ಮಾ. 30 ಮತ್ತು 31 ರಂದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ; ಡಿ. ಮಂಜುನಾಥ್

0
193

ಶಿವಮೊಗ್ಗ: 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಮಾರ್ಚ್ 30 ಮತ್ತು 31ರಂದು ಗೋಪಿಶೆಟ್ಟಿಕೊಪ್ಪದ ಸಾಹಿತ್ಯ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ. ಮಂಜುನಾಥ ಹೇಳಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ, ಸಂಶೋಧಕ ಡಾ. ಕೆಳದಿ ಗುಂಡಾ ಜೋಯ್ಸ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದರು.

ಮಾ.30ರಂದು ಬೆಳಿಗ್ಗೆ 10ಕ್ಕೆ ಗೋಪಾಳದ ಸರ್ಕಾರಿ ಶಾಲೆಯಲ್ಲಿ ಸಮ್ಮೇಳನಾಧ್ಯಕ್ಷರು ಪುಸ್ತಕ ವಿತರಿಸುವರು, ನಂತರ ರಾಜಬೀದಿ ಉತ್ಸವದೊಂದಿಗೆ ಅವರನ್ನು ಸಮ್ಮೇಳನ ನಡೆಯುವ ಸಾಹಿತ್ಯ ಗ್ರಾಮಕ್ಕೆ ಕರೆತರಲಾಗುವುದು. ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಈ ಉತ್ಸವಕ್ಕೆ ಚಾಲನೆ ನೀಡುವರು ಎಂದರು.

ಇದಕ್ಕೂ ಮೊದಲು 9.30ಕ್ಕೆ ಧ್ವಜಾರೋಹಣ ನಡೆಸಲಾಗುವುದು. ಇದರ ನಿರ್ವಹಣೆಯನ್ನು ಜಿಲ್ಲಾ ಭಾರತ ಸೇವಾದಲ ವಹಿಸುವರು, ನಂತರ 10 ಗಂಟೆಗೆ ಗಮಕ ಸುಗಮ ಸಂಗೀತವಿರುತ್ತದೆ. ಹೊಸನಗರದ ಅನುಪಮ ಸುರೇಶ್, ಡಾ. ರಾಜೇಂದ್ರ ತಗಡ್ಲಿ ಈ ಕಾರ್ಯಕ್ರಮ ನಡೆಸಿಕೊಡುವರು ಎಂದರು.

10.30ಕ್ಕೆ `ಹಣತೆ ಹಚ್ಚೋಣ ಬನ್ನಿ’ ವೇದಿಕೆ ಕಾರ್ಯಕ್ರಮ ಆರಂಭವಾಗಲಿದೆ. ಡಿ. ಮಂಜುನಾಥ ಆಶಯ ಭಾಷಣ ಮಾಡುವರು. ಸಾಹಿತಿ ಪ್ರೊ. ಕೃಷ್ಣೇಗೌಡ, ಹಿಂದಿನ ಸಮ್ಮೇಳನಾಧ್ಯಕ್ಷೆ ಡಾ. ವಿಜಯದೇವಿ ಉಪಸ್ಥಿತರಿರುವರು. ಗೃಹಸಚಿವ ಆರಗ ಜ್ಞಾನೇಂದ್ರ ಪುಸ್ತಕ ಲೋಕಾರ್ಪಣೆಗೊಳಿಸುವರು. ಸಂಸದ ಬಿ.ವೈ. ರಾಘವೇಂದ್ರ ಪುಸ್ತಕ ಪ್ರದರ್ಶನಕ್ಕೆ ಚಾಲನೆ ನೀಡುವರು. ಕ.ಸಾ.ಪ. ರಾಜ್ಯಾಧ್ಯಕ್ಷ ಡಾ. ಮಹೇಶ್ ಜೋಷಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಮುಖ್ಯ ಅತಿಥಿಗಳಾಗಿ‌ಶಾಸಕರಾದ ಕೆ.ಬಿ. ಅಶೋಕ ನಾಯ್ಕ, ಆಯನೂರು ಮಂಜುನಾಥ, ಎಸ್. ರುದ್ರೇಗೌಡ ಮುಂತಾದವರು ಆಗಮಿಸುವರು ಎಂದರು.

ಮಧ್ಯಾಹ್ನ 2.30ಕ್ಕೆ ಮೊದಲ ಗೋಷ್ಠಿಯಲ್ಲಿ `ಹಾಲುಹಳ್ಳ ಹರಿಯಲಿ’ ಎಂಬ ವಾಕ್ಯದೊಡನೆ ಕವಿಗೋಷ್ಠಿಯನ್ನು‌ ಆಯೋಜಿಸಲಾಗಿದೆ. 4.30ಕ್ಕೆ 2ನೇ ಗೋಷ್ಠಿ `ಸಮ್ಮೇಳನ ಅಧ್ಯಕ್ಷರ ಬದುಕು-ಬರಹ’ ಕುರಿತು‌ ಇರುತ್ತದೆ. ಡಾ. ಕೆ.ಜಿ. ವೆಂಕಟೇಶ್, ಡಾ. ಕೆಳದಿ ಗುಂಡಾಜೋಯ್ಸ್ ಅವರ ಸಾಹಿತ್ಯ ಕೃತಿಗಳ ಅವಲೋಕಿಸುವರು. ಸಂಜೆ 6ಕ್ಕೆ 3ನೇ ಗೋಷ್ಠಿಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ? ಕನ್ನಡ ಕುರಿತು ಬೆಂಗಳೂರು ವಿವಿ ಪ್ರಾಧ್ಯಾಪಕ ಡಾ. ರಾಮಲಿಂಗಪ್ಪ ಬೇಗೂರು ಮಾತನಾಡುವರು. ಮಾಜಿ ಶಾಸಕ ವೈ.ಎಸ್.ವಿ. ದತ್ತಾ ಅಧ್ಯಕ್ಷತೆ ವಹಿಸುವರು ಎಂದರು.

ಮಾ.31ರಂದು ಬೆಳಿಗ್ಗೆ 10.30ಕ್ಕೆ ನಾಲ್ಕನೇ ಗೋಷ್ಠಿ `ಹೊಸ ಓದು, ಹೊಸ ದನಿ’ ಕುರಿತು ನಡೆಯಲಿದೆ. ಭದ್ರಾವತಿಯ ದೀಪ್ತಿ, ಡಾ. ಶಿವಲಿಂಗೇಗೌಡ, ಡಾ. ಅರಡಿ ಮಲ್ಲಯ್ಯ, ಡಾ. ಪುರುಷೋತ್ತಮ ಭಾಗವಹಿಸಲಿದ್ದಾರೆ.

ಐದನೇ ಗೋಷ್ಠಿ ಮಧ್ಯಾಹ್ನ 12.30ಕ್ಕೆ ಆರಂಭವಾಗಲಿದ್ದು, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಿ.ಎಸ್. ನಾಗಭೂಷಣ‌ ಅವರ `ಗಾಂಧಿ ಕಥನ’ ಕುರಿತು ಡಾ. ಸಿರಾಜ್‌ ಅಹ್ಮದ್ ಮತ್ತು ಡಾ, ಮೌಲಾನಾ ಹಂಜಾದ್‌ಹುಸೇನ್ ಕುರಿತು ಡಾ. ಮೋಹನ್ ಚಂದ್ರಗುತ್ತಿ ಸ್ಪಂದನೆ ನೀಡುವರು. 2.30ಕ್ಕೆ ಗೋಷ್ಠಿ 6ರಲ್ಲಿ ಕವಿಗೋಷ್ಠಿ ನಡೆಯಲಿದೆ. ಇದರ ಅಧ್ಯಕ್ಷತೆಯನ್ನು ಪ್ರೊ. ಮಾರ್ಷನ್ ಶರಾಮ್ ವಹಿಸುವರು 4.30ಕ್ಕೆ ಡಾ. ಶ್ರೀಪತಿ ಹಳಗುಂದ ಅವರ ಹೊಸಕೃತಿಗಳ ಪುಸ್ತಕ ಅವಲೋಕನ ಗೋಷ್ಠಿ 7ರಲ್ಲಿ‌ ನಡೆಯಲಿದೆ. ಪ್ರಾಧ್ಯಾಪಕ ಡಾ. ರತ್ನಾಕರ ಸಿ.ಕುನುಗೋಡು ಪುಸ್ತಕ ಕುರಿತು ಮಾತನಾಡುವರು‌ ಎಂದರು.

ಸಂಜೆ 5.30ಕ್ಕೆ ಸಮಾರೋಪ ಸಮಾರಂಭ‌ ನಡೆಯಲಿದೆ. ಸಾಗರದ ಸಾಹಿತಿ ಡಾ. ನಾ.ಡಿಸೋಜಾ ಸಮಾರೋಪ ನುಡಿಗಳನ್ನಾಡುವರು. ಸಮ್ಮೇಳನಾಧ್ಯಕ್ಷ ಡಾ. ಕೆಳದಿ‌ ಗುಂಡಾಜೋಯ್ಸ್ ಅವರನ್ನು ಸಚಿವ ಕೆ.ಎಸ್.‌ ಈಶ್ವರಪ್ಪ ಅಭಿನಂದಿಸುವರು. ಇವರ ಜೊತೆಗೆ‌ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ. ಹೆಚ್.ಆರ್. ಕೇಶವಮೂರ್ತಿ , ಡಾ.ಪಿ.ಶಾಂತರಾಮ ಪ್ರಭು, ಎಂ.ಬಿ. ಚನ್ನವೀರಪ್ಪ, ನಾಗೇಶ್ ಕುಲಾಲ, ಮಧುಸೂದನ ಐತಾಳ್ ಇವರನ್ನು ಅಭಿನಂದಿಸಲಾಗುವುದು ಎಂದರು.

ನಂತರ 7 ಗಂಟೆಗೆ ಗಾನಸುಧೆ ಕಾರ್ಯಕ್ರಮ ನಡೆಯಲಿದೆ. ಕೆ.ಯುವರಾಜ್, ಕಾಶಿಬಾಯಿ ಜನಪದಗೀತೆ, ಭಾವಗೀತೆ ಹಾಡುವರು. ವಿಶೇಷ ಆಹ್ವಾನಿತರಾಗಿ ಪ್ರೊ. ಸತ್ಯನಾರಾಯಣರಾವ್ ಅಣತಿ, ಶ್ರೀಕಂಠ ಕೂಡಿಗೆ, ರಾಜಪ್ಪ ಮಾಸ್ತರ್, ವಿಜಯಶ್ರೀಧರ್, ಹೆಗ್ಗೋಡು ಪ್ರಸನ್ನ, ಕೆ.ವಿ. ಅಕ್ಷರ, ಕೋಣಂದೂರು ಲಿಂಗಪ್ಪ, ಗರ್ತಿಕೆರೆ ರಾಘಣ್ಣ ಸೇರಿದಂತೆ ಹಲವು ಹಿರಿಯ ಸಾಹಿತಿಗಳು ಭಾಗವಹಿಸುವರು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಸಾಪದ ಗೌರವ ಕಾರ್ಯದರ್ಶಿ ಎಸ್. ಶಿವಮೂರ್ತಿ, ತಾಲ್ಲೂಕು ಅಧ್ಯಕ್ಷೆ ಮಹಾದೇವಿ, ಪ್ರಮುಖರಾದ ಕೃಷ್ಣಮೂರ್ತಿ, ರತ್ನಯ್ಯ, ಶಿವಪ್ಪ ಸೇರಿದಂತೆ ಹಲವರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here