ಮಹಿಳೆಯರು ಸ್ವಾವಲಂಬಿಗಳಾಗಬೇಕು: ಡಾ. ಅಂಜಲಿ ಅಶ್ವಿನ್

0
559

ಹೊಸನಗರ: ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹೊಸನಗರದ ಘಟಕಗಳಾದ ಮಹಿಳಾ ಸಬಲೀಕರಣ ಸಮಿತಿ ಹಾಗೂ ಐಕ್ಯೂಎಸಿ ಸಹಯೋಗದೊಂದಿಗೆ ಅಂತರಾ ರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಹಮ್ಮಿಕೊಂಡಿದ್ದು ಮುಖ್ಯ ಅತಥಿಗಳಾಗಿ ಭಾಗವಹಿಸಿದ್ದ ಡಾ. ಅಂಜಲಿ ಅಶ್ವಿನ್‌ರವರು ಮಾತನಾಡಿ, ಮಹಿಳೆಯರು ಸ್ವಾವಲಂಬಿಗಳಾಗಬೇಕು ಹಾಗೂ ಸಮಾಜದಲ್ಲಿ ಸಮಾನತೆಯ ಅಗತ್ಯತೆಗಳ ಬಗ್ಗೆ ವಿದ್ಯಾರ್ಥಿನಿಯರಲ್ಲಿ ಅರಿವು ಮೂಡಿಸಿದರು.

ನೆರೆದಿದ್ದ ವಿದ್ಯಾರ್ಥಿನಿಯರನ್ನು ಕುರಿತು ಹೆಣ್ತನ, ತಾಯ್ತನವು ಮಹಿಳೆಯರಿಗಿರುವ ಅತಿ ದೊಡ್ಡ ವರವೆಂದು ಹೇಳಿದರು.‌‌ ವೇದಕಾಲದಿಂದಲು ಹೆಣ್ಣನ್ನು ನಡೆಸಿಕೊಳ್ಳುವ ಪರಿಯನ್ನು ಬಿಡಿಬಿಡಿಯಾಗಿ ನುಡಿದರು. ಓದುತ್ತಿರುವ ವಿದ್ಯಾರ್ಥಿನಿಯರನ್ನು ಕುರಿತು ಅವರ ಬದುಕಿನ ಅರ್ಥವು ಶಿಕ್ಷಣವನ್ನು ಪಡೆದು ಎಲ್ಲರಿಗೂ ಮಾದರಿಯಾಗಬೇಕು ಎಂದು ತಿಳಿಸಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಿನ್ಸಿಪಾಲರಾದ ದಿವಾಕರ ಹೆಚ್.‌ ಇವರು ಮಹಿಳಾ ದಿನಾಚರಣೆಯ ಮಹತ್ವವನ್ನು ಕುರಿತು ಅಧ್ಯಕ್ಷೀಯ ನುಡಿಗಳನ್ನಾಡಿದರು.

ಈ ಕಾರ್ಯಕ್ರಮದಲ್ಲಿ ಸಂಚಾಲಕರಾದ ಮಂಜುನಾಥ ಡಿ. ಹಾಗೂ ಕಾರ್ಯಕ್ರಮವನ್ನು‌ ಆಯೋಜಿಸಿದ ಮಹಿಳಾ ಸಬಲೀಕರಣ ಸಮಿತಿಯ ಸಂಚಾಲಕರಾದ ಡಾ. ಅಕ್ಷತಾ ಬಿ.ಜಿ. ಯವರು ಉಪಸ್ಥಿತರಿದ್ದರು.

ಕು. ರಚನಾ ಸ್ವಾಗತಿಸಿದರು. ಕು. ರಶ್ಮಿ ಹಾಗೂ ಕು. ವಿದ್ಯಾಶ್ರೀ ನಿರೂಪಿಸಿದರು. ಕು. ಶಾಂತಲಾರವರು ವಂದಿಸಿದರು.

ಜಾಹಿರಾತು

LEAVE A REPLY

Please enter your comment!
Please enter your name here