ರಿಪ್ಪನ್ಪೇಟೆ: ಮಹಾಶಿವರಾತ್ರಿಯ ಅಂಗವಾಗಿ ಇಂದು ಸಮೀಪದ ಬರುವೆ ಈಶ್ವರ ಮತ್ತು ಗವಟೂರು ಶ್ರೀರಾಮೇಶ್ವರ, ಕುಕ್ಕಳಲೇ ಕಾಶಿ ವಿಶ್ವನಾಥ ಮತ್ತು ಬೈರಾಪುರ ಈಶ್ವರ, ಸಿದ್ದೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆದವು.
ಭಕ್ತರು ಉಪವಾಸದಿಂದ ದೇವಸ್ಥಾನಕ್ಕೆ ತೆರಳಿ ಶ್ರದ್ದಾಭಕ್ತಿಯಿಂದ ದೇವರಲ್ಲಿ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥನೆ ಸಲ್ಲಿಸಿದರು.
ಹೊಂಬುಜದ ಬಿಲ್ಲೇಶ್ವರ ದೇವಸ್ಥಾನದಲ್ಲಿ ಇಂದು ಬೆಳಗ್ಗೆ ಮಹಾಶಿವರಾತ್ರಿಯ ಅಂಗವಾಗಿ ಈಶ್ವರನಿಗೆ ಅಭಿಷೇಕ ವಿಶೇಷ ಅಲಂಕಾರ ಪೂಜೆ ಮಹಾಮಂಗಳಾರತಿ ಇನ್ನಿತರ ಧಾರ್ಮಿಕ ಕಾರ್ಯಕ್ರಗಳು ಜರುಗಿದವು.