ರಿಪ್ಪನ್ಪೇಟೆ: ಇಲ್ಲಿನ ಶ್ರೀಸಿದ್ದಿವಿನಾಯಕ ವಾಲಿಬಾಲ್ ಕ್ಲಬ್ನ 9ನೇ ವರ್ಷದ ರಾಜ್ಯಮಟ್ಟದ ಆಹ್ವಾನಿತ ತಂಡಗಳ ಹೊನಲು ಬೆಳಕಿನ ಪಂದ್ಯಾವಳಿಯನ್ನು ಮಾರ್ಚ್ 27 ರಂದು ಶನಿವಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಏರ್ಪಡಿಸಲಾಗಿದೆ ಎಂದು ಸಿದ್ದಿವಿನಾಯಕ ವಾಲಿಬಾಲ್ ಕ್ಲಬ್ ಅಧ್ಯಕ್ಷ ಅರಸಾಳು ಅರುಣ್ಕುಮಾರ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ಈ ಪಂದ್ಯಾವಳಿಯನ್ನು ಹಿರಿಯ ವಾಲಿಬಾಲ್ ಕ್ರೀಡಾಪಟು ಬಿ.ಪ್ರಕಾಶ್ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ವಾಲಿಬಾಲ್ ಕ್ಲಬ್ ಅಧ್ಯಕ್ಷ ಅರಸಾಳು ಅರುಣ್ಕುಮಾರ್ ವಹಿಸುವರು.
ಮುಖ್ಯತಿಥಿಗಳಾಗಿ ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಹರತಾಳು ಹಾಲಪ್ಪ, ಆರಗ ಜ್ಞಾನೇಂದ್ರ, ತಾ.ಪಂ ಅಧ್ಯಕ್ಷ ವೀರೇಶ್ ಆಲವಳ್ಳಿ, ಜಿ.ಪಂ ಸದಸ್ಯರಾದ ಕು.ಶ್ವೇತಾ ಆರ್.ಬಂಡಿ, ಕಲಗೋಡು ರತ್ನಾಕರ್, ಸುರೇಶ್ ಸ್ವಮಿರಾವ್, ಗ್ರಾ.ಪಂ ಅಧ್ಯಕ್ಷೆ ಮಂಜುಳಾ ಕೇತಾರ್ಜಿರಾವ್, ಉಪಾಧ್ಯಕ್ಷೆ ಮಹಾಲಕ್ಷ್ಮೀ ಇನ್ನಿತರ ಗಣ್ಯರು ಭಾಗವಹಿಸುವರು ಎಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಗೌರವಾಧ್ಯಕ್ಷ ಪ್ರಕಾಶ್ಶೆಟ್ಟಿ, ಕಾರ್ಯದರ್ಶಿ ಶ್ರೀನಿವಾಸ್ ಆರ್ (ಗ್ಯಾರೇಜ್ ಸೀನ), ರವಿ ಆರ್ಟ್ಸ್, ಸತೀಶ್ಶೆಟ್ಟಿ, ಡಿ.ಈ.ರವಿಭೂಷಣ, ರಾಮಚಂದ್ರ, ಕಾರ್ತಿಕ, ಸಂದೀಪ, ಪಿ. ಸುಧೀರ್, ಕೆ.ವಿ.ಮಂಜುನಾಥ ಇನ್ನಿತರರು ಹಾಜರಿದ್ದರು.