ಮಿನಿ ಅಂಗನವಾಡಿ ಕಟ್ಟಡದ ಜಾಗಕ್ಕೆ ಅರಣ್ಯ ಇಲಾಖೆ ಅಡ್ಡಗಾಲು ; ಹೊಟ್ಯಾಳಪುರ ಗ್ರಾಮಸ್ಥರಿಂದ ಪ್ರತಿಭಟನೆ

0
367

ರಿಪ್ಪನ್‌ಪೇಟೆ: ಸುಮಾರು ಐದಾರು ವರ್ಷಗಳ ಹಿಂದೆ ಅರಸಾಳು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ತಮ್ಮಡಿಕೊಪ್ಪ ಮಜರೆ ಹೊಟ್ಯಾಳಪುರ ಮಿನಿ ಅಂಗನವಾಡಿಯಲ್ಲಿ ಮಗುವೊಂದಕ್ಕೆ ಹಾವು ಕಡಿದು ಸಾವನ್ನಪ್ಪಿರುವ ಘಟನೆ ಜನಮಾನಸದಲ್ಲಿ ಮಾಸುವ ಮುನ್ನವೇ ಸರ್ಕಾರದಿಂದ ಸುಸಜ್ಜಿತ ಮಿನಿ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಲಾಗಿದ್ದು ಜಾಗ ಇಲ್ಲದೆ ಕಟ್ಟಡ ಕಟ್ಟುವುದಾದರೂ ಹೇಗೆ ಎಂಬ ಚಿಂತೆಯಲ್ಲಿದ್ದ ಗ್ರಾಮಸ್ಥರಿಗೆ ಮೂಗುಡ್ತಿ ವನ್ಯ ಜೀವಿ ವಲಯದ ಅರಣ್ಯ ಇಲಾಖೆಯ ಜಾಗದಲ್ಲಿ ಏಕಾಏಕಿ ಗ್ರಾಮಸ್ಥರು ತಾತ್ಕಾಲಿಕ ಶೆಡ್ ನಿರ್ಮಿಸಿ ಇಂದು ಮಕ್ಕಳೊಂದಿಗೆ ಕಾರ್ಯಕರ್ತೆಯವನ್ನು ಬಿಡುಬಿಡಲಾಗಿ ತಕ್ಷಣ ಅರಣ್ಯ ಇಲಾಖೆಯವರು ತಾತ್ಕಾಲಿಕ ಶೆಡ್ ತೆರವುಗೊಳಿಸಲು ಮುಂದಾದ ಘಟನೆಗೆ ಅರಸಾಳು ಗ್ರಾಮ ಪಂಚಾಯ್ತಿ ಅಧ್ಯಕ್ಷ ಉಮಾಕರ ಮತ್ತು ಸ್ವಾಮಿನಾಯ್ಕ ಸೇರಿದಂತೆ ಹೊಟ್ಯಾಳಪುರ ಗ್ರಾಮದ ನೂರಾರು ಮಹಿಳೆಯರು ರೈತ ನಾಗರೀಕರು ಪ್ರತಿಭಟನೆ ನಡೆಸಿದರು.


‘ಕೂಸು ಹುಟ್ಟುವ ಮುನ್ನ ಕುಲಾವಿ ಹೊಲೆಸಿದರು’ ಎಂಬಂತೆ ಅರಸಾಳು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ತಮ್ಮಡಿಕೊಪ್ಪ ಗ್ರಾಮದ ಮಜರೆ ಹೊಟ್ಯಾಳಪುರ ಗ್ರಾಮದಲ್ಲಿ ಮಿನಿ ಅಂಗನವಾಡಿ ಕೆಂದ್ರಕ್ಕೆ ಪಂಚಾಯ್ತಿಗೆ ಮತ್ತು ಕಂದಾಯ ಅಥವಾ ಅರಣ್ಯ ಜಾಗ ಕೊಡುವಂತೆ ಅರ್ಜಿ ಸಲ್ಲಿಸಬೇಕು ನಂತರ ಜಾಗ ಮಂಜೂರಾದ ಮೇಲೆ ಸರ್ಕಾರ ಅನುದಾನ ನೀಡಬೇಕು ಆದರೆ ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲೆಸಿದರು ಎಂಬ ಗಾದೆ ಮಾತಿನಂತೆ ಜಾಗವೇ ಇಲ್ಲದೆ ಹಣ ಬಿಡುಗಡೆ ಮಾಡಿ ಮಿನಿ ಅಂಗನವಾಡಿ ಕಟ್ಟುವುದಾದರೂ ಹೇಗೆ ಎಂಬ ಜಿಜ್ಞಾಸೆಯಲ್ಲಿ ಗ್ರಾಮಸ್ಥರು ಗೊಂದಲಕ್ಕೊಳಗಾಗುವಂತಾಗಿ ಕೊನೆಗೆ ಊರಿನವರು ಸೇರಿ ಅರಣ್ಯ ಇಲಾಖೆಗೆ ಸೇರಿದ ಜಾಗವನ್ನು ಗುರುತಿಸಿ ಗ್ರಾಮಸ್ಥರು ಸೇರಿ ತಾತ್ಕಾಲಿಕ ಶೆಡ್ ನಿರ್ಮಿಸಿ ಅದೇ ಕಟ್ಟಡದಲ್ಲಿ ಅಂಗನವಾಡಿ ನಡೆಸಿ ಸಂಘಟನೆಯಲ್ಲಿ ಬಲವಿದೆ ಹೋರಾಟ ನಡೆಸಿ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಕಣ್ಣು ತೆರೆಸುವತ್ತ ಮುಂದಾದರು.


ಪ್ರತಿಭಟನೆಯಲ್ಲಿ ಕೇಶವ, ಷಣ್ಮುಖ, ನಾಗಪ್ಪ, ಹೇಮಾವತಿ, ಕಮಲಾಕ್ಷಿ, ನಾಗಮ್ಮ, ಸುಜಾತ, ಪುಷ್ಪ, ದೇವಮ್ಮ, ಪಾರ್ವತಮ್ಮ, ಗಿರಿಜಮ್ಮ, ಲಕ್ಷ್ಮಮ್ಮ, ಸರೋಜ, ದುರ್ಗಮ್ಮ, ಉಮಾಕಾಂತ, ಮಂಜುನಾಥ, ತುಳಸಿ, ಕುಮಾರ, ನಾಗರಾಜ, ಉಮೇಶಪ್ಪ, ರಾಜಪ್ಪ ಇನ್ನಿತರ ಹಲವು ಗ್ರಾಮಸ್ಥರು ಅಂಗನವಾಡಿ ಮಕ್ಕಳೊಂದಿಗೆ ಪ್ರತಿಭಟನೆ ನಡೆಸಿದರು.


ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಮೂಗುಡ್ತಿ ವನ್ಯಜೀವಿ ವಲಯ ಅರಣ್ಯಾಧಿಕಾರಿ ಅಫ್ರೀನ್ ನಾಜ್ ಮತ್ತು ಉಪವಲಯ ಅರಣ್ಯಾಧಿಕಾರಿಗಳಾದ ನದಾಫ್, ಸಂದೀಪ ಹಾಗೂ ಅರಣ್ಯ ರಕ್ಷಕ ಹೊಳೆಬಸಪ್ಪ ಇನ್ನಿತರ ಇಲಾಖೆ ಸಿಬ್ಬಂದಿವರ್ಗ ಭೇಟಿ ನೀಡಿ ಅಹವಾಲು ಸ್ವಿಕರಿಸಿ ಸಿಡಿಪಿಓ ಮತ್ತು ಗ್ರಾಮ ಪಂಚಾಯ್ತಿ ಪಿಡಿಓರೊಂದಿಗೆ ಚರ್ಚಿಸಿ ಮೇಲಾಧಿಕಾರಿಗಳಿಗೆ ಪತ್ರ ಬರೆದು ಜಾಗ ನೀಡುವುದಾಗಿ ಭರವಸೆ ನೀಡಿ ಅಲ್ಲಿಯವರೆಗೆ ಆಂಗನವಾಡಿ ತೆರೆಯದಂತೆ ತಿಳಿ ಹೇಳಿದರು.

ಜಾಹಿರಾತು

LEAVE A REPLY

Please enter your comment!
Please enter your name here