ಮುಳುಗುಡ್ಡೆ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ; ವಿದ್ಯುತ್ ನಿಲುಗಡೆಯ ಬಗ್ಗೆ ಗ್ರಾಮಸ್ಥರಿಂದ ತಕರಾರು ಅರ್ಜಿ

0
524

ಹೊಸನಗರ : ತಾಲ್ಲೂಕಿನ ಮುಳುಗುಡ್ಡೆ, ಕಾಳಿಕಾಪುರ, ದುಮ್ಮ, ಹೆಬೈಲು, ಗುಬ್ಬಿಗಾ, ಭೀಮನಕೆರೆ ಗ್ರಾಮಗಳಲ್ಲಿ ಹೆಚ್ಚು ರೈತರು ವಾಸವಾಗಿದ್ದು ತಮ್ಮ ತೋಟ ಗದ್ದೆಗಳು ನೀರಿಲ್ಲದೇ ಒಣಗುತ್ತಿದೆ ವಿದ್ಯಾರ್ಥಿಗಳಿಗೆ ಪರೀಕ್ಷೆ ಹತ್ತಿರ ಬರುತ್ತಿದ್ದು ದಿನದ 24 ಗಂಟೆಗಳಲ್ಲಿ 20ಗಂಟೆ ವಿದ್ಯುತ್ ನಿಲುಗಡೆಯಾಗುತ್ತಿದೆ ಅದು ಅಲ್ಲದೇ ಇರುವ ನಾಲ್ಕು ಗಂಟೆಯ ವಿದ್ಯುತ್‌ನಲ್ಲಿ ವೋಲ್ಟೇಜ್ ಇಲ್ಲದೇ ಪಂಪ್‌ಸೆಟ್‌ಗಳು ಹಾಳಾಗುತ್ತಿದೆ ತಕ್ಷಣ ಈ ವಿದ್ಯುತ್ ಸಮಸ್ಯೆಯನ್ನು ಬಗೆ ಹರಿಸಿರಿ ಎಂದು ಮುಳುಗುಡ್ಡೆ ಗ್ರಾಮದ ಗ್ರಾಮಸ್ಥರು ಒತ್ತಾಯಿಸಿದರು.

ಸರ್ಕಾರದ ಸುತ್ತೋಲೆ ಹಾಗೂ ಮಾನ್ಯ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಹೊಸನಗರ ತಾಲ್ಲೂಕು ಮುಳುಗುಡ್ಡೆ ಗ್ರಾಮದ ಶಾಲೆಯ ಆವರಣದಲ್ಲಿ ಕಂದಾಯ ಇಲಾಖೆಯ ವತಿಯಿಂದ ತಹಶೀಲ್ದಾರ್ ವಿ.ಎಸ್. ರಾಜೀವ್‌ರವರ ನೇತೃತ್ವದಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ ನಡೆಸಲಾಯಿತ್ತು ಈ ಸಭೆಯಲ್ಲಿ ಗ್ರಾಮಸ್ಥರು ವಿದ್ಯುತ್ ನಿಲುಗಡೆಯ ಬಗ್ಗೆ ಅರ್ಜಿ ಸಲ್ಲಿಸಿ ಮಾತನಾಡಿದರು.

ಗ್ರಾಮ ವಾಸ್ತವ್ಯದಲ್ಲಿ ಒಟ್ಟು 36 ಅರ್ಜಿಗಳು ಬಂದಿದ್ದು ಅದರಲ್ಲಿ ಕೆಪಿಸಿ ಜಾಗ ಮಂಜೂರಾತಿ, ಬಗ್ಗೆ ಅರ್ಜಿಗಳು ಬಂದಿದ್ದು ಅರ್ಜಿಗಳನ್ನು ಇತ್ಯರ್ಥ ಪಡಿಸಬೇಕಾದರೆ ಸರ್ಕಾರದ ಗಮನಕ್ಕೆ ತಂದು ಬಗೆ ಹರಿಸಬೇಕಾಗುತ್ತದೆ ಸರ್ಕಾರದ ಗಮನಕ್ಕೆ ತರುವುದಾಗಿ ಹಾಗೂ ಬೇಸಿಗೆಯಲ್ಲಿ ನೀರಿನ ಸಮಸ್ಯೆಯನ್ನು ಸಂಬಂಧಪಟ್ಟ ಇಲಾಖೆಗೆ ಗ್ರಾಮ ಪಂಚಾಯಿತಿಯ ಗಮನಕ್ಕೆ ತರುವುದಾಗಿ ವಿಧವಾ ವೇತನ, ವೃದ್ಧಾಪ್ಯ ವೇತನ ಅಂಗವಿಕಲ ವೇತನ ಇತ್ಯಾದಿ ಅರ್ಜಿಗಳನ್ನು ನಮ್ಮ ಇಲಾಖೆಯಲ್ಲಿ ಮಂಜೂರಾತಿ ಮಾಡಿಕೊಡುವುದಾಗಿ ಸಭೆಯಲ್ಲಿ ತಹಶೀಲ್ದಾರ್ ರಾಜೀವ್‌ರವರು ತಿಳಿಸಿದರು.

ಶಾಲೆಯ ಗೋಡೆ ಬಿರುಕು:

ಮುಳುಗುಡ್ಡೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗೋಡೆ ಬಿರುಕು ಬಿಟ್ಟಿದ್ದು ಈ ವರ್ಷದ ಮಳೆಗಾಲದಲ್ಲಿ ಬಿದ್ದು ಹೋಗುವ ಸಂಭವವಿದೆ ಎಂದು ಗ್ರಾಮಸ್ಥರು ತಿಳಿಸಿದ್ದು ಅದನ್ನು ವೀಕ್ಷಿಸಿದ ಉಪವಿಭಾಗಾಧಿಕಾರಿ ಡಾ|| ಎಲ್ ನಾಗರಾಜ್‌ರವರು ತಕ್ಷಣ ಶಿಕ್ಷಣಾ ಇಲಾಖೆಗೆ ಹಾಗೂ ಇಂಜಿನೀಯರ್‌ರವರ ಗಮನಕ್ಕೆ ತಂದು ಸರಿ ಪಡೆಸಲು ಸೂಚಿಸಲಾಗುವುದು ಎಂದು ತಿಳಿಸಿದರು.

ಈ ಗ್ರಾಮ ವಾಸ್ತವ್ಯದಲ್ಲಿ ಸಾಗರ ಉಪವಿಭಾಗಾಧಿಕಾರಿ ಡಾ|| ಎಲ್ ನಾಗರಾಜ್, ತಾಲ್ಲೂಕು ಕಛೇರಿಯ ಗ್ರೇಡ್2 ತಹಶೀಲ್ದಾರ್ ರಾಕೇಶ್, ಶಿರಾಸ್ತೆದಾರ್ ಶ್ರೀಕಾಂತ್ ಹೆಗ್ಡೆ, ಸುಧೀಂದ್ರಕುಮಾರ್, ಪ್ರಥಮ ದರ್ಜೆ ಗುಮಾಸ್ಥರಾದ ಚಿರಾಗ್, ವಿನಯ್, ಆಹಾರ ಇಲಾಖೆಯ ಕವಿರಾಜ್, ರೆವಿನ್ಯೋ ಇನ್ಸ್‌ಪೆಕ್ಟರ್ ವೆಂಕಟೇಶ್‌ಮೂರ್ತಿ, ಗ್ರಾಮ ಲೆಕ್ಕಾಧಿಕಾರಿ ದೀಪು, ಸಹಾಯಕ ನಾಗಪ್ಪ, ಮುಳುಗುಡ್ಡೆ ಶಾಲೆಯ ಮುಖ್ಯ ಶಿಕ್ಷಕ ಗಂಗಾಧರಯ್ಯ, ಗ್ರಾಮಸ್ಥರಾದ ರಾಜುಗೌಡ, ಗ್ರಾಮ ಪಂಚಾಯಿತಿ ಸದಸ್ಯ ಸಂತೋಷ್ ಹಾಗೂ ಈ ಭಾಗದ ಗ್ರಾಮಸ್ಥರು ಉಪಸ್ಥಿತರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here