24.3 C
Shimoga
Friday, December 9, 2022

ಮಾದಕ ದ್ರವ್ಯ ಸೇವನೆ, ಮಾರಾಟ ಶಿಕ್ಷಾರ್ಹ ಅಪರಾಧ ; ನ್ಯಾಯಾಧೀಶ ಕೆ ರವಿಕುಮಾರ್

ಹೊಸನಗರ : ಮಾದಕ ದ್ರವ್ಯ ಸೇವನೆ ಮತ್ತು ಮಾರಾಟ ಶಿಕ್ಷಾರ್ಹ ಅಪರಾಧವೆಂದು ಹೊಸನಗರ ಜೆಎಂಎಫ್ಸಿ ನಾಯಾಲಯದ ನ್ಯಾಯಾಧೀಶ ಕೆ ರವಿಕುಮಾರ್ ಹೇಳಿದರು.

ಪಟ್ಟಣದ ಕೊಡಚಾದ್ರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪಟ್ಟಣದ ಜೆಎಂಎಫ್ಸಿ ನ್ಯಾಯಾಲಯದ ಕಾನೂನು ಸೇವಾ ಸಮಿತಿ ಕಾನೂನು ನೆರವು ಮತ್ತು ಅರಿವು ಕಾರ್ಯಕ್ರಮದಲ್ಲಿ ಮಾದಕ ದ್ರವ್ಯ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಏರ್ಪಡಿಸಿದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಹದಿಹರೆಯದ ಹುಡುಗರು ಮಾದಕ ದ್ರವ್ಯದ ಚಟಕ್ಕೆ ದಾಸರಾಗುತ್ತಿರುವುದರ ಬಗ್ಗೆ ವಿಷಾದ ವ್ಯಕ್ತಪಡಿಸಿ, ವಿದ್ಯಾರ್ಥಿಗಳ ಕಾಲೇಜು ಜೀವನ ಸುವರ್ಣ ಯುಗ ಇದ್ದಂತೆ ಈ ಅವಧಿಯಲ್ಲಿ ಓದಿನ ಬಗ್ಗೆ ಗಮನ ಹರಿಸಬೇಕೆಂದು ಕರೆ ನೀಡಿ ವಿದ್ಯಾರ್ಜನೆಯಿಂದ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಆಶಿಸಿದರು.

ಪೊಲೀಸ ಸರ್ಕಲ್ ಇನ್ಸ್‌ಪೆಕ್ಟರ್ ಬಿಸಿ ಗಿರೀಶ್ ರವರು ಮಾತನಾಡಿ, ಯಾರು ಕಾನೂನು ಗೌರವಿಸುತ್ತಾರೋ ಅವರಿಗೆ ಕಾನೂನಿನ ಸಂಪೂರ್ಣ ರಕ್ಷಣೆ ದೊರಕುತ್ತದೆ. ಎಲ್ಲರೂ ಕಾನೂನು ಆ ರೀತಿ ಇರಬೇಕು ಕಾನೂನಿನ ಅರಿವಿಲ್ಲವೆಂದು ಸಬೂಬು ಹೇಳುವಂತಿಲ್ಲ. ಅಮಲು ಪದಾರ್ಥ ಸೇವನೆ ಕಾನೂನಿಗೆ ವಿರುದ್ಧವಾಗಿದೆ. ಇಂಜೆಕ್ಷನ್ ಕೆಲವು ಮಾತ್ರೆಗಳು ತಂಪುಪಾನೀಯಗಳ ಅನಿಯಮಿತ ಸೇವನೆಯಿಂದ ಅಮಲು ಉಂಟಾಗುತ್ತದೆ. ಇವುಗಳ ಸೇವನೆಯಿಂದ ವಿದ್ಯಾರ್ಥಿಗಳು ದೂರವಿರಬೇಕು.

ವಾಹನ ಚಾಲನೆ ಮಾಡುವ ಮುನ್ನ ಎಲ್ಲ ಕಾನೂನುಗಳ ಅರಿವು ಇರಬೇಕು ವಾಹನದ ಎಫ್ ಸಿ, ಆರ್ ಸಿ, ಇನ್ಶುರೆನ್ಸ್, ಎಮಿಷನ್ ಟೆಸ್ಟ್ ಜೊತೆಗೆ ವಾಹನದ ಚಾಲನ ನಿಯಮ ಅರಿತಿರಬೇಕು. ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಚಾಲನ ಪರವಾನಗಿ ಶಿರಸ್ತ್ರಾಣವನ್ನು ಚತುಸ್ಚಕ್ರ ವಾಹನ ಪ್ರಯಾಣಿಕರ ಕಡ್ಡಾಯವಾಗಿ ಸೀಟ್ ಬೆಲ್ಟ್ ಹೊಂದಬೇಕೆಂದು ಹಾಗೂ ಕಾಲೇಜು ಯುವಕ ಯುವತಿ ಯಾರು ಮೊಬೈಲ್ ಇಂಟರ್ನೆಟ್ ಬಳಕೆಗಳನ್ನು ವಿದ್ಯಾರ್ಜನೆಗೆ ಮಾತ್ರ ಬಳಸಬೇಕೆಂದು ಅಪ್ರಾಪ್ತ ಬಾಲಕಿಯರೊಂದಿಗೆ ವ್ಯವಹರಿಸುವಾಗ ಜಾಗೃತರಾಗಿರಬೇಕೆಂದು ಸ್ವಲ್ಪ ತಪ್ಪಿದರೂ ದುಬಾರಿ ದಂಡದೊಂದಿಗೆ ಜೈಲು ವಾಸ ತಪ್ಪಿದ್ದಲ್ಲ ಎಂದರು.

ಕಾಲೇಜಿನ ಪ್ರಾಚಾರ್ಯ ಡಾ. ಕೆ ಪ್ರಭಾಕರ್ ರಾವ್ ಅಧ್ಯಕ್ಷತೆ ವಹಿಸಿದ ಸಮಾರಂಭದಲ್ಲಿ ಸಬ್ ಇನ್ಸ್‌ಪೆಕ್ಟರ್ ನೀರರಾಜ ನರಲಾರ, ಕಾಲೇಜ್ ಎನ್ಎಸ್ಎಸ್ ಘಟಕದ ಕಾರ್ಯಕ್ರಮ ಅಧಿಕಾರಿ ದೊಡ್ಡಯ್ಯ, ಇಂಗ್ಲೀಷ್ ವಿಭಾಗದ ಜಯಪ್ಪ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ರಾಕೇಶ್ ಸ್ವಾಗತಿಸಿದರು. ರವಿಕುಮಾರ್ ವಂದಿಸಿದರು.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!