊಟ್ಟಿದ್ದರು ಸಹ ವರದಕ್ಷಿಣೆ ಎಂಬ ಭೂತ ವಕ್ಕರಿಸಿ ಕೊಂಡಿರುವುದು ಅಮಾಯಕ ಹೆಣ್ಣುಮಕ್ಕಳ ಬದುಕಿಗೆ ಸಂಕಷ್ಟವಾಗಿದೆ. ಕಾನೂನು ಮತ್ತು ಪೊಲೀಸ್ ವ್ಯವಸ್ಥೆ ವರದಕ್ಷಣೆ ಪೀಡಕರ ವಿರುದ್ಧ ಕಠಿಣ ನಿಲುವನ್ನು ತೆಗೆದುಕೊಳ್ಳಲಿ ಎಂಬುದೇ ‘ಮಲ್ನಾಡ್ ಟೈಮ್ಸ್’ ಆಶಯವಾಗಿದೆ.

ಜಾಹಿರಾತು

LEAVE A REPLY

Please enter your comment!
Please enter your name here