24.3 C
Shimoga
Friday, December 9, 2022

ಮಹಮದ್ ಪೈಗಂಬರ್ ವಿಚಾರಧಾರೆಗಳು ನಮಗೆ ಸ್ಫೂರ್ತಿಯಾಗಿವೆ ; ಆರ್.ಎ ಚಾಬುಸಾಬ್

ರಿಪ್ಪನ್‌ಪೇಟೆ: ಮುಸ್ಲಿಂ ಸಮುದಾಯದಲ್ಲಿ ಪ್ರವಾದಿ ಮಹಮದ್ ಪೈಗಂಬರ್‌ಗಿಂತ ಮೊದಲು ಮಹಿಳೆಯರ ಮೇಲೆ ಶೋಷಣೆ ಸೇರಿದಂತೆ ಹೆಂಡ ಸೇವನೆ ಕಳ್ಳತನ ಸುಲಿಗೆಯಂತಹ ದೃಶ್ಯಕೃತ್ಯಗಳು ಪ್ರವಾದಿಗಳ ಕಾಲದಲ್ಲಿಯೂ ನಡೆಯುತ್ತಿತ್ತು ಇಂತಹ ದುಶ್ಚಟಗಳಿಗೆ ಜಗತ್ತಿನಲ್ಲಿ ವಿರಾಮ ಹಾಕಿದವರು ಮಹಮದ್‌ಪೈಗಂಬರ್ ಎಂದು ಮುಹಿಯುದ್ದೀನ್ ಜುಮಾ ಮಸೀದಿ ಮಾಜಿ ಅಧ್ಯಕ್ಷ ಆರ್.ಎ.ಚಾಬುಸಾಬ್ ಹೇಳಿದರು.

ರಿಪ್ಪನ್‌ಪೇಟೆಯಲ್ಲಿ ಮುಹಿಯುದ್ದೀನ್ ಜುಮಾ ಮಸೀದಿ ಮತ್ತು ಮಕ್ಕಾ ಜುಮಾಮಸೀದಿ ಹಾಗೂ ತಅಝೀಝುಲ್ ಇಸ್ಲಾಂ ಮೀಲಾದ್ ಸ್ವಾಗತ ಸಮಿತಿ ಬದ್ರೀಯಾ ಮದ್ರಸ ಸಮಿತಿ ಹಾಗೂ ಎಸ್‌ಎಸ್ ಎಫ್ ಮತ್ತು ಎಸ್ ವೈ.ಎಸ್ ರಿಪ್ಪನ್‌ಪೇಟೆ ಇವರ ಸಂಯುಕ್ತ ಆಶ್ರಯದಲ್ಲಿ ಅಯೋಜಿಸಲಾದ “ಇಲಲ್ ಹಬೀಬ್ ಮೀಲಾದ್ ಕಾಸ್ಫರೆನ್ಸ್”
ಉದ್ಘಾಟನೆ ನೆರವೇರಿಸಿ ಮಾತನಾಡಿ, 1400 ವರ್ಷ ಧರ್ಮ ಬೋಧಕರಾಗಿ ಯಾವುದೇ ಕಳಂಕವಿಲ್ಲದೆ ಪ್ರಪಂಚದಲ್ಲಿ ಇದ್ದವರು ಪ್ರವಾದಿ ಮಹಮದ್ ಪೈಗಂಬರ್‌ರವರು ಅವರ ವಿಚಾರ ಧಾರೆಗಳೇ ನಮಗೆ ಸ್ಫೂರ್ತಿಯಾಗಿವೆ. ಕ್ರಿಶ್ಚಿಯನ್ ಧರ್ಮಗುರುಗಳೇ ಮಹಮದ್ ಪೈಗಂಬರ್ ಕುರಿತು ಭವಿಷ್ಯ ನುಡಿಯುವುರೊಂದಿಗೆ ಇವನೊಬ್ಬ ಸರ್ವ ಶ್ರೇಷ್ಟ ಪ್ರವಾದಿ ಮಹಮದ್ ಆಗುವ ಲಕ್ಷಣ ಕಾಣುತಿದ್ದೆ ಎಂದಿದ್ದರು ಅದರಂತೆ ಮಹಮದ್ ಪೈಗಂಬರ್‌ರವರಿಗೆ ದೇವದೂತರು ನಾಲಿಗೆ ಮೇಲೆ ಜ್ಞಾನದ ವಿಶ್ವರೂಪವನ್ನು ಬರೆದವರಾಗಿದ್ದು ಪೈಗಂಬರ್ ಮುಸ್ಲಿಂ ಜನಾಂಗದ ಸರ್ವಶ್ರೇಷ್ಟ ಪ್ರವಾದಿ ಪೈಗಂಬರ್‌ರಾಗಿದ್ದು ಅವರು ನಿತ್ಯ ಐದು ಬಾರಿಯಲ್ಲಾದರೂ ಅಲ್ಲಾನ ಪ್ರಾರ್ಥನೆ ಮಾಡಿದರೆ ದೈವಿ ಕೃಪೆಯಾಗುವುದು ಇಲ್ಲದಿದ್ದರೆ ಅವನ್ನು ಮುಸ್ಲಿಂನೇ ಅಲ್ಲ ಎಂದು ಹೇಳಿ ನಮಾಜ್ ಮಾಡುವವನಿಗೆ ಕೆಟ್ಟ ಕೆಲಸ ಮಾಡಲು ಮನಸ್ಸು ಬರುವುದಿಲ್ಲ ಎಂದರು.


ಶಿವಮೊಗ್ಗ ಗುಡ್ ಶಫರ್ಡ್ ಧರ್ಮ ಕೇಂದ್ರದ ಧರ್ಮಗುರು ವೀರೇಶ್ ವಿ.ಮೋರಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಪ್ರಾಣಿ ಪಕ್ಷಯಲ್ಲಿಲ್ಲದ ಬೇಧ ಭಾವನೆ ಮನುಷ್ಯರಲ್ಲಿ ಯಾಕೇ ಎಲ್ಲರೂ ಸೌಹಾರ್ದಥೆಯಿಂದ ಬದುಕುವಂತಾಗಬೇಕು. ಹುಟ್ಟಿ ಬೆಳೆದು ಬಂದ ಧರ್ಮದ ಅಳವನ್ನು ಅಧ್ಯಯನ ಮಾಡಿ ಬೇರೆ ಧರ್ಮದ ಕುರಿತು ತಿಳಿದುಕೊಳ್ಳಬೇಕು. ಧರ್ಮತತ್ವ ಸಿದ್ದಾಂತದ ಸಾರವನ್ನು ಅರಿತುಕೊಂಡು ಸೌಹಾರ್ದತೆಯಿಂದ ನಡೆದುಕೊಂಡಾಗ ಮಾತ್ರ ಶಾಂತಿ ನೆಮ್ಮದಿಯಿಂದ ಇರಲು ಸಾಧ್ಯವೆಂದ ಅವರು, ಧಾರ್ಮಿಕ ಆಚರಣೆಗಳ ನಡುವೆ ಅಗಾದ ಸಂವಾದ ನಡೆಸಿಕೊಂಡಾಗ ಮಾತ್ರ ಪ್ರತಿಯೊಂದು ಧರ್ಮದ ಮೇಲೆ ಪ್ರೀತಿ ವಿಶ್ವಾಸ ಪರಸ್ಪರ ಐಕತ್ಯೆಯಿಂದಿರಲು ಸಾಧ್ಯವೆಂದರು.


ಸಮಾರಂಭದ ಅಧ್ಯಕ್ಷತೆಯನ್ನು ಜುಮ್ಮಾಮಸೀದಿ ಅಧ್ಯಕ್ಷ ಮಹಮದ್ ರಫೀಕ್ ವಹಿಸಿದ್ದರು.


ಮೆಕ್ಕಾಮಸೀದಿಯ ಧರ್ಮಗುರು ಮುನೀರ್ ಸಖಾಫಿ, ಮೀಲಾದ್ ಸಮಿತಿ ಅಧ್ಯಕ್ಷ ಮುಸ್ತಾಫ್ ಕೆ.ಹೆಚ್.ಆರ್, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮಂಜುಳಾ ಕೇತಾರ್ಜಿರಾವ್, ಕೆಂಚನಾಲ ಗ್ರಾಮ ಪಂಚಾಯ್ತಿ ಅಧ್ಯಕ್ಷ ಉಬೇದುಲ್ಲಾ ಷರೀಫ್,
ಗ್ರಾ.ಪಂ.ಸದಸ್ಯ ಆಸಿಫ್‌ಬಾಷಾಸಾಬ್, ಜಿ.ಡಿ.ಮಲ್ಲಿಕಾರ್ಜುನ, ಮಕ್ಕಾಮಸೀದಿ ಅಧ್ಯಕ್ಷ ಮಹಮ್ಮದ್ ಫಾಝಿಲ್, ಉಪಾಧ್ಯಕ್ಷೆ ಮಹಾಲಕ್ಷ್ಮಿ, ಸಾರಾಭಿ, ಪಿ.ರಮೇಶ, ಡಿ.ಈ.ಮಧುಸೂದನ್, ಗಣಪತಿ, ಎನ್. ಚಂದ್ರೇಶ್, ಅನುಪಮ, ನಿರೂಪ್, ವನಮಾಲ,
ಧನಲಕ್ಷ್ಮಿ, ವಿನೋಧ, ವೇದಾವತಿ, ಅಶ್ವಿನಿ ರವಿಶಂಕರ್, ಸುಧೀಂದ್ರ ಪೂಜಾರಿ.ಎಂ.ಬಿ.ಲಕ್ಷ್ಮಣ ಗೌಡ, ಎನ್.ಸತೀಶ್ ದಾನಮ್ಮ, ಟಿ.ಸುಂದರೇಶ್, ಪ್ರಕಾಶ ಪಾಲೇಕರ್ ಇನ್ನಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಹಸನ ಸ್ವಾಗತಿಸಿದರು.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!