23.2 C
Shimoga
Sunday, November 27, 2022

ಮುಂದಿನ ವಿಧಾನಸಭೆ ಚುನಾವಣೆಗೆ ನಾನು ಸಾಗರ ಕ್ಷೇತ್ರದ ಪ್ರಬಲ ಆಕಾಂಕ್ಷಿ ; ಹೊಸ ಬಾಂಬ್ ಸಿಡಿಸಿದ ಕಲಗೋಡು ರತ್ನಾಕರ್


ಹೊಸನಗರ: ಮುಂದಿನ ವರ್ಷ ನಡೆಯುವ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ನಾನು ಪ್ರಬಲ ಆಕಾಂಕ್ಷಿಯಾಗಿದೇನೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕಲಗೋಡು ರತ್ನಾಕರ್‌ ಹೊಸ ಬಾಂಬ್ ಸಿಡಿಸಿದರು.

ಪಟ್ಟಣದ ಕಾಂಗ್ರೆಸ್ ಕಚೇರಿ (ಗಾಂಧಿಮಂದಿರ)ಯಲ್ಲಿ ಸುದ್ಧಿಗೊಷ್ಟಿ ನಡೆಸಿ ಮಾತನಾಡಿ, ನಾನು 33 ವರ್ಷದಿಂದ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಸೇವೆ ಸಲ್ಲಿಸಿದ್ದೇನೆ. 33 ವರ್ಷಗಳಿಂದ ಸಾಕಷ್ಟು ಚುನಾವಣೆಯನ್ನು ಎದರಿಸಿರುವ ಚುನಾವಣೆಯಲ್ಲಿ ಸಾಕಷ್ಟು ಅಭ್ಯರ್ಥಿಗಳನ್ನು ಗೆಲ್ಲಿಸಿರುವುದರ ಜೊತೆಗೆ ನಾನು ಚುನಾಯಿತ ಪ್ರತಿನಿಧಿಯಾಗಿ ಸೇವೆ ಸಲ್ಲಿಸಿರುವ ಅನುಭವವಿದೆ. ಮುಂದಿನ ವರ್ಷ ನಡೆಯುವ ವಿಧಾನಸಭೆಯ ಚುನಾವಣೆಯಲ್ಲಿ ನಮ್ಮ ಹಿರಿಯ ಗುರುಗಳು ಕಾಂಗ್ರೆಸ್ ಪಕ್ಷದ ಮಾಜಿ ಕಂದಾಯ ಸಚಿವರಾದ ಕಾಗೋಡು ತಿಮ್ಮಪ್ಪನವರು ಸ್ಪರ್ಧಿಸಿದರೆ ನಾನು ಸ್ಪರ್ಧಿಸುವುದಿಲ್ಲ ಇಲ್ಲವಾದರೆ ಕಾಂಗ್ರೆಸ್ ಪಕ್ಷದ ಹೊಸನಗರ, ಸಾಗರ ಕ್ಷೇತ್ರದ ವಿಧಾನಸಭೆಯ ಚುನಾವಣೆಗೆ ನಾನು ಪ್ರಬಲ ಆಕಾಂಕ್ಷಿಯಾಗಿದ್ದು ಹೈಕಮಾಂಡ್ ನನಗೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಲಿದ್ದು ನಾನು ಕಾಂಗ್ರೆಸ್ ಪಕ್ಷದ ಪ್ರಬಲ ಆಕಾಂಕ್ಷಿ ಎಂದು ಹೇಳುವ ಮೂಲಕ ಮತ್ತಷ್ಟು ಕುತೂಹಲ ಮೂಡಿಸಿದ್ದಾರೆ.


ಗ್ರಾಮ ಪಂಚಾಯಿತಿಗಳ ಅಧಿಕಾರ ನಿಷ್ಕ್ರೀಯಗೊಳಿಸುವಲ್ಲಿ ರಾಜ್ಯ ಸರಕಾರ ಹುನ್ನಾರ ನಡೆಸಿದೆ. ಸೋಲಾರ್ ಅಳವಡಿಕೆ, ಸ್ವಚ್ಚಭಾರತ ತ್ಯಾಜ್ಯ ವಿಲೇವಾರಿ ವಾಹನ ಖರೀದಿ, ಕೋವಿಡ್ ಪರಿಹಾರ ನೀಡುವ ವಿಷಯದಲ್ಲಿ ಗ್ರಾಮ ಪಂಚಾಯಿತಿ ಆಡಳಿತಗಳನ್ನು ಕಡೆಗಣಿಸಿ ವ್ಯವಹರಿಸಲಾಗಿದೆ. ಗ್ರಾಮ ಪಂಚಾಯಿತಿ ಹಣವನ್ನು ಬೇಕಾಬಿಟ್ಟಿ ಖರ್ಚು ಮಾಡಿಸಲು ಸರಕಾರ ದಿನಕ್ಕೊಂದು ಆದೇಶ ನೀಡುತ್ತಿದೆ. ಇದರಿಂದ ಸ್ಥಳೀಯ ಸಂಸ್ಥೆಗೆ ಯಾವುದೇ ಅಧಿಕಾರವಿಲ್ಲದೇ, ಬರಿಗೈನಲ್ಲಿ ಕೂರುವಂತೆ ಮಾಡಿದೆ. ಕ್ಷೇತ್ರದ ಶಾಸಕರ ಪಂಚಾಯಿತಿ ಹಣವನ್ನು ಸಹಾ ಲೂಟಿ ಮಾಡಲು ಹೊರಟಿದ್ದಾರೆ ಎಂದು ದೂರಿದರು.


ಭೂತಾನ್‌ನಿಂದ ಅಡಿಕೆ ರಪ್ತು ನೀಲ್ಲಿಸಬೇಕು ಇಲ್ಲಿನ ರೈತರು ಬೆಳೆದ ಅಡಿಕೆಗಳಿಗೆ ಬೆಲೆ ಕಡಿಮೆಯಾಗುತ್ತಿದ್ದೂ ಈಗಾಗಲೇ 10ಸಾವಿರ ಅಡಿಕೆ ಬೆಲೆಯಲ್ಲಿ ಕುಸಿತ ಕಂಡಿದೆ ಭೂತಾನ್‌ನಿಂದ ಅಡಿಕೆ ರಪ್ತು ಮಾಡಿಸಿಕೊಂಡರೆ ಅಡಿಕೆ ಬೆಲೆಯಲ್ಲಿ ಕುಸಿತಗೊಂಡು ಅಡಿಕೆ ಬೆಲೆಯಲ್ಲಿ ಕುಸಿತದಿಂದ ರೈತರು ಸಂಕಷ್ಟಕ್ಕೆ ಒಳಗಾಗಲಿದ್ದು ಇದರಿಂದ ಅಡಿಕೆ ಬೆಳೆಗಾರರ ಕುಟುಂಬ ಬೀದಿಗೆ ಬರಲಿದೆ ತಕ್ಷಣ ಅಡಿಕೆ ಅಮದು ನಿಲ್ಲಿಸಲಿ ಎಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು.


ಶರಾವತಿ ಸಂತಸ್ಥರು ಗೋಳು ಬಿಜೆಪಿ ಸರ್ಕಾರಕ್ಕೆ ಕೇಳುತ್ತಿಲ್ಲ ಕಾಗೋಡು ತಿಮ್ಮಪ್ಪನವರು ಕಂದಾಯ ಸಚಿವರಾದ ಸಂದರ್ಭದಲ್ಲಿ ಶರಾವತಿ ರೈತರ ಪರವಾಗಿ ಕೆಲಸ ಮಾಡಿದ್ದು 1959ರಿಂದ 64ರಲ್ಲಿ ಶರಾವತಿ ರೈತರ ಭೂಮಿಗೆ ಡಿನೋಟಿಫಿಕೇಶನ್ ಮಾಡಲಾಗಿದ್ದು ಇದರ ಅನ್ವಯ 9000ಸಾವಿರ ಎಕರೆ ಕಂದಾಯ ಭೂಮಿಯಾಗಿ ಪರಿವರ್ತಿಸಿ ಹಕ್ಕುಪತ್ರವನ್ನು ರೈತರಿಗೆ ನೀಡಲಾಗಿದ್ದು ಕೆಲವು ಪ್ರದೇಶಗಳಿಗೆ ಸರ್ಕಾರದ ಆದೇಶ ರದ್ದು ಮಾಡಿದ್ದು ಆದರೆ ಉಳಿದ ಜಾಗವನ್ನು ಮಂಜೂರಾತಿ ಮಾಡಲು ಸ್ವಷ್ಟ ಆದೇಶವಿದ್ದರೂ ಇಂದಿನ ಬಿಜೆಪಿ ಸರ್ಕಾರ ಹಾಗೂ ಶಾಸಕರು ಶರಾವತಿ ಸಂತ್ರಸ್ಥರ ಪರ ನಿಲ್ಲದೇ ಸುಮ್ಮನೆ ಸಮಯ ಕಳೆಯುತ್ತಿದ್ದಾರೆ ಎಂದರು.


ಹೊಸನಗರ ತಾಲ್ಲೂಕಿನಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳು ಕಂಠಿತಗೊಂಡಿದೆ ರಸ್ತೆ ಕಾಮಾಗಾರಿಗಳು ಸರಿಯಾಗಿ ನಡೆಯುತ್ತಿಲ್ಲ ಮುಂದಿನ ವಿದಾನ ಸಭೆಯ ಚುನಾವಣೆಯಲ್ಲಿ ಹೊಸನಗರ-ಸಾಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸ್ಪಷ್ಟ ಜಯಗೊಳಿಸಿದ್ದೇವೆ ಜನರು ಬಿಜೆಪಿ ಶಾಸಕರನ್ನು ಸೋಲಿಸಲಿದ್ದಾರೆ ಎಂದರು.


ಈ ಸಂದರ್ಭದಲ್ಲಿ ತಾಲ್ಲೂಕು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಬಿ.ಜಿ.ನಾಗರಾಜ್, ಜಯಶೀಲಪ್ಪ ಗೌಡ, ಪ್ರಭಾಕರ್, ಪ್ರಧಾನ ಕಾರ್ಯದರ್ಶಿ ಸದಾಶಿವ ಶ್ರೇಷ್ಟಿ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಚಂದ್ರಮೌಳಿ ಗೌಡ, ಎರಗಿ ಉಮೇಶ್, ಮಧು, ಎಂ.ಪಿ ಸುರೇಶ್, ಟೌನ್ ಘಟಕದ ಅಧ್ಯಕ್ಷ ಗುರುರಾಜ್, ಕೃಷ್ಣಮೂರ್ತಿ ಸುರೇಶ್, ಅಶ್ವಿನಿಕುಮಾರ್, ಶ್ರೀನಿವಾಸ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!