23.2 C
Shimoga
Sunday, November 27, 2022

ಮಲೆನಾಡಿನ ಗ್ರಾಮೀಣ ಭಾಗದಲ್ಲಿ ಜಾನುವಾರುಗಳಿಗೆ ವೇಗವಾಗಿ ಹರಡುತ್ತಿರುವ ಚರ್ಮಗಂಟು ರೋಗ LUMPY SKIN DISEAS


ರಿಪ್ಪನ್‌ಪೇಟೆ : ಮಲೆನಾಡಿನ ಹೊಸನಗರ ತಾಲೂಕಿನ ಕೆಲವು ಗ್ರಾಮಗಳಲ್ಲಿ ಚರ್ಮಗಂಟು ರೋಗ ತೀವ್ರವಾಗಿ ಹರಡುತ್ತಿದ್ದು ಹುಂಚ ಹೋಬಳಿಯ ಅಮೃತ (ಗರ್ತಿಕೆರೆ) ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೆಲವು ಹಸುಗಳಿಗೆ ತಗುಲಿದ್ದು ಪಶು ಸಾಕಾಣಿಕೆದಾರರು ತೀವ್ರ ಸಂಕಷ್ಟದಲ್ಲಿದ್ದಾರೆ. ಆದರೆ ಯಾವುದೇ ಪ್ರಾಣ ಹಾನಿ ಆಗಿರುವುದಿಲ್ಲ.

ಹುಂಚ ಗ್ರಾಮದ ರೈತರು ರೋಗನಿರೋಧಕ ಶಕ್ತಿ ಹೆಚ್ಚಿಸುವ ಹಾಗೂ ಜಂತು ನಾಶಕ ಔಷಧಿಯನ್ನು ಪಶು ಆಸ್ಪತ್ರೆಯಿಂದ ಉಚಿತವಾಗಿ ತೆಗೆದುಕೊಂಡು ತಮ್ಮ ತಮ್ಮ ಜಾನುವಾರುಗಳಿಗೆ ಹಾಕಿಕೊಂಡಿರುತ್ತಾರೆ. ಇದರಿಂದ ಅಲ್ಪ ಮಟ್ಟಿಗೆ ಈ ಭಾಗದಲ್ಲಿ ಸಹಾಯವಾಗಿರಬಹುದೆಂದು ಅಂದಾಜಿಸಲಾಗಿದೆ ಎಂದು ಪಶುವೈದ್ಯ ಅಧಿಕಾರಿ ಡಾ. ಪಣಿರಾಜ್ ತಿಳಿಸಿದರು.


ಹಸುಗಳಿಗೆ ಬಂದಿರುವ ಚರ್ಮಗಂಟು ರೋಗದ ನಿವಾರಣೆಗೆ ರೈತರು ಪಶು ಆಸ್ಪತ್ರೆಯಿಂದ ಔಷಧಗಳನ್ನು ಪಡೆದು ತಮ್ಮ ಜಾನುವಾರುಗಳನ್ನು ರಕ್ಷಿಸಿಕೊಳ್ಳಲು ಹುಂಚ ಹೋಬಳಿಯ ಪಶು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!