ಮಹೇಶ್ ಜೋಷಿ, ಡಿ.ಬಿ.ಶಂಕರಪ್ಪ ಗೆಲುವು ನಿಶ್ಚಿತ

0
858

ರಿಪ್ಪನ್‌ಪೇಟೆ: ಇದೇ 21 ನಡೆಯುವ ರಾಜ್ಯ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷರ ಸ್ಥಾನಕ್ಕೆ ಸ್ಪರ್ಧಿಸಿರುವ ನಾಡೋಜ ಡಾ. ಮಹೇಶ್ ಜೋಷಿ ಮತ್ತು ಡಿ.ಬಿ.ಶಂಕರಪ್ಪ ಗೆಲುವು ನಿಶ್ಚಿತ ಎಂದು ಕನ್ನಡ ಸಾಹಿತ್ಯ ಪರಿಷತ್‌ನ ಸದಸ್ಯ ಕೆ.ವಿ.ಲಿಂಗಪ್ಪ ಕಗ್ಗಲಿ ಹೇಳಿದರು.

ಕಳೆದ ಐದು ವರ್ಷದಲ್ಲಿ ಸಾಹಿತ್ಯ ಪರಿಷತ್ ಜಿಲ್ಲೆಯಲ್ಲಿ ಸಕ್ರೀಯವಾಗಿದ್ದು ಹತ್ತು ಹಲವು ಸಾಹಿತ್ಯ ಕಾರ್ಯಕ್ರಮಗಳ ಮೂಲಕ ಜನ ಮೆಚ್ಚುಗೆ ಗಳಿಸುವುದರೊಂದಿಗೆ ಯುವ ಬರಹಗಾರರಲ್ಲಿ ಸಾಹಿತ್ಯದ ಜ್ಞಾನವನ್ನು ಗುರುತಿಸಿ ಸಾಹಿತ್ಯಾಭಿರುಚಿಯನ್ನು ಪರಿಚಯಿಸುವ ಕಾರ್ಯ ಸಾಹಿತ್ಯ ಪರಿಷತ್‌ನಲ್ಲಿ ಕಳೆದ ಅವಧಿಯಲ್ಲಿ ಪಾರದರ್ಶಕವಾಗಿ ಭ್ರಷ್ಟಾಚಾರ ರಹಿತವಾಗಿ ಅಧಿಕಾರ ನಡೆಸಿದ ಸರಳ ಸಜ್ಜನಿಕೆಯ ವ್ಯಕ್ತಿ ಶಂಕರಪ್ಪ ಅವರ ಕಾರ್ಯ ಪ್ರಶಂಸನೀಯವಾಗಿದೆ. ಈ ಬಾರಿಯಲ್ಲಿ ಸಹ ಡಿ.ಬಿ.ಶಂಕರಪ್ಪನವರಿಗೆ ಅಭೂತಪೂರ್ಣ ಬೆಂಬಲ ವ್ಯಕ್ತವಾಗುತ್ತಿದ್ದು ಮಹೇಶ್ ಜೋಷಿ ಹಾಗೂ ಶಂಕರಪ್ಪನವರು ಗೆಲುವು ನಿಶ್ಚಿತವೆಂದರು.

ಜಾಹಿರಾತು

LEAVE A REPLY

Please enter your comment!
Please enter your name here