ಮಲೆನಾಡಿನ ಹೃದಯ ಭಾಗ ಹೊಸನಗರದಲ್ಲಿ ದಾಖಲೆ ಬರೆದ ನಿಂಬೆಹಣ್ಣಿನ ದರ !

0
843

ಹೊಸನಗರ : ಮಲೆನಾಡಿನ ಹೃದಯ ಭಾಗವಾದ ಹೊಸನಗರದಲ್ಲಿ ಒಂದು ನಿಂಬೆಹಣ್ಣಿನ ದರ ಬರೋಬ್ಬರಿ 10 ರೂಪಾಯಿ ದಾಟುವ ಮೂಲಕ ದಾಖಲೆ ನಿರ್ಮಿಸಿದೆ.

ಮಲೆನಾಡಿನ ಶೇ. 90ಕ್ಕೂ ಹೆಚ್ಚು ಮನೆಗಳಲ್ಲಿ ನಿಂಬೆಹಣ್ಣಿನ ಬೆಳೆ ಬೆಳೆಯುತ್ತಿದ್ದರೂ ಈ ಬಾರಿಯ ಬಿರುಬೇಸಿಗೆ ಕಾಲದಲ್ಲಿ ನಿಂಬೆಹಣ್ಣಿನ ಬೆಲೆ 10 ರೂಪಾಯಿ ದಾಟುವ ಮೂಲಕ ಸಾರ್ವಕಾಲಿಕ ದಾಖಲೆ ನಿರ್ಮಿಸಿದೆ.

ಹಿಂದೆ ಮಲೆನಾಡಿನ ಮನೆಗಳಿಗೆ ಭೇಟಿ ನೀಡುವ ನೆಂಟರಿಷ್ಟರಿಗೆ, ಬಂಧು – ಬಳಗದವರಿಗೆ, ಸ್ನೇಹಿತರಿಗೆ ಮನೆಗೆ ಭೇಟಿ ನೀಡಿ ಹಿಂತಿರುಗುವಾಗ ಭೇಟಿ ನೀಡಿದ ಸವಿನೆನಪಿಗಾಗಿ ಮನೆಗಳಲ್ಲೇ ಬೆಳೆದ ನಿಂಬೆಹಣ್ಣು, ಮಾವಿನಹಣ್ಣು, ಅಮಟೆಕಾಯಿ, ಬಾಳೆಹಣ್ಣಿನ ಗೊನೆ ಮೊದಲಾದವುಗಳ ನೀಡುವ ಸಂಪ್ರದಾಯ ಇದ್ದು ಕ್ರಮೇಣ ಈ ಸಂಪ್ರದಾಯ ಕ್ಷೀಣಿಸುತ್ತಿರುವ ಸಂಗತಿಯಾಗಿದ್ದು ವಿಷಾದನೀಯವಾಗಿದೆ.

ಈಗ ಗ್ರಾಮೀಣ ಜನರು ಸಹ ಕೊತ್ತಂಬರಿ ಸೊಪ್ಪು, ಹಸಿಮೆಣಸು, ಅಮಟೆಕಾಯಿ, ನಿಂಬೆಹಣ್ಣು ಇನ್ನಿತರ ಸೊಪ್ಪುಗಳನ್ನು ಖರೀದಿಸಲು ಪೇಟೆಯ ತರಕಾರಿ ಅಂಗಡಿಗಳನ್ನು ಅವಲಂಬಿಸಿರುವುದು ಶೋಚನೀಯವೆನಿಸಿದೆ.

ಜಾಹಿರಾತು

LEAVE A REPLY

Please enter your comment!
Please enter your name here