ಮಹಾಗಣಪತಿ ದೇವಸ್ಥಾನ ಜೀರ್ಣೋದ್ಧಾರಕ್ಕೆ ಧರ್ಮಸ್ಥಳ ಧರ್ಮಾಧಿಕಾರಿ ಡಾ|| ಡಿ. ವೀರೇಂದ್ರ ಹೆಗ್ಗಡೆಯವರಿಂದ 50 ಸಾವಿರ ರೂ. ದೇಣಿಗೆ

0
360

ರಿಪ್ಪನ್‌ಪೇಟೆ: ಸಮೀಪದ ಬಾಳೂರು ಗ್ರಾಮದ ಶ್ರೀಮಹಾಗಣಪತಿ ದೇವಸ್ಥಾನ ಜೀರ್ಣೋದ್ದಾರಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಡಿ ಶ್ರೀಕ್ಷೇತ್ರದ ಧರ್ಮಾಧಿಕಾರಿ ಡಾ || ವೀರೇಂದ್ರ ಹೆಗ್ಗಡೆಯವರು 50 ಸಾವಿರ ರೂ. ದೇಣಿಗೆ ನೀಡಿದ್ದಾರೆ.

ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಜಿಲ್ಲಾ ನಿರ್ದೇಶಕ ಜಿ.ಚಂದ್ರಶೇಖರ ದೇವಸ್ಥಾನ ಸೇವಾ ಸಮಿತಿಯವರಿಗೆ ದೇಣಿಯ ಡಿಡಿಯನ್ನು ಹಸ್ತಾಂತರಿಸಿ ಮಾತನಾಡಿ, ಗ್ರಾಮಗಳ ಅಭಿವೃದ್ದಿಗೆ ಹೆಗ್ಗಡೆಯವರ ಸಾಕಷ್ಟು ಶ್ರಮಿಸುತ್ತಿದ್ದಾರೆ. ಹಲವು ದೇವಸ್ಥಾನಗಳು ಶಿಥಿಲಗೊಂಡಿರುವ ಬಗ್ಗೆ ಶ್ರೀ ಕ್ಷೇತ್ರಕ್ಕೆ ಮತ್ತು ಯೋಜನಾ ಕಛೇರಿಗೆ ದೇವಸ್ಥಾನ ಸಮಿತಿಯವರು ದೇವಸ್ಥಾನ ಜೀರ್ಣೋದ್ದಾರಕ್ಕೆ ನೆರವು ಕೋರಿ ಮನವಿ ಮಾಡಿಕೊಳ್ಳಲಾಗಿದ್ದು ಅದರನ್ವಯ ಧರ್ಮಾಧಿಕಾರಿಗಳ ಆಶಯದಂತೆ ಆರ್ಥಿಕ ನೆರವು ನೀಡುತ್ತಾ ಜೀರ್ಣೋದ್ಧಾರ ಕಾರ್ಯಕ್ಕೆ ನೆರವು ನೀಡುತ್ತಿದ್ದು ಆ ನೆರವಿನ ಹಣ ಸದ್ಬಳಕೆ ಮಾಡಿಕೊಳ್ಳುವಂತೆ ತಿಳಿಸಿ ನೊಂದ ಕುಟುಂಬಸ್ಥರು ಅಥವಾ ಒಳ್ಳೆಯಗಳಿಗೆ ಕಾರ್ಯಗಳನ್ನು ಈಡೇರಿಸುವಂತೆ ಸ್ವಾಮಿಯಲ್ಲಿ ಬೇಡಿ ಬರುವ ಭಕ್ತರ ಆಶೋತ್ತರಗಳನ್ನು ಪರಿಹರಿಸುವ ಮಹಾಗಣಪತಿಯ ಆಶೀರ್ವಾದ ಬಯಸಿ ಬರುವ ಭಕ್ತಾಧಿಗಳನ್ನು ಹರುಸುವ ಕರುನಾಮಯಿ ಮಹಾಗಣಪತಿಯ ದೇವಸ್ಥಾನವನ್ನು ಸ್ವಚ್ಚತೆಯೊಂದಿಗೆ ನೆಮ್ಮದಿಯನ್ನು ನೀಡುವಂತಾಗಲಿ ಎಂಬ ನಿಟ್ಟಿನಲ್ಲಿ ಧರ್ಮಸ್ಥಳ ಯೋಜನೆಯಿಂದ ದೇವಸ್ಥಾನಗಳ ಶ್ರದ್ಧಾ ಕೇಂದ್ರಕ್ಕೆ ಸಹಕಾರ ಜೀರ್ಣೋದ್ದಾರಕ್ಕೆ ಸಹಕಾರ ನೀಡುತ್ತಾ ಬಂದಿದೆ ಇದನ್ನು ಶ್ರದ್ದಾ ಭಕ್ತಿಯಿಂದ ಆಡಳಿತ ಮಂಡಳಿ ದೇವಸ್ಥಾನವನ್ನು ಇಟ್ಟುಕೊಂಡು ಹೋಗಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಬಾಳೂರು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ನೀಲಾವತಿ ದೊಡ್ಡಯ್ಯ, ತಾಲ್ಲೂಕ್ ಯೋಜನಾಧಿಕಾರಿ ಬೇಬಿ, ಹೇಮಂತ್ ರಾಜ್ ದೊಡ್ಡಯ್ಯ ಸೇವಾ ಪ್ರತಿನಿಧಿ ಶುಭ, ಗ್ರಾಮಸ್ಥರು, ದೇವಸ್ಥಾನ ಸೇವಾ ಸಮಿತಿಯವರು ಪಾಲ್ಗೊಂಡಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here