ಮಾಂಸಕ್ಕಾಗಿ ರಸ್ತೆ ಬದಿಯಲ್ಲೇ ಗೋಹತ್ಯೆ – ಆರೋಪಿಗಳ ಬಂಧನ !

0
4021

ನರಸಿಂಹರಾಜಪುರ: ಮಲೆನಾಡಿನಲ್ಲಿ ಇತ್ತೀಚೆಗಂತೂ ಹಸುಗಳ ಕಳ್ಳತನ ಮತ್ತು ಮಾಂಸಕ್ಕಾಗಿ ಹಸುಗಳ ಹತ್ಯೆ ಜೋರಾಗಿ ನಡೆಯುತ್ತಿದ್ದು ದಿನದಿಂದ ದಿನಕ್ಕೆ ಮಲೆನಾಡು ಗಿಡ್ಡ ತಳಿಗಳ ಗೋವುಗಳ ಸಂಖ್ಯೆ ಕಡಿಮೆಯಾಗುತ್ತಿರುವುದಕ್ಕೆ ಇದು ಪ್ರಮುಖ ಕಾರಣ ಎನ್ನಲಾಗಿದೆ.

ದನದ ಮಾಂಸಕ್ಕಾಗಿ ರಸ್ತೆಯ ಬದಿಯಲ್ಲೇ ಭಾನುವಾರ ಹಸುವೊಂದನ್ನು ಕಡಿದಿದ್ದರು, ಸ್ಥಳೀಯರು ಇದನ್ನು ಗಮನಿಸಿ ಪೊಲೀಸರಿಗೆ ದೂರು ನೀಡಿದ್ದರಿಂದ ಮಾಂಸವನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದರೆಂದು ತಿಳಿದು ಬಂದಿದೆ.

ಪರಾರಿಯಾಗಿದ್ದ ಪ್ರಿನ್ಸ್, ಅಭಿಲಾಷ್, ಪ್ರಜ್ವಲ್ ಎಂಬ ಆರೋಪಿಗಳನ್ನು ನ.ರಾ.ಪುರ ಪೊಲೀಸರು ಬಂಧಿಸಿದ್ದು, ಗೋಹತ್ಯೆ ನಿಷೇಧ ಕಾನೂನಿನಡಿಯಲ್ಲಿ ಪ್ರಕರಣ ದಾಖಲಾಗಿದೆ.

ಈ ಮಿಂಚಿನ ಕಾರ್ಯಾಚರಣೆಯಲ್ಲಿ ಪಿ.ಎಸ್.ಐ ದಿಲೀಪ್ ಕುಮಾರ್ ನೇತೃತ್ವದಲ್ಲಿ ಎಎಸ್ಐ ನಟರಾಜ್ ಸಿಬ್ಬಂದಿಗಳಾದ ಶಂಕರ್, ಶರಣ್ ಪಾಲ್ಗೊಂಡಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here