23.2 C
Shimoga
Sunday, November 27, 2022

ಮಾರುತಿಪುರ ಪ್ರೌಢ ಶಾಲೆಯ ವಿದ್ಯಾರ್ಥಿನಿಯರು ಪ್ರತಿಭಾ ಕಾರಂಜಿಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ


ಹೊಸನಗರ: ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಜನಪದ ನೃತ್ಯದಲ್ಲಿ ಮಾರುತಿಪುರ ಸರ್ಕಾರಿ ಪ್ರೌಡ ಶಾಲೆಯ ವಿದ್ಯಾರ್ಥಿನಿಯರು ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.


ಈ ಪ್ರತಿಭಾ ಕಾರಂಜಿಯು ಗುರೂಜಿ ಶಾಲೆಯ ಆವರಣದಲ್ಲಿ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ನಡೆದಿದ್ದು ತಾಲ್ಲೂಕು ಮಟ್ಟದ ಜನಪದ ನೃತ್ಯದಲ್ಲಿ ವಿದ್ಯಾಥಿನಿಯರಾದ ದಿವ್ಯಾ, ನಮಿತಾ, ದಿಯಾ, ಮಾನಸ, ಸ್ನೇಹ, ಸೌಜನ್ಯ ಅನನ್ಯ, ಸುವರ್ಣ ಇನ್ನೂ ಮುಂತಾದವರು ಭಾಗವಹಿಸಿದ್ದರು.


ತಾಲ್ಲೂಕು ಮಟ್ಟದ ಪೌಡ ಶಾಲೆಯ ಪ್ರತಿಭಾ ಕಾರಂಜಿಯಲ್ಲಿ ಹಿಂದಿ ಭಾಷಣ ಸ್ಪರ್ಧೆಯಲ್ಲಿ ಇದೇ ಪ್ರೌಢ ಶಾಲೆಯ ವಿದ್ಯಾರ್ಥಿನಿ ವರ್ಷ ಪಿ ಯವರು ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.


ಅಭಿನಂದನೆ:

ಗ್ರಾಮೀಣ ಪ್ರದೇಶದ ವಿದ್ಯಾರ್ಥಿನಿಯರು ಹಾಗೂ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳು ತಾಲ್ಲೂಕು ಮಟ್ಟದಿಂದ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುವುದು ಸಂತಾಸ ತಂದಿದೆ. ಇವರು ಜಿಲ್ಲಾ ಮಟ್ಟದಲ್ಲಿಯು ಪ್ರಶಸ್ತಿ ಗಳಿಸಲಿ ಎಂದು ಈ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರಾದ ಮಂಜಪ್ಪ ಹಾಗೂ ಎಸ್‌ಡಿಎಂಸಿ ಸದಸ್ಯರು ಹಾಗೂ ಈ ಶಾಲೆಯ ಮುಖ್ಯ ಶಿಕ್ಷಕಿಯರಾದ ವಿಜಯ ಕುಮಾರಿ ಹಾಗೂ ಸಹ ಶಿಕ್ಷಕ ವೃಂದ ಹಾಗೂ ಗ್ರಾಮಸ್ಥರು ಅಭಿನಂದಿಸಿ ಶುಭ ಹಾರೈಸಿದ್ದಾರೆ.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!