ಮಲೆನಾಡಿನ ಅಡಿಕೆ ಹಾಳೆ ಟೋಪಿ ಮಹತ್ವ ಅಂತರ್ ರಾಜ್ಯದ ವಿದ್ಯಾರ್ಥಿಗಳಿಗೆ ತಿಳಿಸಿದ ಪತ್ರಕರ್ತ ಪುನೀತ್ ಬೆಳ್ಳೂರು

0
1744

ಶಿವಮೊಗ್ಗ: ತಲೆಯ ಮೇರೆ ಭಾರ ಹೊರಲು ಅಡಿಕೆ ಮರದ ಹಾಳೆಯಿಂದ ಮಾಡುವ ಟೋಪಿ (ಮಂಡಾಳೆ)ಗೆ ಹಿಂದೊಮ್ಮೆ ಎಲ್ಲಿಲ್ಲದ ಬೇಡಿಕೆ. ಭಾರಿ ಗಟ್ಟಿಯಾಗಿಯೂ, ಸುಲಭದಲ್ಲಿ ದೊರಕಬಹುದಾದ ಹಾಗೂ ಹೆಚ್ಚು ಬಾಳಿಕೆ ಬರುವ ಈ ಟೋಪಿ ಸಿಗುವುದೇ ಈಗ ಅಪರೂಪ. ಹಿಂದೊಮ್ಮೆ ಎಲ್ಲೆಂದರಲ್ಲಿ ಸಿಗುತ್ತಿತ್ತು ಆದರೆ ಈಗಿಲ್ಲ, ಮಲೆನಾಡಿನ ಭಾಗ ಅಂದರೆ ಶಿವಮೊಗ್ಗ, ಕರಾವಳಿ ಭಾಗದ ಕೂಲಿ ಕೆಲಸಗಾರರು, ಶ್ರಮಜೀವಿಗಳು, ಮೀನುಗಾರರು ತಮಗೆ ಬೇಕಾದಾಗ ತಾವೇ ತಯಾರಿಸಿಕೊಂಡು ಬಳಸುತ್ತಿದ್ದ ಅಡಿಕೆ ಹಾಳೆಯ ಟೋಪಿ.

ಹೀಗೆ ನಾ, ಹೊಸನಗರದ ನಗರ ಕೋಟೆಯಲ್ಲಿ ಕಾರ್ಯಕ್ರಮಕ್ಕೆ ಹೋದಾಗ ಅಲ್ಲಿನ ಹೆಣ್ಣು ಮಕ್ಕಳು ಮಲೆನಾಡಿನ ಶೈಲಿಯಲ್ಲಿ ಉಡುಗೆ ತೊಟ್ಟು ಬಂದಿದ್ದು ವಿಶೇಷವಾಗಿತ್ತು. ಹಾಗೆ ಅವರ ಬಳಿ ಹಾಳೆ ಟೋಪಿ ಕೇಳಿದಾಗ ತಕ್ಷಣ ನೀಡಿದ್ರು, ಅಂತರ್ ರಾಜ್ಯದಿಂದ ಬಂದ ವಿದ್ಯಾರ್ಥಿಗಳಿಗೆ ನಮ್ಮ ಮಲೆನಾಡಿನ ಸಂಸ್ಕೃತಿ ತೋರುವ ದೃಷ್ಟಿಯಿಂದ ಶಿವಮೊಗ್ಗದಲ್ಲಿ ನಡೆದ ರಾಷ್ಟ್ರೀಯ ಭಾವೈಕ್ಯ ಶಿಬಿರದ ದೀಪೋತ್ಸವ ಕಾರ್ಯಕ್ರಮದಲ್ಲಿ ಬಳಸಿದೆ. ಹಾಗೆ ಹೊರ ರಾಜ್ಯದ ವಿದ್ಯಾರ್ಥಿಗಳು ನನ್ನ ಬಳಿ ಬಂದು ಟೋಪಿ ಬಗ್ಗೆ ಕೇಳಿದಾಗ ಟೋಪಿಯ ವಿಶೇಷತೆ ಹಂಚಿಕೊಂಡೆ.

ನಂತರ ಆಂಧ್ರಪ್ರದೇಶದ ವರಕುಮಾರ ಎಂಬ ಒಬ್ಬ ವಿದ್ಯಾರ್ಥಿ, ಸರ್ ಶಿವಮೊಗ್ಗದ ನೆನಪಿಗೆ ಇದನ್ನ ನನಗೆ ಕೊಡುವಿರಾ? ಎಂದು ಕೇಳಿದಾಗ ತುಂಬಾ ಸಂತೋಷವಾಯಿತು ಹಾಗೆ ನಾನು ಕೂಡ ಹಾಳೆ ಟೋಪಿಯನ್ನು ಬೇರೊಂದು ರಾಜ್ಯದ ವಿದ್ಯಾರ್ಥಿಗೆ ನೀಡಿದ ಖುಷಿಯಾಯಿತು. ಹಾಗೆ ತುಂಬಾ ಜನ ಕೇಳಿದಾಗ ಎಲ್ಲಾರಿಗೂ ನೀಡಲು ಸಾಧ್ಯವಾಗಲಿಲ್ಲ ಸ್ವಲ್ಪ ಬೇಸರವಾಯಿತು.

ಬರಹ : ಪುನೀತ್ ಬೆಳ್ಳೂರು.
ಜಾಹಿರಾತು

LEAVE A REPLY

Please enter your comment!
Please enter your name here