ಮಾ.13, 14 ರಂದು ಕೋಣಂದೂರು ಉತ್ಸವ ಆಯೋಜನೆ

0
357

ಶಿವಮೊಗ್ಗ: ಕೋಣಂದೂರು ಅಭಿಮಾನಿಗಳ ಒಕ್ಕೂಟದ ವತಿಯಿಂದ ಈ ತಿಂಗಳ 13 ಹಾಗು 14 ರಂದು ಕೋಣಂದೂರು ಉತ್ಸವ ಆಯೋಜಿಸಲಾಗಿದೆ ಎಂದು ಕಾರ್ಯಕಾರಿ ಸಮಿತಿ ಅಧ್ಯಕ್ಷ ಕೆ. ಗಂಗಪ್ಪಗೌಡ ತಿಳಿಸಿದರು.

ಅವರು ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ‌ ಮಾತನಾಡಿ, ಶಿವಮೊಗ್ಗ ಜಿಲ್ಲೆ ಮತ್ತು ಮತ್ತಿತರ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸಿ ಊರಿನ ಕೀರ್ತಿಗೆ ಪಾತ್ರರಾಗಿರುವ ಕೋಣಂದೂರು ಅಭಿಮಾನಿ ಒಕ್ಕೂಟ ಇವರೆಲ್ಲರು ಒಮ್ಮೆಯಾದರು ತಮ್ಮ ಹುಟ್ಟೂರಾದ ಕೋಣಂದೂರಿನಲ್ಲಿ ಸೇರಿ ಸಂಭ್ರಮಿಸುವ ಉತ್ಸವ ಕಾರ್ಯಕ್ರಮ ಕೋಣಂದೂರಿನಲ್ಲಿ‌ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಈ ಉತ್ಸವದಲ್ಲಿ ವಸ್ತುಪ್ರದರ್ಶನ, ರಂಗೋಲಿ, ಚಿತ್ರಕಲಾ, ಭರತನಾಟ್ಯ ಕಲಾ ಪ್ರದರ್ಶನ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.

ಕೋಣಂದೂರು ಮತ್ತು ಸುತ್ತಮುತ್ತಲಿನ ಗ್ರಾಮದವರು ತಮ್ಮ ಕಾರ್ಯ ಕ್ಷೇತ್ರದಲ್ಲಿ ಬಹಳಷ್ಟು ಶ್ರಮಿಸಿ, ಅವರು ಮಾಡಿರುವ ಸಾಧನೆ, ಆ ಸಾಧನೆಯಲ್ಲಿಯ ಸಾಧಕ ಬಾಧಕಗಳ ವಿವರಗಳನ್ನು ಮತ್ತು ಅವರ ಅನುಭವವದ ಮಾರ್ಗದರ್ಶನವನ್ನು ಒಳಗೊಂಡ ಮಾಹಿತಿ ಪಡೆದು ಈ ಕಾರ್ಯಕ್ರಮದಲ್ಲಿ ಸಾಧಕರ ಕಿರು ಪರಿಚಯದ ಸಂಚಿಕೆ ಹೊರತರಲಾಗುವುದು ಎಂದರು.

ಈ ಮೂಲಕ ಕೋಣಂದೂರು ಮತ್ತು ಸುತ್ತಮುತ್ತಲ ಗ್ರಾಮದ ಪ್ರತಿಭಾನ್ವಿತರ, ಸಾಧಕರ ಸಂಕ್ಷಿಪ್ತ ಪರಿಚಯ ಸಾರ್ವಜನಿಕರಿಗೆ,ಯುವಮಿತ್ರರಿಗೆ ದೊರೆತು, ಅವರುಗಳೂ ಪ್ರತಿಭಾನ್ವಿತರು ಮತ್ತು ಸಾಧಕರು ಆಗುವಲ್ಲಿ ಪ್ರೇರಣೆ ಆಗಲೆಂಬುದು ಈ ಉತ್ಸವದ ಆಶಯ ಎಂದು ತಿಳಿಸಿದರು.

ಸಂಸದ ಬಿ.ವೈ ರಾಘವೇಂದ್ರ ಸಾಧಕರ ಕಿರುಪರಿಚಯ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ ಎಂದರು. ಮುಖ್ಯ ಅತಿಥಿಗಳಾಗಿ ಶಾಸಕ ಆರಗ ಜ್ಞಾನೇಂದ್ರ ಹಾಗೂ ಮತ್ತಿತರ ಗಣ್ಯರು ಹಾಜರಿರುವರು ಎಂದರು.

ಗೋಷ್ಠಿಯಲ್ಲಿ ಭಾಸ್ಕರ್, ಎಸ್.ಎಂ ವಿಷ್ಣು ಮೂರ್ತಿ ಮತ್ತಿತರರು ಹಾಜರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here