ಚಿಕ್ಕಮಗಳೂರು: ನಮಗೆ ನಮ್ಮ ಮಾತೃ ಭಾಷೆಯೇ ಶ್ರೇಷ್ಠ, ಬದಲಿಗೆ ಸಂಪರ್ಕ ಭಾಷೆಯಾಗಿ ಹಿಂದಿ ಬಳಕೆ ತಪ್ಪಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ ರವಿ ಹೇಳಿದರು.
ನಗರದಲ್ಲಿ ಭಾಷೆಯ ವಿವಾದದ ಕುರಿತು ಪ್ರತಿಕ್ರಿಯಿಸಿದ ಅವರು, ಈ ವಿಚಾರಕ್ಕೆ ನಾನು ವಿಶೇಷ ಅರ್ಥ ಕಲ್ಪಿಸಲ್ಲ. ಎಲ್ಲರಿಗೂ ಅವರವ ಮಾತೃ ಭಾಷೆ ಶ್ರೇಷ್ಠ. ಇನ್ನೊಂದು ಭಾಷೆಯನ್ನು ಅತಿಕ್ರಮಿಸುವುದಿಲ್ಲ ಅವರನ್ನು ಸಹ ಗೌರವಿಸುತ್ತೇವೆ ಆದ್ದರಿಂದ ನಮ್ಮ ದೇಶದಲ್ಲಿ ನೂರಾರು ಭಾಷೆಗಳಿವೆ ಒಂದು ಇನ್ನೊಂದು ಭಾಷೆಯನ್ನು ಕೊಂದಿಲ್ಲ, ಕೊಲ್ಲುವುದು ಇಲ್ಲ ಅದು ನಮ್ಮ ಭಾರತದ ಸಂಸ್ಕೃತಿ ಎಂದರು.
ನಾಶ ಮಾಡಿ ಬೆಳೆಯುವುದು ಪರಕೀಯರಿಂದ ಬಂದಂತಹ ಮನೋಭಾವನೆ. ಈ ದೇಶದಲ್ಲಿ ಸಾವಿರಾರು ರಾಜರು ಆಳಿ ಹೋಗಿದ್ದಾರೆ ಯಾರು ಸಹ ಒಂದು ಭಾಷೆಯ ಮೇಲೆ ಮತ್ತೊಂದು ಭಾಷೆಯನ್ನು ಎತ್ತಿಕಟ್ಟುವ ಕೆಲಸ ಮಾಡಿಲ್ಲ, ಒಂದು ಭಾಷೆಯ ಮೇಲೆ ಮತ್ತೊಂದು ಭಾಷೆಯನ್ನು ಏರಿಲ್ಲ ಎಲ್ಲಾ ಭಾಷೆಯೂ ಈ ಕಾರಣದಿಂದಲೇ ಉಳಿದಿದೆ ಈಗಾಗಿ ಇದನ್ನು ಯಾರು ಸಹ ಅತಿರೇಕಕ್ಕೆ ತಗೆದುಕೊಂಡು ಹೋಗುವ ಅವಶ್ಯಕತೆ ಇಲ್ಲ ಎಂದರು.
ಭಾರತದ ಶೇ. 48ರಷ್ಟು ಜನರ ಮಾತೃ ಭಾಷೆ ಹಿಂದಿಯಾಗಿದೆ. ಸಂಪರ್ಕ ಭಾಷೆಯಾಗಿ ಇಂಗ್ಲೀಷ್ ಬದಲಾಗಿ ಹಿಂದಿ ಉಪಯೋಗಿಸಿ ಅಂತಾ ಹೇಳಿದ್ದಾರೆಯೇ ಹೊರತು ಬೇರೆಯ ಉದ್ದೇಶ ಇಲ್ಲ. ಮಾತೃ ಭಾಷೆ ಮಾತನಾಡಲು ಕೀಳರಿಮೆ ಬೇಡ ಅದು ಹೆಮ್ಮೆಯ ವಿಷಯ ಎಂದರು.
Related