ಮಳೆ ಹಾನಿ ಶೀಘ್ರದಲ್ಲಿ ಪರಿಹಾರವನ್ನು ನೀಡಲಾಗುವುದು: ಆರ್. ಅಶೋಕ್

0
254

ಚಿಕ್ಕಮಗಳೂರು: ರಾಜ್ಯದ ಬೆಳಗಾವಿ, ಬಾಗಲಕೋಟೆ, ಹಾವೇರಿ, ಉತ್ತರ ಕನ್ನಡ ಹಾಗೂ ಗದಗದಲ್ಲಿ ಬಹಳಷ್ಟು ಮಳೆಯಾದ ಪರಿಣಾಮ ಹೆಚ್ಚು ಬೆಳೆಹಾನಿಯಾಗಿದ್ದು ರೈತರಿಗೆ ಸಂಕಷ್ಟ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಶೀಘ್ರದಲ್ಲಿ ಇನ್ನೆರಡು ದಿನದಲ್ಲಿ ಹಣವನ್ನು ಬಿಡುಗಡೆ ಮಾಡಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದರು.

ನಗರದಲ್ಲಿ ಈ ಕುರಿತು ಮಾತನಾಡಿದ ಅವರು, ರಾಜ್ಯದಲ್ಲಿ ಎಲ್ಲಾ ಕಡೆ ತಾಲ್ಲೂಕು ಕಚೇರಿಗಳಿಗೆ ಮಿನಿ ವಿಧಾನಸೌಧ ಎಂದು ಕರೆಯಲಾಗುತ್ತಿದ್ದು, ಕನ್ನಡ ಬೆಳೆಸುವ ದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಮಿನಿ ಎಂಬ ಪದವನ್ನು ತಗೆದುಹಾಕಿ ತಾಲ್ಲೂಕು ಆಡಳಿತ ಸೌಧ ಎಂದು ಕರೆಯುವಂತೆ ಕಂದಾಯ ಇಲಾಖೆ ನಿರ್ಧರಿಸಿದ್ದು ಒಂದು ತಿಂಗಳ ಒಳಗೆ ಆ ಹೆಸರನ್ನು ಬದಲಾಯಿಸಿ ತಾಲೂಕು ಆಡಳಿತ ಸೌಧ ಎಂದು ನಮೂದಿಸುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಆದೇಶಿಸಲಾಗಿದೆ ಎಂದು ತಿಳಿಸಿದರು.

ಜಾಹಿರಾತು

LEAVE A REPLY

Please enter your comment!
Please enter your name here