ಮಹಾತ್ಮ ಗಾಂಧೀಜಿಯ ಕನಸು ನನಸಾಗುತ್ತಿದೆ: ರಾಧಿಕಾ ರತ್ನಾಕರ್ ಶ್ರೇಷ್ಠಿ

0
678

ಹೊಸನಗರ: ಮಹಾತ್ಮ ಗಾಂಧೀಜಿಯ ಕನಸಾಗಿರುವ ಸ್ವಚ್ಛ ಭಾರತದ ಕನಸು ನನಸಾಗುತ್ತಿದೆ ಎಂದು ಕಳೂರು ಯುವತಿ ಮಂಡಳಿಯ ಅಧ್ಯಕ್ಷೆ ರಾಧಿಕಾ ರತ್ನಾಕರ್ ಶ್ರೇಷ್ಠಿಯವರು ಹೇಳಿದರು.

ಗಾಂಧಿ ಜಯಂತಿಯ ಅಮೃತ ಮಹೋತ್ಸವ ಸ್ವಚ್ಛತ ಆಭಿಯಾನದ ಅಡಿಯಲ್ಲಿ ಶಿವಮೊಗ್ಗ ನೆಹರು ಯುವ ಕೇಂದ್ರ ಹಾಗೂ ಕಳೂರು ಯುವತಿ ಮಂಡಳಿಯ ಯುವತಿಯರಿಂದ ದೇವಸ್ಥಾನ ಹಾಗೂ ಹೊಸನಗರ ಪ್ರವಾಸಿ ಮಂದಿರದವರೆಗೆ ಸ್ವಚ್ಛತಾ ಅಭಿಯಾನವನ್ನು ಕೈಗೊಂಡು ಸ್ವಚ್ಛಗೊಳಿಸಿ ಮಾತನಾಡಿದರು.

ಸುಮಾರು 75 ವರ್ಷಗಳ ಹಿಂದೆ ನಮಗೆ ಸ್ವಾತಂತ್ರ್ಯವನ್ನು ತಂದು ಕೊಟ್ಟ ಮಹಾತ್ಮ ಗಾಂಧಿಯವರು ಸ್ವಚ್ಚತೆಯ ಬಗ್ಗೆ ಹೆಚ್ಚು ಗಮನ ಹರಿಸಿದ್ದು ಅವರ ಆಸೆ ಇತ್ತೀಚಿನ ದಿನಗಳಲ್ಲಿ ಕೈಗೂಡುತ್ತಿದೆ ಎಂದರು.

ಈ ಸ್ವಚ್ಛತಾ ಅಭಿಯಾನದಲ್ಲಿ ಕಳೂರು ಯುವತಿ ಮಂಡಳಿಯ ಉಪಾಧ್ಯಕ್ಷೆ ಸ್ವಾತಿ, ರಂಜಿತಾ ಶ್ಯಾನುಭೂಗ್, ನೆಹರು ಯುವ ಕೇಂದ್ರದ ಗಿರೀಶ್ ಹಾಗೂ ಕಳೂರು ಯುವತಿ ಮಂಡಳಿಯ ಸದಸ್ಯರು ಕಳೂರು ಗ್ರಾಮದ ಸದಸ್ಯರು ಭಾಗವಹಿಸಿದರು.

ಜಾಹಿರಾತು

LEAVE A REPLY

Please enter your comment!
Please enter your name here