ಮಲೆನಾಡಿನ ಸಂಸ್ಕೃತಿ ಸಾಹಿತ್ಯ ರಚನೆಗೆ ಪ್ರೇರಣೆಯಾಗಿದೆ ; ವೈ.ಎಸ್. ಪ್ರೇಮನಾಥ್

0
383

ರಿಪ್ಪನ್‌ಪೇಟೆ : ಮಲೆನಾಡಿನ ಜನಜೀವನದ ಸಂಸ್ಕೃತಿ ಸಾಹಿತಿಗಳ ಸಾಹಿತ್ಯ ರಚನೆಗೆ ಪ್ರೇರಣೆಯಾಗಿದೆ ಎಂದು ವಿಶ್ರಾಂತ ಪ್ರಾಂಶುಪಾಲ ವೈ.ಎಸ್.ಪ್ರೇಮನಾಥ್ ತಿಳಿಸಿದರು.

ಅವರು ಶುಕ್ರವಾರ ರಿಪ್ಪನ್‌ಪೇಟೆಯ ಸರ್ಕಾರಿ ಪ್ರೌಢಶಾಲೆ ಸಭಾಂಗಣದಲ್ಲಿ ನಡೆದ ಕೀಳಂಬಿ ಕೆ.ಆರ್. ಸುಬ್ಬರಾವ್ ದತ್ತಿನಿಧಿ ಕಾರ್ಯಕ್ರಮದಲ್ಲಿ “ಮಲೆನಾಡ ಸಂಸ್ಕೃತಿ ಮತ್ತು ಸಾಹಿತ್ಯ” ವಿಷಯ ಕುರಿತು ಮಾಡಿದ ಉಪನ್ಯಾಸ ನೀಡಿ, ಅನೇಕ ವಿಚಾರಗಳ ಹೋರಾಟಗಳ ಬಗ್ಗೆ ಪ್ರೇರಣೆಯಾಗಿರುವ ಮಲೆನಾಡು, ಸಾಹಿತ್ಯದಲ್ಲಿ ಸಾಂಸ್ಕೃತಿಕವಾಗಿ ತನ್ನದೇ ವೈಶಿಷ್ಟ್ಯ ಉಳಿಸಿಕೊಂಡಿದೆ ಎಂದು ಹೇಳಿದರು.

ನಂತರ ನಡೆದ ದಿ.ಮಂಜಮ್ಮ ಪಟೇಲ್ ಗರುಡಪ್ಪ ಗೌಡ ದತ್ತಿ ಉಪನ್ಯಾಸದಲ್ಲಿ “ಕನ್ನಡ ಭಾಷೆ ಮತ್ತು ವೈಶಿಷ್ಟಗಳು” ವಿಷಯ ಕುರಿತು ಹೊಸನಗರ ತಾಲೂಕು ಕಸಾಪ ಮಾಜಿ ಅಧ್ಯಕ್ಷ ಹಾಗೂ ಉಪಪ್ರಾಂಶುಪಾಲರಾದ ಕೆಸಿನಮನೆ ರತ್ನಾಕರ್ ಮಾತನಾಡುತ್ತಾ, ಕನ್ನಡ ಭಾಷೆ ಪ್ರಾಚೀನ ಭಾಷೆಯಾಗಿದ್ದು, ತನ್ನದೇ ವೈಶಿಷ್ಟತೆಯನ್ನು ಹೊಂದಿರುವುದನ್ನು ಬಿಡಿಬಿಡಿಯಾಗಿ ಹೇಳಿದರು.

ಜಗತ್ತಿನಲ್ಲಿ ಒಂದು ಭಾಷೆ ತನ್ನ ವೈವಿಧ್ಯತೆಯನ್ನು ಮೆರೆಯಬೇಕಾದರೆ ಅದಕ್ಕೆ ಅನೇಕ ರೀತಿಯ ಭಾಷಾ ವೈವಿಧ್ಯತೆ ಹೊಂದಿರಬೇಕು. ಆ ಎಲ್ಲಾ ಅರ್ಹತೆಗಳನ್ನು ಮೀರಿ ಕನ್ನಡ ಭಾಷೆ ಪ್ರಪಂಚದಲ್ಲಿ ಬೆಳೆದಿದೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಈಶ್ವರ್ ಮಳಕೊಪ್ಪ ಉಪಸ್ಥಿತರಿದ್ದು ಮಾತನಾಡಿದರು.

ಸಭೆಯ ಅಧ್ಯಕ್ಷತೆಯನ್ನು ಹೊಸನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ತ.ಮ.ನರಸಿಂಹರವರು ವಹಿಸಿದ್ದರು.

ಸಭೆಯ ಮೊದಲಲ್ಲಿ ವಿದ್ಯಾರ್ಥಿನಿಯರಾದ ಕುಮಾರಿ ಐಸಿರಿ ತಂಡದವರು ನಾಡಗೀತೆ ಹಾಡಿದರು. ಕಾರ್ಯಕ್ರಮದ ಮಧ್ಯೆ ಮಧ್ಯೆ ಕಸಾಪ ಹಿರಿಯ ಸದಸ್ಯರಾದ ನಾಗರತ್ನ ದೇವರಾಜ್ ಕನ್ನಡ ಗೀತೆಗಳನ್ನು ಹಾಡಿದರು.

ಕಸಾಪ ಹಿರಿಯ ಸದಸ್ಯ ಚಂದ್ರಪ್ಪ ಸರ್ವರನ್ನು ಸ್ವಾಗತಿಸಿದರು. ದೇವರಾಜ್ ಹೆಚ್ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ಸಹಶಿಕ್ಷಕ ನೂರುಲ್ಲಾ ವಂದಿಸಿದರು.

ಸಾಹಿತ್ಯ ಪರಿಷತ್ತಿನ ಸದಸ್ಯರುಗಳಾದ ಹ.ಆ.ಪಾಟೀಲ್, ಆರ್.ರಾಘವೇಂದ್ರ, ಕುಕ್ಕಳಲೆ ಈಶ್ವರಪ್ಪ ಗೌಡ್ರು, ಬಿ ಕೆ ರಾಘವೇಂದ್ರ, ಶ್ರೀಧರ ಕೆ, ತ.ಮ.ಸುಧಾಕರ, ರಿ.ರಾ.ರವಿಶಂಕರ್, ದೇವರಾಜ್ ಉಪಸ್ಥಿತರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here