ಮಾಳೂರು ಪಿಎಸ್ಐ ಜಯಪ್ಪ ನಾಯ್ಕ್ ದಿಢೀರ್ ವರ್ಗಾವಣೆ ! ನೂತನ ಪಿಎಸ್ಐ ಯಾರು ಗೊತ್ತಾ ?

0
535

ತೀರ್ಥಹಳ್ಳಿ: ತಾಲೂಕಿನ ಮಾಳೂರು ಸಬ್ ಇನ್ಸ್‌ಪೆಕ್ಟರ್ ಜಯಪ್ಪ ನಾಯ್ಕ್ ಅವರನ್ನು ದಿಢೀರ್ ವರ್ಗಾವಣೆ ಮಾಡಲಾಗಿದೆ. ಅವರ ಸ್ಥಾನಕ್ಕೆ ನೂತನ ಸಬ್ ಇನ್ಸ್‌ಪೆಕ್ಟರ್ ಆಗಿ ನವೀನ್ ಎಂಬುವವರು ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಮಾಳೂರು ಸಬ್ ಇನ್ಸ್‌ಪೆಕ್ಟರ್ ಜಯಪ್ಪ ನಾಯ್ಕ್ ವಿರುದ್ಧ ಇತ್ತೀಚಿನ ಕೆಲವು ದಿನಗಳಿಂದ ಸಾಕಷ್ಟು ಆರೋಪಗಳು ಕೇಳಿ ಬಂದಿತ್ತು ಅಲ್ಲದೆ ಇವರ ವಿರುದ್ಧ ಕೆಲ ಅಮಾಯಕ ಲಾರಿ ಚಾಲಕರಿಂದ ಹಾಗೂ ಮಾಲೀಕರಿಗೆ ಇಲ್ಲಸಲ್ಲದ ವಿಷಯಕ್ಕೆ ತೊಂದರೆ ಕೊಡುತ್ತಿರುವ ಬಗ್ಗೆ ಆರೋಪವಿತ್ತು.

ಎರಡು ದಿನಗಳ ಹಿಂದೆ ಲಾರಿ ಮಾಲೀಕರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ ಅದನ್ನೂ ಬೇಕಾದರೆ ರೆಕಾರ್ಡ್ ಮಾಡಿಕೊಳ್ಳುವಂತೆಯೂ ಸೂಚಿಸಿ ಯಾವುದೇ ಹಿರಿಯ ಅಧಿಕಾರಿಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂಬ ದರ್ಪದ ಹಾಗೂ ಉಡಾಫೆ ಮಾತುಗಳು ಆಡಿದ್ದರ ಬಗ್ಗೆ ಹಾಗೂ ಹಣದ ವಿಷಯದ ಬಗ್ಗೆ ಆ ಸಂಭಾಷಣೆಯಲ್ಲಿ ರೆಕಾರ್ಡ್ ಆಗಿದ್ದು ಈ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಜಿಲ್ಲಾ ದಕ್ಷ ಪ್ರಾಮಾಣಿಕ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಆಡಿಯೋ ತಲುಪಿದ ಬೆನ್ನಲ್ಲೇ ಸಬ್ ಇನ್ಸ್‌ಪೆಕ್ಟರ್ ಜಯಪ್ಪ ನಾಯ್ಕ್ ದಿಢೀರ್ ವರ್ಗಾವಣೆ ಆಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಡಿವೈಎಸ್ಪಿ ಶಾಂತವೀರ, ಸರ್ಕಲ್ ಇನ್ಸ್ಪೆಕ್ಟರ್ ಪ್ರವೀಣ್ ನೀಲಮ್ಮನವರ್ ಸೇರಿ ಪೊಲೀಸ್ ಇಲಾಖೆ ಉತ್ತಮ ಕಾರ್ಯನಿರ್ವಹಿಸುತ್ತಿದೆ. ಆದರೆ ಮಾಳೂರು ಸಬ್ ಇನ್ಸ್‌ಪೆಕ್ಟರ್ ಜಯಪ್ಪನಾಯ್ಕ್ ಅವರ ದರ್ಪದ ವರ್ತನೆ ನಿಜಕ್ಕೂ ಪೊಲೀಸ್ ಇಲಾಖೆಗೆ ಕಪ್ಪು ಚುಕ್ಕೆ ತರುವಂತದ್ದು. ಆದ್ದರಿಂದ ಇಂತಹ ಪೊಲೀಸರನ್ನು ವರ್ಗಾವಣೆ ಮಾಡುವುದಲ್ಲ ಅಮಾನತು ಮಾಡಬೇಕು ಎಂಬುದಾಗಿ ಹಲವರು ಆಗ್ರಹಿಸುತ್ತಿರುವುದು ಕೇಳಿ ಬರುತ್ತಿದೆ.

ಜಾಹಿರಾತು

LEAVE A REPLY

Please enter your comment!
Please enter your name here