ಮಳೆಗಾಲದ ವೈಭವವನ್ನು ಸೃಷ್ಟಿಸಿದ ಅಕಾಲಿಕ ಮಳೆ ! ಹೈರಾಣಾದ ರೈತಾಪಿ ವರ್ಗ

0
329

ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ನಿನ್ನೆ ಸಂಜೆ ಭಾರಿ ಮಳೆ ಬೀಳುತ್ತಿದ್ದು ಜನಜೀವನ ಅಸ್ತವ್ಯಸ್ತಗೊಮಡಿದೆ.

ನಿನ್ನೆ ಬೆಳಗ್ಗೆಯಿಂದ ಚಳಿ ಜೆಕೃ ಮೋಡ ಕಾವಿದ ವಾತಾವರಣ ಇದ್ದು ಮಧ್ಯಾಹ್ನದ ನಂತರ ನಿಧಾನವಾಗಿ ಪ್ರಾರಂಭವಾದ ಮಳೆ ರಾತ್ರಿಯ ವೇಳೆಗೆ ಬಿರುಸು ಪಡೆದಿತ್ತು.

ಮಲೆನಾಡು ಭಾಗವಾದ ಕಳಸ, ಬಾಳೆಹೊಳೆ ಸಮೀಪದ ಮುನ್ನೂರು ಪಾಲಿನಲ್ಲಿರುವ ಮಳೆ ರುದ್ರ ನರ್ತನ ತಾಳಿದೆ. ಬೊಬ್ಬಿರಿದು ಸುರಿದ ಮಳೆಗೆ ಎಲ್ಲೆಲ್ಲೂ ನೀರು ಹರಿಯುತ್ತಿದ್ದ ದೃಶ್ಯ ಕಾಣಿಸಿದೆ, ರಸ್ತೆ ಅಂಚುಗಳ ಕಾಫಿ ತೋಟಗಳಿಂದ ಕೃತಕ ಜಲಧಾರೆಗಳಂತೆ ನೀರು ಒಂದೇ ಸಮನೆ ಹರಿದುಬರುತ್ತಿತ್ತು.

ರಸ್ತೆಗಳ ಮೇಲೆ ನೀರು ಉಕ್ಕಿ ಹರಿಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಮಳೆಗಾಲದ ವೈಭವವನ್ನು ಈ ಅಕಾಲಿಕ ಮಳೆ ಮತ್ತೆ ಸೃಷ್ಟಿಸಿತ್ತು‌.

ನಿರಂತರವಾಗಿ ಮಳೆಯಿಂದ ಈಗಾಗಲೇ ಹೈರಾಣಾಗಿರುವ ಕಾಫಿ, ಭತ್ತ, ಅಡಿಕೆ, ಮೆಣಸು ಬೆಳೆಗಾರರು ದಿಕ್ಕು ತೋಚದಂತಾಗಿ ತಲೆ ಮೇಲೆ ಕೈ ಹೊತ್ತು ಕೂರುವ ಸ್ಥಿತಿ ನಿರ್ಮಾಣವಾಗಿದೆ.

ಜಾಹಿರಾತು

LEAVE A REPLY

Please enter your comment!
Please enter your name here