ಮಾಳೂರು ಪೊಲೀಸ್ ಠಾಣೆಯಿಂದ ವರ್ಗಾವಣೆಗೊಂಡಿದ್ದ ಪಿಎಸ್ಐ ಜಯಪ್ಪನಾಯ್ಕ್ ಸಸ್ಪೆಂಡ್ !!

0
729

ತೀರ್ಥಹಳ್ಳಿ : ತಾಲೂಕಿನ ಮಾಳೂರು ಪೊಲೀಸ್ ಠಾಣೆಯಿಂದ ವರ್ಗಾವಣೆಗೊಂಡಿದ್ದ ಪಿಎಸ್ಐ ಜಯಪ್ಪ ನಾಯ್ಕ್ ನನ್ನು ಸಸ್ಪೆಂಡ್ ಮಾಡಲಾಗಿದೆ.

ಎರಡು ದಿನಗಳ ಹಿಂದೆ ಅಕ್ರಮ ಮರಳುಗಾರಿಕೆ ವಿಚಾರದಲ್ಲಿ ಲಾರಿ ಮಾಲೀಕರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ವಿಚಾರವಾಗಿ ಪಿಎಸ್ಐ ಜಯಪ್ಪ ನಾಯ್ಕ್ ನನ್ನು ವರ್ಗಾವಣೆ ಮಾಡಲಾಗಿತ್ತು. ಆದರೆ ಜಯಪ್ಪ ನಾಯ್ಕ್ ಪರ್ಮಿಟ್ ತೆಗೆದುಕೊಂಡು ಮರಳು ಹೊಡೆಯುತ್ತಿದ್ದ ಲಾರಿ ಮಾಲೀಕರು ಹಾಗೂ ಚಾಲಕರಿಗೆ ಹೆದರಿಸಿ ಬೆದರಿಸಿ ಲಂಚವನ್ನು ತೆಗೆದುಕೊಳ್ಳುತ್ತಿದ್ದ ಎಂದು ಕಾಲ್ ರೆಕಾರ್ಡ್ ನಲ್ಲಿ ಬಹಿರಂಗಗೊಂಡಿದ್ದು ಇದೆ ಕಾರಣಕ್ಕೆ ಪೂರ್ವ ವಲಯದ ಡಿಐಜಿ ತ್ಯಾಗರಾಜನ್ ಜಯಪ್ಪ ನಾಯ್ಕ್ ನನ್ನು ಸಸ್ಪೆಂಡ್ ಮಾಡಲು ಆದೇಶ ಹೊರಡಿಸಿದ್ದಾರೆ.

ಹಲವು ಅಧಿಕಾರಿಗಳು ಶಾಮೀಲಾಗಿರುವ ಶಂಕೆ ?

ಇನ್ನು ತೀರ್ಥಹಳ್ಳಿ ಗೃಹಸಚಿವರ ತವರೂರಾಗಿದ್ದು ಆರಗ ಜ್ಞಾನೇಂದ್ರ ಇಲ್ಲಿಂದಲೇ ಶಾಸಕರಾಗಿರುವುದು. ಶಾಸಕರಾಗಿದ್ದಾಗ ಹಲವು ಬಾರಿ ಜ್ಞಾನೇಂದ್ರ ಅಕ್ರಮ ಮರಳುಗಾರಿಕೆ ಬಗ್ಗೆ ಮಾತಾಡಿದ್ದರು. ಗೃಹಸಚಿವರಾದ ಮೇಲೆ ಅಕ್ರಮ ಮರಳುಗಾರಿಕೆ ಜಾಸ್ತಿ ಆಗಿದೆಯೇ ಹೊರತು ಕಡಿಮೆಯಾಗಿಲ್ಲ. ಇಲ್ಲಿ ಒಟ್ಟು 13 ಮರಳು ಕ್ವಾರೆಗಳಿವೆ. ಅಂದರೆ ಸರ್ಕಾರದ ಪರವಾನಿಗೆ ಪಡೆದ ಕ್ವಾರೆಗಳು ಅದರಲ್ಲಿಯೂ ಸಹ ಅಕ್ರಮವಾಗಿ ಮರಳುಗಾರಿಕೆ ನಡೆಯುತ್ತಿದೆ.

ಒಂದು ಲಾರಿ ಮರಳು ಹೊಡೆಯುವುದಾಗಿ ಹೇಳಿ 2- 3 ಲಾರಿ ಮರಳು ಹೊಡೆಯುತ್ತಾರೆ. ಇದರಲ್ಲಿ ಹಲವು ಪೊಲೀಸ್ ಅಧಿಕಾರಿಗಳು, ಗಣಿ ವಿಜ್ಞಾನ ಅಧಿಕಾರಿಗಳು ಸೇರಿ ಹಲವು ಅಧಿಕಾರಿಗಳ ಶಾಮೀಲಾಗಿರುವುದು ತಿಳಿಯುತ್ತದೆ. ಪೊಲೀಸರಷ್ಟೇ ಅಲ್ಲದೇ ಇದರಲ್ಲಿ ರಾಜಕಾರಣಿಗಳು ಶಾಮೀಲಾಗಿದ್ದಾರೆ. ಒಂದು ವೇಳೆ ಲಾರಿಗಳನ್ನು ಪೊಲೀಸರು ಹಿಡಿದರೆ ಅದನ್ನು ತಕ್ಷಣವೇ ಬಿಡಲು ರಾಜಕಾರಣಿಗಳು ಹೇಳುತ್ತಾರೆ. ಹೀಗಾಗಿ ಇಡೀ ವ್ಯವಸ್ಥೆಯೇ ಅಕ್ರಮ ಮರಳು ಮಾಫಿಯಾದ ಜೊತೆ ಕೈಜೋಡಿಸಿದಂತಾಗಿದೆ.

ಜಾಹಿರಾತು

LEAVE A REPLY

Please enter your comment!
Please enter your name here