23.2 C
Shimoga
Sunday, November 27, 2022

ಮುತ್ತಲ ಗ್ರಾಮಕ್ಕೆ‌ ಇಂದು ಭೇಟಿ ನೀಡಿದ ಡಿಸಿ ಡಾ. ಆರ್. ಸೆಲ್ವಮಣಿ

ಹೊಸನಗರ: ತಾಲೂಕಿನ ಚಿಕ್ಕಜೇನಿ ಗ್ರಾಮ ಪಂಚಾಯತ್ ಮುತ್ತಲ ಗ್ರಾಮಕ್ಕೆ ಶಿವಮೊಗ್ಗ ಜಿಲ್ಲಾಧಿಕಾರಿ ಡಾ. ಆರ್. ಸೆಲ್ವಮಣಿ ಅವರು ಇಂದು ಭೇಟಿ ನೀಡಿದರು.

ಗ್ರಾಮಕ್ಕೆ ಆಗಮಿಸಿದ ಜಿಲ್ಲಾಧಿಕಾರಿಗಳನ್ನು ಗ್ರಾಮಸ್ತರು ಸಂಭ್ರಮದಿಂದ ಆರತಿ ಬೆಳಗಿ ಪೂರ್ಣ ಕುಂಭಗಳೊಂದಿಗೆ ಗ್ರಾಮಕ್ಕೆ ಸ್ವಾಗತ ಕೋರಿದರು.


ಮುತ್ತಲ ಗ್ರಾಮದಲ್ಲಿ ಸಾರ ಹಾಗೂ ಸಮೂಹ ಸಂಸ್ಥೆ ಹಾಗೂ ಸ್ಥಳೀಯ ಗ್ರಾಮಸ್ಥರು ಕಳೆದ ಎರಡು ವರ್ಷಗಳಿಂದ ಹಂತ ಹಂತವಾಗಿ ನಡೆಸಿದ ಸ್ವ ಗ್ರಾಮ ಯೋಜನೆಯ ವಿವಿಧ ಕಾಮಗಾರಿ ಗಳನ್ನು ವೀಕ್ಷಣೆ ಮಾಡಲು ಆಗಮಿಸಿದ್ದರು.


ಸುಸ್ಥಿರ ಅಭಿವೃದ್ಧಿ ಕೇಂದ್ರೀಕರಿಸಿ ಕಾರ್ಯಗತ ಗೊಳಿಸಿದ
ಗ್ರಾಮದ ಎಲ್ಲಾ ಮೂರು ಕೆರೆಗಳ ಪುನಶ್ಚೇತನದಲ್ಲಿ ಆದ ಜಲಭದ್ರತೆ, ಅಂತರ್ಜಲ ಸಂವರ್ಧನೆಗೆ ಕೈಕೊಂಡ ಇಂಗು ಗುಂಡಿಗಳು, ಬೃಹತ್ ಪ್ರಮಾಣದ ಮಳೆ ನೀರು ಕೊಯ್ಲು, ಅರಣ್ಯ ಸಂರಕ್ಷಣೆ, ಹಾಗೂ ಸಂವರ್ಧನೆ. ಕಿರು ಅರಣ್ಯ ನಿರ್ಮಾಣ ಮುಂತಾದ ಸುಸ್ಥಿರ ಪೂರಕ ಚಟುವಟಿಕೆಗಳನ್ನು ಕೂಲಂಕುಷ ವೀಕ್ಷಣೆ ಮಾಡಿ ಗ್ರಾಮಸ್ಥರಿಂದ ಸಾಧಕ ಬಾಧಕಗಳ ವಿವರಣೆ ಪಡೆದುಕೊಂಡರು. ನಂತರ ಗ್ರಾಮಸ್ಥರಿಂದ ಗೌರವ ಸ್ವೀಕರಿಸಿ ಅವರು ನೀಡಿದ ಪ್ರತಿ ಅಹವಾಲುಗಳಿಗೆ ಸೂಕ್ತ ಪರಿಹಾರದ ಭರವಸೆ ನೀಡಿ ಮಾತನಾಡಿದ ಅವರು ಗ್ರಾಮಸ್ಥರು ಸಂಘಟಿತರಾಗಿ ಗ್ರಾಮದ ಸುಸ್ಥಿರ ಅಭಿವೃದ್ಧಿಗೆ ಶ್ರಮಿಸಿದಾಗ ನಿಶ್ಚಿತ ಉತ್ತಮ ಫಲಿತಾಂಶ ನಿರೀಕ್ಷೆ ಮಾಡಬಹುದು.ಈ ನೆಲೆಯಲ್ಲಿ ಕಾರ್ಯಸಾಧನೆ ಮಾಡಿದ ಮುತ್ತಲ ಗ್ರಾಮದ ರೈತರು, ಯುವಕರು, ಮಹಿಳೆಯರು ಇತರರಿಗೆ ಮಾದರಿ ಆಗುವಂತಹ ಕೆಲಸಗಳನ್ನು ಮಾಡಿದ್ದೀರಿ ಅದನ್ನು ನೋಡಿದ ನನಗೆ ಸಂತೋಷ ಆಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.


ನೆಲ, ಜಲ, ಜಾಮೀನು, ಪರಿಸರ ಇವುಗಳನ್ನ ಸಂವರ್ಧನೆ ಮಾಡುವುದು ಗ್ರಾಮದ ಸುಸ್ಥಿರ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುತ್ತದೆ, ಈ ನಿಟ್ಟಿನಲ್ಲಿ ನೀವು ತೊಡಗಿಕೊಂಡಿರುವುದು ಆಶಾದಾಯಕ ಬೆಳವಣಿಗೆ ಎಂದು ಹೇಳಿದರು.


ಈ ಸಂದರ್ಭದಲ್ಲಿ ತಾಲೂಕಿನ ತಹಶೀಲ್ದಾರ್ ರಾಜೀವ್, ತಾಲೂಕು ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರವೀಣ್ ಕುಮಾರ್, ಕಂದಾಯ ಇಲಾಖೆ, ಅರಣ್ಯ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆ, ಲೋಕೋಪಯೋಗಿ ಇಲಾಖೆ, ಮೆಸ್ಕಾಂ ಅಧಿಕಾರಿಗಳು, ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು, ಅಧಿಕಾರಿಗಳು ಹಾಗೂ ಸ್ವಗ್ರಾಮ ಯೋಜನೆಯ ಸಂಚಾಲಕ ಯೇಸು ಪ್ರಕಾಶ್, ಸ್ವಗ್ರಾಮ ಸಮಿತಿ ಅಧ್ಯಕ್ಷ ಗುರುಮೂರ್ತಿ, ವಿವಿಧ ಸಮಿತಿಗಳ ಅಧ್ಯಕ್ಷರು, ಸಾರ ಸಂಸ್ಥೆಯ ಕುಮಾರ್, ಧನುಷ್, ಶಿವಕುಮಾರ್, ಗ್ರಾಮಸ್ಥರು, ಮಹಿಳೆಯರು ಯುವಕರು ಹಾಜರಿದ್ದರು.


ನಂತರ ಜಿಲ್ಲಾಧಿಕಾರಿಗಳು ಸಾರ ಕೇಂದ್ರಕ್ಕೆ ಭೇಟಿ ನೀಡಿ ಕೇಂದ್ರದ ಕಾರ್ಯಚಟುವಟಿಕೆ ವಿವಿಧ ಕಲಾಕೃತಿ, ಹಾಗೂ ವನ್ಯ ಪ್ರಾಣಿಗಳ ಛಾಯಾ ಚಿತ್ತಾರ, ವಿವಿಧ ರಾಜ್ಯಗಳ ಪಾರಂಪರಿಕ ಕಲೆಯ
ಚಿತ್ರಗಳು, ಪರಿಸರ ಹಾಗೂ ಕಲಾ ಇತಿಹಾಸ ಸಾರುವ ಕಲಾಕೃತಿಗಳು, ಹಾಗೂ ವಸ್ತು ಪ್ರದರ್ಶನಗಳ ವೀಕ್ಷಣೆ ಮಾಡುವುದರೊಂದಿಗೆ ಸಾರ ಕೇಂದ್ರದ ಆವರಣದಲ್ಲಿ ನಾಟಿ ಮಾಡಿದ 272 ವಿವಿಧ ಭತ್ತದ ತಳಿಗಳ ನಾಟಿ ಮಾಡಿದ ಗದ್ದೆಗೆ ಭೇಟಿ ನೀಡಿ, ಸಾರ ಕೇಂದ್ರದ ಕಲೆ ಹಾಗೂ ಪಾರಿಸಾರಿಕ ಕಾರ್ಯ ಚಟುವಟಿಕೆಗೆ ಮೆಚ್ಚಗೆ ವ್ಯಕ್ತಪಡಿಸಿದರು.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!