ಮಾತೃವಂದನಾ ಯೋಜನೆಯಲ್ಲಿ ನಿಗದಿತ ಗುರಿ ಸಾಧಿಸಿ ಮುಂದೆ ಸಾಗಿದ ಕಾಫಿನಾಡು

0
337

ಚಿಕ್ಕಮಗಳೂರು: ಮೊದಲ ಬಾರಿಗೆ ಗರ್ಭಿಣಿಯಾದ ಮಹಿಳೆಯರಿಗೆ ಪ್ರೋತ್ಸಾಹಧನ ನೀಡುವ ’ಪ್ರಧಾನಮಂತ್ರಿ ಮಾತೃವಂದನಾ ಯೋಜನೆ’ಯು ಜಿಲ್ಲೆಯಲ್ಲಿ ನಿಗದಿತ ಗುರಿ ಮೀರಿದ ಸಾಧನೆಯಾಗಿದೆ. ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯನ್ನು 2027-18ನೇ ಸಾಲಿನಿಂದ ಜಾರಿಗೆ ತರಲಾಗಿದ್ದು. ಈ ಯೋಜನೆಯಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶೇ.60:40ರ ಅನುಪಾತದಲ್ಲಿ ವೆಚ್ಚವನ್ನು ಭರಿಸುತ್ತಿದೆ.

ಈ ಸೌಲಭ್ಯವನ್ನು ಮೊದಲ ಜೀವಂತ ಹೆರಿಗೆಗೆ ಮಾತ್ರ ಸೀಮಿತಗೊಳಿಸಲಾಗಿದೆ. ಈ ಯೋಜನೆಯ ಮೂಲ ಉದ್ದೇಶವು ಮಹಿಳೆಯ ಮೊದಲ ಪ್ರಸವದ ಮತ್ತು ನಂತರದ ವಿಶ್ರಾಂತಿಗಾಗಿ ಆಂಶಿಕ ಪರಿಹಾರವನ್ನು ಪ್ರೋತ್ಸಾಹ ಧನದ ರೂಪದಲ್ಲಿ ವೇತನವನ್ನು ನೀಡಿದವು. ಪ್ರೋತ್ಸಾಹ ಧನ ನೀಡುವುದರಿಂದ ಗರ್ಭಿಣಿ ಮತ್ತು ಬಾಣಂತಿಯರ ಆರೋಗ್ಯದಲ್ಲಿ ಸುಧಾರಣೆ ತರುವುದು.

ಈ ಯೋಜನೆಯ ಪ್ರಮುಖ ವೈಶಿಷ್ಟ್ಯವು, ಬಿಪಿಎಲ್, ಎಪಿಎಲ್ ಬೇಧವಿಲ್ಲದೆ ಎಲ್ಲಾ ವರ್ಗ, ಸಮುದಾಯಗಳ ಮಹಿಳೆಯರಿಗೆ ಇದರ ಪ್ರಯೋಜನ ದೊರಕಲಿದೆ. ಆದರೆ, ಕೇಂದ್ರ ಮತ್ತು ರಾಜ್ಯ ಸರ್ಕಾರಿ ಮಹಿಳಾ ನೌಕರರು ಹಾಗೂ ಸಾರ್ವಜನಿಕ ಉದ್ದಿಮೆಗಳ ಮಹಿಳಾ ನೌಕರರು ಇದಕ್ಕೆ ಅರ್ಹರಿರುವುದಿಲ್ಲ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೂಲಕ ಈ ಯೋಜನೆ ಅನುಷ್ಠಾನಗೊಳ್ಳುತ್ತಿದೆ.

ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯಡಿ ರೂ.5000ಗಳ ಸಹಾಯಧನವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ನೇರ ನಗದು ವರ್ಗಾವಣೆ ಮೂಲಕ ಜಮಾ ಮಾಡಲಾಗುತ್ತಿದೆ. ಈ ಕೆಳಕಂಡಂತೆ 3 ಕಂತುಗಳಲ್ಲಿ ಸಹಾಯಧನವನ್ನು ನೀಡಲಾಗುತ್ತಿದೆ. ಗರ್ಭಿಣಿ ಎಂದು ಅಂಗನವಾಡಿ ಕೇಂದ್ರಗಳಲ್ಲಿ ನೋಂದಣಿ ಮಾಡಿಸಿ ಅರ್ಜಿ ಸಲ್ಲಿಸಿದಾಗ ಮೊದಲ ಕಂತು ರೂ.1000 ಬಿಡುಗಡೆ ಮಾಡಲಾಗುತ್ತದೆ.

ಗರ್ಭಿಣಿಯಾಗಿ 6 ತಿಂಗಳ ನಂತರ ಕನಿಷ್ಠ ಒಂದು ಆರೋಗ್ಯ ತಪಾಸಣೆ ನಡೆಸಿದ ನಂತರ ಅರ್ಜಿ ಸಲ್ಲಿಸಿದ ಮೇಲೆ ಎರಡನೇ ಕಂತು ರೂ.2000 ಬಿಡುಗಡೆಯಾಗಲಿದ್ದು ಮಗು ಜನನ ನೋಂದಣಿ ಮತ್ತು ಮೊದಲನೇ ಹಂತದ ಚುಚ್ಚುಮದ್ದು ಪಡೆದ ನಂತರ ಅರ್ಜಿ ಸಲ್ಲಿಸಿದ ಮೇಲೆ ಮೂರನೇ ಕಂತು ರೂ.3000 ಬಿಡುಗಡೆಗೊಳ್ಳಲ್ಲಿದೆ‌.

ಪ್ರಸ್ತುತ ಜಿಲ್ಲೆಯಲ್ಲಿ ಈ ಯೋಜನೆಯಡಿ 2021-22 ನೇ ಸಾಲಿನಲ್ಲಿ 4499 ಫಲಾನುಭವಿಗಳಿಗೆ ಒಟ್ಟು ರೂ. 1.35 ಕೋಟಿಗಳ ಸಹಾಯಧನವನ್ನು ನೇರವಾಗಿ ಖಾತೆಗೆ ವರ್ಗಾವಣೆ ಮಾಡಲಾಗಿದೆ. ಯೋಜನೆಯ ಪ್ರಾರಂಭದಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ 28586 ಫಲಾನುಭವಿಗಳಿಗೆ ಇದರ ಪ್ರಯೋಜನ ದೊರಕಿದ್ದು, ರೂ.10.88 ಕೋಟಿಗಳ ಸಹಾಯಧನವನ್ನು ನೇರವಾಗಿ ಖಾತೆಗೆ ವರ್ಗಾವಣೆ ಮಾಡಲಾಗಿದೆ.

ತಾಲ್ಲೂಕುವಾರು ವಿವರ ಮಾಹಿತಿಯನ್ನು ನೋಡಿದರೆ ಚಿಕ್ಕಮಗಳೂರು ತಾಲ್ಲೂಕಿನ 7404 ಫಲಾನುಭವಿಗಳಿಗೆ ರೂ. 274.46ಲಕ್ಷ, ಕಡೂರು ತಾಲ್ಲೂಕಿನ 6935 ಫಲಾನುಭವಿಗಳಿಗೆ ರೂ. 264.77 ಲಕ್ಷ, ಕೊಪ್ಪ ತಾಲ್ಲೂಕಿನ 1941 ಫಲಾನುಭವಿಗಳಿಗೆ – ರೂ. 75.14 ಲಕ್ಷ, ಮೂಡಿಗೆರೆ ತಾಲ್ಲೂಕಿನ 3336 ಫಲಾನುಭವಿಗಲಿಗೆ ರೂ. 122.66 ಲಕ್ಷ, ಎನ್.ಆರ್.ಪುರ ತಾಲ್ಲೂಕಿನ 1674 ಫಲಾನುಭವಿಗಲಿಗೆ – ರೂ 65.91 ಲಕ್ಷ, ಶೃಂಗೇರಿ ತಾಲ್ಲೂಕಿನ 803 ಫಲಾನುಭವಿಗಳಿಗೆ ರೂ 31.97 ಲಕ್ಷ, ಹಾಗೂ ತರೀಕೆರೆ ತಾಲ್ಲೂಕಿನಕ 6493 ಫಲಾನುಭವಿಗಳು ರೂ. 252.96ಲಕ್ಷ ವೆಚ್ಚವಾಗಿದೆ.

ಜಿಲ್ಲೆಯಲ್ಲಿ 2021ರ ಏಪ್ರಿಲ್‌ನಿಂದ ಡಿಸೆಂಬರ್‌ವರೆಗೆ ಈ ಯೋಜನೆಗೆ ಸುಮಾರು 4230 ಫಲಾನುಭವಿಗಳ ಗುರಿ ಇಟ್ಟುಕೊಳ್ಳಲಾಗಿತ್ತು. ಆದರೆ ನಿರೀಕ್ಷೆ ಮೀರಿ 4499 ಮಂದಿ ಇದರ ಪ್ರಯೋಜನ ಪಡೆದಿದ್ದು, ಶೇಕಡಾ 106 ಗರಿಷ್ಠ ಸಾಧನೆಯಾಗಿದೆ.

ತಾಲ್ಲೂಕುವಾರು ಶೇಕಡಾವಾರು ಸಾಧನೆಯಲ್ಲಿ ಕಡೂರು ತಾಲ್ಲೂಕು ಶೇಕಡಾ 105, ಚಿಕ್ಕಮಗಳೂರು ತಾಲ್ಲೂಕು. ಶೇಕಡಾ 106, ಕೊಪ್ಪ ತಾಲ್ಲೂಕು ಶೇಕಡಾ 90, ಮೂಡಿಗೆರೆ ತಾಲ್ಲೂಕು ಶೇಕಡಾ 113, ಎನ್.ಆರ್.ಪುರ ತಾಲ್ಲೂಕು ಶೇಕಡಾ 105, ಶೃಂಗೇರಿ ತಾಲ್ಲೂಕು ಶೇಕಡಾ 82 ಹಾಗೂ ತರೀಕೆರೆ ತಾಲ್ಲೂಕು ಶೇಕಡಾ 115ರಷ್ಟು ಪ್ರಗತಿಯಾಗಿದ್ದು ಇದಪ ಗುರಿಮೀರಿದ ಸಾಧನೆಯಾಗಿದೆ.

ಕೆಲವು ಫಲಾನುಭವಿಗಳ ಬ್ಯಾಂಕ್ ಖಾತೆ ಸಮಸ್ಯೆಯಿಂದಾಗಿ ನೇರ ನಗದು ವರ್ಗಾವಣೆಯಲ್ಲಿ ಸಮಸ್ಯೆ ಕಂಡುಬಂದಿತ್ತು. ಬ್ಯಾಂಕುಗಳ ವಿಲೀನ, ಆಧಾರ್ ಸೀಡಿಂಗ್ ಸೇರಿದಂತೆ ಕೆಲವರ ಖಾತೆಯಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿತ್ತು. ಲೀಡ್‌ಬ್ಯಾಂಕ್ ಮೂಲಕ ಈ ಸಮಸ್ಯೆಗಳನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಹಂತದಲ್ಲಿ ಸರಿಪಡಿಸಿ, ನಗದು ವರ್ಗಾವಣೆ ಮಾಡಲಾಗಿದೆ.

ಅರ್ಜಿ ಸಲ್ಲಿಸುವುದು ಹೇಗೆ?

ಮೊದಲ ಬಾರಿಗೆ ಗರ್ಭಿಣಿಯಾದ ಮಹಿಳೆಯರು ತಮ್ಮ ಮನೆ ಸಮೀಪದ ಅಂಗನವಾಡಿ ಕೇಂದ್ರಗಳಿಗೆ ತೆರಳಿ ಇದರ ಅರ್ಜಿ ಪಡೆದು ಸಲ್ಲಿಸಬಹುದು. ಅಂಗನವಾಡಿ ಕಾರ್ಯಕರ್ತೆಯರು ಈ ಅರ್ಜಿಗಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಚೇರಿಗೆ ಕಳುಹಿಸಲಿದ್ದು, ಅಲ್ಲಿಂದ ಆನ್‌ಲೈನ್ ಮೂಲಕ ಅರ್ಜಿ ವಿವರ ನಮೂದಾಗಿ, ನೋಂದಣಿಯಾಗಲಿದೆ. ಬಳಿಕ 3 ಕಂತುಗಳಲ್ಲಿ ಈ ಪ್ರೋತ್ಸಾಹಧನವು ಮಹಿಳೆಯ ಬ್ಯಾಂಕ್ ಖಾತೆಗೆ ಬಿಡುಗಡೆಯಾಗಲಿದೆ.

ಜಾಹಿರಾತು

LEAVE A REPLY

Please enter your comment!
Please enter your name here