ಮಾ. 28 ರಂದು ರಿಪ್ಪನ್‌ಪೇಟೆ ಶಿವಮಂದಿರದ ಯಡಿಯೂರಪ್ಪ ಸಭಾಭವನ ಕಾಮಗಾರಿ ವೀಕ್ಷಣೆಗೆ ರಂಭಾಪುರಿ ಜಗದ್ಗುರುಗಳು

0
348

ರಿಪ್ಪನ್‌ಪೇಟೆ: ಇಲ್ಲಿನ ಶಿವಮಂದಿರಕ್ಕೆ ರಾಜ್ಯದ ಹಿಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಅವಧಿಯಲ್ಲಿ 1.50 ಕೋಟಿ ರೂ. ಅನುದಾನವನ್ನು ನೀಡುವ ಮೂಲಕ ಸುಸಜ್ಜಿತ ಸಭಾಭವನ ನಿರ್ಮಾಣ ಕಾಮಗಾರಿ ಭರದಿಂದ ಸಾಗಿದ್ದು ಈ ಯಡಿಯೂರಪ್ಪ ಸಭಾಭವನ ಕಟ್ಟಡ ಕಾಮಗಾರಿಯ ವೀಕ್ಷಣೆಗೆ ಮಾರ್ಚ್ 28 ರಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಜಗದ್ಗುರು ಡಾ.ಪ್ರಸನ್ನ ರೇಣುಕ ವೀರಸೋಮಶೇಖರ ಭಗವತ್ಪಾದರು ಭೇಟಿ ನೀಡುವರು ಎಂದು ಶ್ರೀ ಬಸವೇಶ್ವರ ವೀರಶೈವ ಸಮಾಜದ ಮುಖಂಡರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾರ್ಚ್ 28 ರಂದು ಸೋಮವಾರ ಮಧ್ಯಾಹ್ನ 3 ಗಂಟೆಗೆ ಜಗದ್ಗುರುಗಳು ತಳಲೆ-ಕಗ್ಗಲಿಯಿಂದ ರಿಪ್ಪನ್‌ಪೇಟೆಯ ಶಿವಮಂದಿರಕ್ಕೆ ಭೇಟಿ ನೀಡಿ ಕಾಮಗಾರಿಯನ್ನು ವೀಕ್ಷಿಸಿ ಸಮಾಜ ಭಾಂದವರೊಂದಿಗೆ ಸಮಾಲೋಚನೆ ನಡೆಸುವರು.

ಮಳಲಿ ಮಠದ ಡಾ. ಗುರುನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಲಿದ್ದು, ಈ ಸಭೆಗೆ ಸಮಾಜ ಭಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಜಗದ್ಗುರುಗಳ ದರ್ಶನಾಶೀರ್ವಾದ ಪಡೆದುಕೊಳ್ಳುವಂತೆ ಶ್ರೀ ಬಸವೇಶ್ವರ ವೀರಶೈವ ಸಮಾಜದ ಮುಖಂಡರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here