ರಿಪ್ಪನ್ಪೇಟೆ: ಠಾಣಾ ವ್ಯಾಪ್ತಿಯಲ್ಲಿನ ರೌಡಿಶೀಟರ್ಗಳನ್ನು ಠಾಣೆಗೆ ಕರೆಯಿಸಿ ಅವರ ಚಲನ ವಲನಗಳ ಕುರಿತು ಪೊಲೀಸ್ ಅಧಿಕಾರಿಗಳು ಮಾಹಿತಿ ಪಡೆಯುವ ಸಂದರ್ಭದಲ್ಲಿ ಹಿರಿಯ ಸಾಮಾಜಿಕ ಕಾರ್ಯಕರ್ತ, ಹೋರಾಟಗಾರ, ಮಾಜಿ ರೌಡಿಶೀಟರ್ ಟಿ.ಆರ್.ಕೃಷ್ಣಪ್ಪ ತನ್ನ ಶರ್ಟ್ ಬಟನ್ ಹಾಕಿಕೊಳ್ಳದೆ ಇರುವುದನ್ನು ಗಮನಿಸಿದ ತೀರ್ಥಹಳ್ಳಿ ಡಿವೈಎಸ್ಪಿ ಶಾಂತವೀರಪ್ಪ ಸ್ವತಃ ಶರ್ಟ್ ಬಟನ್ ಹಾಕಿ ಹಿತೋಕ್ತಿ ನೀಡಿದರು.
ಪಿಎಸ್ಐ ಆಗಿ ನೇಮಕಗೊಂಡ ದಕ್ಷ ಅಧಿಕಾರಿಯೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಶಿವಮೂರ್ತಿಯವರು ಠಾಣೆಗೆ ವರ್ಗಾವಣೆಯಾಗಿ ಬಂದ ಸಂದರ್ಭದಲ್ಲಿ ನನಗೆ ಮತ್ತಿತರ ಹಲವರನ್ನು ರೌಡಿ ಲೀಸ್ಟ್ ಗೆ ಸೇರಿಸಿದ್ದರು ನಂತರದಲ್ಲಿ ನಾನು ಯಾವುದೇ ಅಕ್ರಮ ಚಟುವಟಿಕೆಯನ್ನು ಮಾಡದೇ ಇದ್ದು ಸಾಮಾಜಿಕ ಕಾರ್ಯಕರ್ತನಾಗಿ ಶಾಂತಿ ಸೌಹಾರ್ದತೆಯಿಂದ ನಡೆದುಕೊಳ್ಳುತ್ತಿರುವುದಾಗಿ ವಿವರಿಸಿ ನನ್ನ ರೌಡಿ ಶೀಟರ್ನಲ್ಲಿನ ಹೆಸರು ತೆಗೆಯುವಂತೆ ಈ ಹಿಂದೆಯೇ ಮನವಿ ಮಾಡಿಕೊಳ್ಳಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಕೃಷ್ಣಪ್ಪ ಹೇಳಿಕೊಂಡರು.
ಈ ಸಂದರ್ಭದಲ್ಲಿ ಹೊಸನಗರ ವೃತ್ತ ನಿರೀಕ್ಷಕ ಗಿರೀಶ್, ಪಿಎಸ್ಐ ಶಿವಾನಂದಕೋಳಿ ಇನ್ನಿತರ ಪೊಲೀಸ್ ಸಿಬ್ಬಂದಿ ವರ್ಗದವರು ಹಾಜರಿದ್ದರು.