ಮಾನವನ ದುರಾಸೆಯಿಂದಾಗಿ ನೀರಿನ ಮೂಲಗಳಿಗೆ ಕಂಟಕ: ವಿಷಾದ

0
302

ರಿಪ್ಪನ್‌ಪೇಟೆ: ಹನಿ ನೀರು ಹರಿಯದಂತೆ ನೀರಿನ ಉಳಿತಾಯ ಮಾಡುವುದರಿಂದಾಗಿ ಭೂಮಿಯಲ್ಲಿ ಅಂತರ್ಜಲ ವೃದ್ದಿ ಮಾಡಲು ಸಾಧ್ಯ. ನಲ್ಲಿಯ ನೀರು ಹನಿ-ಹಿನಿಯಾಗಿ ಸುರಿಯುತ್ತಿದ್ದರೂ ಜನರು ನಿರ್ಲಕ್ಷ್ಯ ಭಾವನೆಯಲ್ಲಿ ನೋಡಿಕೊಂಡು ಹೋಗುತ್ತಾರೆ ಇದರಿಂದ ಎರಡು ದಿನಕಾಲ ಓರ್ವ ಮನಷ್ಯ ಕುಡಿಯುವಷ್ಟ ನೀರು ಹಾಳಾಗುತ್ತದೆಂದು ಮಹಾತ್ಮಗಾಂಧಿ ರೂರಲ್ ಡೆವಲಪ್‌ಮೆಂಟ್ ಅಂಡ್ ಯೂತ್ ವೆಲ್‌ಫೇರ್ ಸೆಂಟರ್ ನೋಡಲ್ ಆಧಿಕಾರಿ ನಂಜುಂಡಯ್ಯ ವಿಷಾದ ವ್ಯಕ್ತಪಡಿಸಿದರು.

ರಿಪ್ಪನ್‌ಪೇಟೆ ಗ್ರಾಮ ಪಂಚಾಯ್ತಿ ಸಭಾಭವನದಲ್ಲಿ ಶಿವಮೊಗ್ಗ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ. ಮಹಾತ್ಮಗಾಂಧಿ ರೂರಲ್ ಡೆವಲಪ್‌ಮೆಂಟ್ ಅಂಡ್ ಯೂತ್ ವೆಲ್‌ಫೇರ್ ಸೆಂಟರ್ ಸಂಯುಕ್ತ ಆಶ್ರಯದಲ್ಲಿ ವಿಶೇಷ ಗ್ರಾಮ ಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿ, ಮನುಷ್ಯನ ದುರಾಸೆಯಿಂದಾಗಿ ಅರಣ್ಯ ನಾಶ ಸೇರಿದಂತೆ ನೀರಿನ ಮೂಲವಾದ ಕೆರೆಗಳು ಮುಚ್ಚಿ ಮನೆ ನಿವೇಶಗಳನ್ನು ನಿರ್ಮಿಸಲಾಗುತ್ತಿದ್ದು ಇದರಿಂದ ಪರಿಸರದ ಮೇಲೆ ದಕ್ಕೆಯುಂಟಾಗಿದೆ ಈಗಾಗಲೇ ಅತಿ ಹೆಚ್ಚು ಮಳೆ ಬೀಲುವ ಪ್ರದೇಶಗಳಲ್ಲಿ ಸಹ ಮಳೆಯ ಪ್ರಮಾಣ ವರ್ಷದಿಂದ ವರ್ಷಕ್ಕೆ ಕ್ಷೀಣಿಸಲಾರಂಭಿಸಿದೆ ಅಲ್ಲದೆ ಪ್ಲಾಸ್ಟಿಕ್ ಬಳಕೆಯಿಂದಾಗಿ ಸಹ ಮಣ್ಣಿನಲ್ಲಿ ಫಲವತ್ತತ್ತೆ ಸಹ ಇಲ್ಲದ ಸ್ಥಿತಿ ಕಂಡುಬರುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಜಲಸಂರಕ್ಷಣೆಯೊಂದಿಗೆ ತ್ಯಾಜ್ಯ ಘಟಕವನ್ನು ಆರಂಭಿಸುವ ಮೂಲಕ ಜನಜಾಗೃತಿ ಕಾರ್ಯಕ್ರಮ ರೂಪಿಸಿ ಕಸದಿಂದ ರಸ ತಗೆಯುವುದರೊಂದಿಗೆ ಪರಿಸರ ಸಂರಕ್ಷಣೆ ತ್ಯಾಜ್ಯವಸ್ತುಗಳನ್ನು ಸಂಗ್ರಹಿಸಿ ಇಟ್ಟಿಗೆ ಎರೆಹುಳಗೊಬ್ಬರ ಹೀಗೆ ವಿವಿಧ ಉಪಯುಕ್ತ ವಸ್ತುಗಳನ್ನು ತಯಾರಿಸಿ ಮಾರಾಟಮಾಡುವ ಯೋಜನೆ ಅನುಷ್ಠಾನಗೊಳಿಸಿದ್ದು ಎಲ್ಲರು ಸಹಕರಿಸಿ ನೀರಿನ ಮೀತಬಳಕೆ ಮತ್ತು ಪರಿಸರ ಸಂರಕ್ಷಣೆ ಮಾಡಿ ಮುಂದಿನ ಪೀಳಿಗಗೆ ಉತ್ತಮ ಪರಿಸರ ಶುದ್ದ ಕುಡಿಯುವ ನೀರು ಬಳಕೆ ಬಗ್ಗೆ ಜಾಗೃತಿ ಮೂಡಿಸುವಂತೆ ಕರೆ ನೀಡಿದರು.

ಗ್ರಾಮಾಧ್ಯಕ್ಷೆ ಮಂಜುಳಾ ಕೇರ್ತಾಜಿರಾವ್ ಅಧ್ಯಕ್ಷತೆ ವಹಿಸಿದ್ದರು.

ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ಮಹಾಲಕ್ಷ್ಮೀ, ಗ್ರಾಮ ಪಂಚಾಯ್ತಿ ಮಾಜಿ ಸದಸ್ಯ ಕೊಳವಳ್ಳಿ ಎಂ.ರಾಜೇಶ್.ಪಿಡಿಓ ಜೆ.ಚಂದ್ರಶೇಖರ್ ಇನ್ನಿತರ ಪಂಚಾಯ್ತಿ ಸದಸ್ಯರುಗಳು ಪಾಲ್ಗೊಂಡಿದ್ದರು.

ಪಿಡಿಓ ಜೆ.ಚಂದ್ರಶೇಖರ್ ಸ್ವಾಗತಿಸಿ ನಿರೂಪಿಸಿದರು.ನಾಗೇಶ್ ಮೋರೆ ವಂದಿಸಿದರು.

ಜಾಹಿರಾತು

LEAVE A REPLY

Please enter your comment!
Please enter your name here