20.6 C
Shimoga
Friday, December 9, 2022

ಮಳಖೇಡ ಮೂಲಾಧಾರ ಕಟ್ಟಿಮನಿ ಹಿರೇಮಠಕ್ಕೆ ನೂತನ ಶ್ರೀಗಳ ನಿಯುಕ್ತಿ ; ಶ್ರೀ ರಂಭಾಪುರಿ ಜಗದ್ಗುರುಗಳು

ಎನ್.ಆರ್ ಪುರ : ಕಲಬುರ್ಗಿ ಜಿಲ್ಲೆ ಸೇಡಂ ತಾಲೂಕಿನ ಮಳಖೇಡದ ಶ್ರೀಮದ್ರಂಭಾಪುರಿ ಶಾಖಾ ಮೂಲಾಧಾರ ಕಟ್ಟಿಮನಿ ಸಂಸ್ಥಾನ ಹಿರೇಮಠಕ್ಕೆ ಗಂವ್ಹಾರದ ವಿರುಪಾಕ್ಷ ದೇವರನ್ನು ನಿಯುಕ್ತಿಗೊಳಿಸಿದೆ ಎಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಪ್ರಕಟಪಡಿಸಿದರು.


ಅವರು ಶ್ರೀ ರಂಭಾಪುರಿ ಪೀಠದಲ್ಲಿ ಆಗಮಿಸಿದ ಮಳಖೇಡ ಶಿಷ್ಯ ಸದ್ಭಕ್ತರು ಮೂಲಾಧಾರ ಕಟ್ಟಿಮನಿ ಹಿರೇಮಠಕ್ಕೆ ನೂತನ ಶ್ರೀಗಳನ್ನು ನಿಯುಕ್ತಿಗೊಳಿಸಿ ಆಶೀರ್ವದಿಸಬೇಕೆಂದು ಪ್ರಾರ್ಥನಾ ಪತ್ರ ಸಮರ್ಪಿಸಿದ ಸಮಾರಂಭದಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಿದರು.


ಮಳಖೇಡ ಮೂಲಾಧಾರ ಕಟ್ಟಿಮನಿ ಸಂಸ್ಥಾನ ಹಿರೇಮಠ ಬಾಳೆಹೊನ್ನೂರು ಶ್ರೀ ಜಗದ್ಗುರು ರಂಭಾಪುರಿ ಮಹಾಪೀಠದ ಶಾಖಾ ಮಠವಾಗಿದೆ. ಈ ಹಿಂದಿನ ವೀರಗಂಗಾಧರ ಶಿವಾಚಾರ್ಯರು ಅನಾರೋಗ್ಯದಿಂದಾಗಿ ಅಕ್ಟೋಬರ 11ರಂದು ಲಿಂಗೈಕ್ಯರಾದ ಕಾರಣ ಅವರಿಂದ ತೆರವಾದ ಸ್ಥಾನವನ್ನು ಜೀವರ್ಗಿ ತಾಲೂಕಿನ ಸರಸ್ವತಿ-ರಾಜಶೇಖರಸ್ವಾಮಿ ಹಿರೇಮಠ ಇವರ ತೃತೀಯ ಸುಪುತ್ರರಾದ ವೇದ ವಿದ್ಯಾ ಸಂಪನ್ನರೂ, ಜ್ಯೋತಿಷ್ಯ ಜ್ಞಾನ ಪರಿಣಿತರೂ ಶಿವಾದ್ವೈತ ಸಿದ್ಧಾಂತ ಅಧ್ಯಯನ ಶೀಲರಾದ ಸದ್ವಂಶೀಯ ವೀರಮಾಹೇಶ್ವರ ವಂಶದಲ್ಲಿ ಸಂಜಿನಿಸಿದ ವಿರುಪಾಕ್ಷ ದೇವರನ್ನು ನಿಯುಕ್ತಿಗೊಳಿಸಿ ಆಶೀರ್ವದಿಸಿದರು.


ಇದೇ ನವಂಬರ್ 28ರಂದು ಸೋಮವಾರ ನೂತನ ಶ್ರೀಗಳವರನ್ನು ಮಳಖೇಡ ಗ್ರಾಮದ ಶಿಷ್ಯ ಸದ್ಭಕ್ತರು ನೂತನ ಶ್ರೀಗಳವರನ್ನು ಬರಮಾಡಿಕೊಂಡು ಅದ್ದೂರಿಯಾಗಿ ಸ್ವಾಗತಿಸಲು ಸದ್ಭಕ್ತರು ನಿರ್ಧರಿಸಿದ್ದಾರೆ ಎಂದ ಜಗದ್ಗುರುಗಳು ಮುಂದೆ ಒಂದು ಶುಭ ಮುಹೂರ್ತದಲ್ಲಿ ನೂತನ ಶ್ರೀಗಳವರಿಗೆ ಶ್ರೀ ಗುರು ಪಟ್ಟಾಧಿಕಾರ ಸಮಾರಂಭ ನಡೆಸಲಾಗುವುದೆಂದು ಪ್ರಕಟಪಡಿಸಿದರು.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!