ಮಾರಣಾಂತಿಕ ಹಲ್ಲೆ ನಡೆಸಿದ ಆರೋಪಿಗಳಿಗೆ 03 ವರ್ಷ ಕಠಿಣ ಶಿಕ್ಷೆ, 10 ಸಾವಿರ ರೂ. ದಂಡ !

0
485

ಶಿವಮೊಗ್ಗ: ವ್ಯಕ್ತಿಯೋರ್ವನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪಿಗಳಿಗೆ ಜಿಲ್ಲಾ ಸತ್ರ ನ್ಯಾಯಾಲಯ 03 ವರ್ಷ ಕಠಿಣ ಶಿಕ್ಷೆ, 10 ಸಾವಿರ ರೂ. ದಂಡ ವಿಧಿಸಿದೆ.

ಘಟನಾ ವಿವರ :

2015ರ ಆ.18ರಂದು ಮಧ್ಯಾಹ್ನ ಕುಂಸಿ ಪೊಲೀಸ್ ಠಾಣಾ ವ್ಯಾಪ್ತಿಯ ಹಾರನಹಳ್ಳಿ ಗ್ರಾಮದ ವಾಸಿಯಾದ ಸಯ್ಯದ್ ಮಜರ್ (58) ರವರು ತಮ್ಮ ಹಾಗೂ ಪಕ್ಕದ ಮನೆಯ ನಡುವಿನ ಓಣಿಯನ್ನು ಅಳತೆ ಮಾಡಿಸುತ್ತಿದ್ದಾಗ ಪಕ್ಕದ ಮನೆಯವರಾದ ಅತೀಕ್ ಅಹಮ್ಮದ್, ನಿಸಾರ್ ಅಹಮ್ಮದ್, ಸಿದ್ದಿಕ್, ಶಮ್ಮು, ಮುಜಾಹಿದ್, ಫೈರೋಜ್, ಖಯೂಮ್ ರವರುಗಳು ಅವಾಚ್ಯ ಶಬ್ದಗಳಿಂದ ಬೈದು, ಕುಡುಗೋಲು ಮತ್ತು ಮರದ ರೀಫರ್ ಗಳಿಂದ ಮಾರಣಾಮತಿಕ ಹಲ್ಲೆ ಮಾಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಕಲಂ 323, 324, 504, 506, 307, 147, 148 ಸಹಿತ 149 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ಆಗಿನ ತನಿಖಾಧಿಕಾರಿಗಳಾದ ಕುಂಸಿ ಠಾಣೆಯ ಪಿಎಸ್ಐ ಮಂಜುನಾಥ್ ರವರು ಪ್ರಕರಣದ ತನಿಖೆ ಕೈಗೊಂಡು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು.

ಸರ್ಕಾರಿ ಅಭಿಯೋಜಕರಾದ ಪುಷ್ಪ ಪ್ರಕರಣದ ವಾದ ಮಂಡಿಸಿದ್ದು, ಜಿಲ್ಲಾ ಸತ್ರ ನ್ಯಾಯಾಲಯ ಶಿವಮೊಗ್ಗದಲ್ಲಿ ಪ್ರಕರಣದ ವಿಚಾರಣೆ ನಡೆದು ನ್ಯಾಯಧೀಶರಾದ ಮುಸ್ತಫಾ ಹುಸೇನ್‍ ಎಸ್‍ ಎ ರವರು ಇಂದು ಹಾರನಹಳ್ಳಿ ಗ್ರಾಮದ ವಾಸಿಗಳಾದ ಅತೀಕ್ ಅಹಮ್ಮದ್ (34), ಸಿದ್ದಿಕ್ (25) ಶಮ್ಮು (30) ಫೈರೋಜ್ (21) ಮತ್ತು ಖಯೂಮ್ (58) ಇವರುಗಳ ವಿರುದ್ಧ ಕಲಂ 307 ಐಪಿಸಿ ಅಡಿಯಲ್ಲಿ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಈ 05 ಜನ ಆರೋಪಿಗಳಿಗೆ 03 ವರ್ಷಗಳ ಕಾಲ ಕಠಿಣ ಕಾರಾವಾಸ ಶಿಕ್ಷೆ ಮತ್ತು 10 ಸಾವಿರ ರೂ. ದಂಡ, ದಂಡವನ್ನು ಕಟ್ಟಲು ವಿಫಲರಾದರೆ ಹೆಚ್ಚುವರಿಯಾಗಿ 03 ತಿಂಗಳ ಕಾಲ ಸಾದಾ ಕಾರವಾಸ ಶಿಕ್ಷೆ ನೀಡಿ ಆದೇಶ ನೀಡಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here