ಮಾಜಿ ಸೈನಿಕರಿಗೆ ಭೂಮಿ ಮಂಜೂರು ಮಾಡಿ: ತಹಶೀಲ್ದಾರ್‌ಗೆ ಮನವಿ

0
536

ಹೊಸನಗರ: ತಾಲ್ಲೂಕಿನಲ್ಲಿ ಸುಮಾರು 25ರಿಂದ 30 ಜನರು ಮಾಜಿ ಸೈನಿಕರಿದ್ದು ಅವರು ಕೆಲವರು ಮಾಜಿ ಸೈನಿಕ ವೃತ್ತಿಯಿಂದ ಬಿಡುಗಡೆಯಾಗಿ 25 ವರ್ಷಗಳೇ ಕಳೆದಿದೆ ಮಾಜಿ ಸೈನಿಕರಿಗೆ ಸರ್ಕಾರಿ ಜಾಗ ಮಂಜೂರಾತಿ ನೀಡಬೇಕೆಂದು ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಜಿಲ್ಲಾಧ್ಯಕ್ಷರಾದ ಹನುಮಂತಪ್ಪನವರ ನೇತೃತ್ವದಲ್ಲಿ ಹೊಸನಗರ ತಾಲ್ಲೂಕು ತಹಶೀಲ್ದಾರ್ ವಿ.ಎಸ್ ರಾಜೀವ್‌ರವರಿಗೆ ತಾಲ್ಲೂಕು ಕಛೇರಿಯ ಆವರಣದಲ್ಲಿ ಮನವಿ ಪತ್ರ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಸರ್ಕಾರದ ಆದೇಶದ ಆನ್ವಯ ಮಾಜೀ ಸೈನಿಕರಿಗೆ ಐದು ಎಕರೆಯವರೆಗೆ ಸರ್ಕಾರಿ ಭೂಮಿ ನೀಡಬೇಕೆಂಬ ಆದೇಶವಿದ್ದರೂ ಜಾಗದ ಕೊರತೆಯಿಂದ ಭೂಮಿ ನೀಡಿಲ್ಲ. ಆದರೆ ಹೊಸನಗರ ತಾಲ್ಲೂಕಿನಲ್ಲಿ ಭೂಮಿಗೆ ಕೊರತೆಯಿಲ್ಲದಿರುವುದರಿಂದ ನಾವು ನೀಡಿರುವ ಅರ್ಜಿಯ ಅನುಕೂಲತೆಯನ್ನು ಮನಗಂಡು ಆಯಾಯ ಗ್ರಾಮಗಳಲ್ಲಿ ನಮಗೆ ಭೂಮಿ ಮಂಜೂರಾತಿ ಮಾಡಬೇಕು.

ನಾವು ವ್ಯವಸಾಯದ ಉದ್ಧೇಶಕ್ಕಾಗಿ ಅರ್ಜಿಯನ್ನು ಸಲ್ಲಿಸುತ್ತಿದ್ದು ಸರ್ಕಾರದ ಆದೇಶವಿದ್ದರೂ ಸಹ ಸರಕಾರಿ ಸಂಸ್ಥೆಗಳ ನಿರ್ಲಕ್ಷ್ಯದಿಂದ ಭೂ ಮಂಜೂರಾತಿಯ ಪ್ರಕ್ರಿಯೆ ವಿಳಂಬವಾಗುತ್ತಿದೆ ನಮ್ಮ ಜೀವಿತಾವಧಿಯಲ್ಲಿ ನಮಗೆ ಭೂಮಿ ಸಿಗುವುದು ಕಷ್ಟಕರ ಅನಿಸುತ್ತಿದೆ ಹಲವಾರು ಯುದ್ಧದಲ್ಲಿ ತಮ್ಮ ಪ್ರಾಣದ ಹಂಗನ್ನು ತೊರೆದು ದೇಶದ ಗಡಿ ಕಾಯುವ ಸಂದರ್ಭದಲ್ಲಿ ಹವಾಮಾನದ ಜೊತೆಗೆ ನಿರಂತರವಾಗಿ ಹೋರಾಡುತ್ತಾ ಶತ್ರುಗಳ ಜೊತೆಗೆ ಮತ್ತು ಉಗ್ರವಾದಿಗಳ ಜೊತೆಗೆ ಸೆಣಸಾಡುವ ನಾವು ಸರ್ಕಾರ ನಮಗೆ ಭೂಮಿ ನೀಡಲು ಮೀನ-ಮೇಷ ಎಣಿಸುತ್ತಿರುವುದು ಬೇಸರದ ಸಂಗತಿ ಎಂದು ಹೇಳಿ, ತಕ್ಷಣ ನಮಗೆ ಭೂಮಿ ಮಾಂಜೂರಾತಿ ಮಾಡಿಕೊಡಬೇಕೆಂದು ಕೇಳಿಕೊಂಡರು.

ಈ ಸಂದರ್ಭದಲ್ಲಿ ಮಾಜಿ ಸೈನಿರಾದ ಸಂಘದ ಪ್ರದಾನ ಕಾರ್ಯದರ್ಶಿ ದಿನೇಶ್, ವಾಸುದೇವ ನಾಯ್ಕ್, ಚಂದ್ರಶೇಖರ, ಎಡ್ವಿನ್ ಆರ್, ಕೃಷ್ಣಮೂರ್ತಿ, ಸತೀಶ್ ಕೆ.ಆರ್, ದ್ವಾರಕೀಶ್, ರಾಜಮೂರ್ತಿ, ಶಿವಾನಂದ, ಅರುಣ್ ಕುಮಾರ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here