ಮುಜರಾಯಿ ಇಲಾಖೆಗೆ ಒಳಪಟ್ಟಿರುವ ದೇವಸ್ಥಾನದ ಅಭಿವೃದ್ಧಿ ಹೆಸರಿನಲ್ಲಿ ವಸೂಲಿ ಮಾಡುತ್ತಿರುವ ಗ್ರಾಮಸ್ಥರು !

0
5277

ಮೂಡಿಗೆರೆ: ಎತ್ತಿನಭುಜ ವ್ಯಾಪ್ತಿಯಲ್ಲಿ ಬರುವ ಮುಜರಾಯಿ ಇಲಾಖೆಗೆ ಒಳಪಡುವ ನಾಣ್ಯ ಭೈರವೇಶ್ವರ ದೇವಾಲಯದ ಅಭಿವೃದ್ಧಿ ಹೆಸರಿನಲ್ಲಿ ಪಕ್ಕದ ಭೈರಾಪುರ ಗ್ರಾಮಸ್ಥರು ಎತ್ತಿನಭುಜ ಪ್ರವಾಸಿ ತಾಣವನ್ನು ನೋಡಲು ಬರುವ ಪ್ರವಾಸಿಗರ ಬಳಿ ಅಕ್ರಮವಾಗಿ ಪಾರ್ಕಿಂಗ್ ಶುಲ್ಕವನ್ನು ವಿಧಿಸುತ್ತಿದ್ದಾರೆ.

ಈ ದೇವಾಲಯವು ಸೇರಿದಂತೆ ಅಕ್ಕ ಪಕ್ಕದ ಜಾಗವು ಮುಜರಾಯಿ ಇಲಾಖೆಯ ಅಡಿಯಲ್ಲಿ ಬರುತ್ತದೆ ಅಂದರೆ ಗ್ರಾಮಸ್ಥರು ತಾವೇ ಸ್ವತಃ ಕಮಿಟಿ ಮಾಡಿಕೊಂಡು ಖಾಸಗಿ ಜಾಗ ಅನ್ನುವ ಹಾಗೆ ಅಲ್ಲಿಗೆ ಬರುವ ಪ್ರವಾಸಿಗರ ವಾಹನಗಳ ಬಳಿ ಒಂದು ವಾಹನಕ್ಕೆ 50 ರೂಪಾಯಿ ಅಂತೆ ವಸೂಲಿ ಮಾಡಿ ತಾವೇ ಮಾಡಿಸಿ ಕೊಂಡಿರುವ ರಶೀದಿಯಾನ್ನು ನೀಡುತ್ತಿದ್ದಾರೆ.

ಇದನ್ನು ಯಾರಾದರೂ ಪ್ರಶ್ನಿದರೆ ಅವರು ನೀಡುವ ಉತ್ತರ ನಮ್ಮ ಈ ಕಮಿಟಿಯು ಜಿಲ್ಲಾಡಳಿತದಿಂದ ನೋಂದಣಿ ಆಗಿದ್ದು ಈ ಕಮೀಟಿಯಾಲ್ಲಿ ಮೂಡಿಗೆರೆ ತಾಲ್ಲೂಕಿನ ತಹಶೀಲ್ದಾರರ ಸಹ ಇದ್ದಾರೆ ಅವರು ಸಹ ಶುಲ್ಕ ಸಂಗ್ರಹಕ್ಕೆ ಅನುಮತಿ ನೀಡಿದ್ದಾರೆ ಎಂದು ಶುಲ್ಕ ಸಂಗ್ರಹಿಸುವ ವ್ಯಕ್ತಿ ಮಾಹಿತಿ ನೀಡಿದ್ದು ನಮ್ಮ ಕಮಿಟಿಗೆ ಸ್ಥಳೀಯರಾದ ಚಂದ್ರಣ್ಣ ಯು.ಆರ್ ರವರು ಅಧ್ಯಕ್ಷರಾಗಿದ್ದು ಅವರನ್ನೇ ಬೇಕಾದರೆ ವಿಚಾರಿಸಿ ಎನ್ನುತ್ತಾನೆ.

ಈ ಬಗ್ಗೆ ಜಿಲ್ಲಾಧಿಕಾರಿ ಕಛೇರಿಯ ಮುಜರಾಯಿ ವಿಭಾಗದಲ್ಲಿ ವಿಚಾರಿಸಿದಾಗ ನಾಣ್ಯ ಭೈರವೇಶ್ವರ ದೇವಾಲಯಕ್ಕೆ ಯಾವುದೇ ರೀತಿಯ ಕಮಿಟಿ ಇಲ್ಲವಾಗಿದ್ದು ಭೈರಾಪುರ ಗ್ರಾಮಸ್ಥರು ಇತ್ತಿಚೆಗೆ ಕಮಿಟಿ ನೋಂದಣಿಗೆ ಅರ್ಜಿ ಸಲ್ಲಿಸಿದ್ದಾರೆ ಇನ್ನೂ ಅ ಕಮಿಟಿಗೆ ಅನುಮತಿ ನೀಡಿಲ್ಲ ಎಂಬ ಮಾಹಿತಿ ದೊರೆತಿದೆ.

ಇಲ್ಲಿ ಗ್ರಾಮಸ್ಥರು ಮುಜರಾಯಿ ಇಲಾಖೆಗೆ ಸೇರಿದ ಸ್ಥಳದಲ್ಲಿ ಅನಧಿಕೃತವಾಗಿ ರಶೀದಿ ಮಾಡಿಸಿಕೊಂಡು ಅಕ್ರಮವಾಗಿ ಹಣ ವಸೂಲಿ ಮಾಡುತ್ತಿದ್ದರೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದ್ದು ಈ ಅಕ್ರಮದಲ್ಲಿ ಸ್ಥಳೀಯ ಆಡಳಿತವು ಸಹ ಸೇರಿರಬಹುದು ಎಂಬ ಅನುಮಾನ ಪ್ರವಾಸಿಗರಿಂದ ವ್ಯಕ್ತವಾಗಿದೆ.

ಇದರ ಬಗ್ಗೆ ಜಿಲ್ಲಾಡಳಿತ ತಕ್ಷಣ ಎಚ್ಚೆತ್ತುಕೊಂಡು ತನಿಖೆ ನಡೆಸಿ ಅಕ್ರಮವಾಗಿ ಹಣ ವಸೂಲಿ ಮಾಡುತ್ತಿರುವ ಕಮಿಟಿಯಲ್ಲಿನ ವ್ಯಕ್ತಿಗಳು ಹಾಗೂ ಇದ್ದರಲ್ಲಿ ಭಾಗಿಯಾಗಿರುವಂತಹ ಅಧಿಕಾರಿಗಳು ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ಎಂದು ಪ್ರವಾಸಿಗರು ಆಗ್ರಹಿಸಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here