ಮೂರು ತಲೆಮಾರಿನಿಂದ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದ ಕೃಷ್ಣಮೂರ್ತಿ ಕುಟುಂಬ ಸ್ವಇಚ್ಛೆಯಿಂದ ದೇವಸ್ಥಾನದ ಅರ್ಚಕ ವೃತ್ತಿಗೆ ನಿವೃತ್ತಿ !

0
1531

ಹೊಸನಗರ: ಸುಮಾರು ಮೂರು ತಲೆಮಾರಿನಿಂದ ಹೊಸನಗರದ ಪ್ರತಿಷ್ಠಿತ ದೇವಸ್ಥಾನಗಳಲ್ಲಿ ಒಂದಾಗಿರುವ ಮಹೇಶ್ವರ‌, ಪಾರ್ವತಿ, ಗಣಪತಿ ದೇವಸ್ಥಾನದ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದ ಕೃಷ್ಣಮೂರ್ತಿ, ಕುಟುಂಬ ತಮ್ಮ ದೇವಸ್ಥಾನದ ಅರ್ಚಕ ವೃತ್ತಿಗೆ ನಿವೃತ್ತಿ ಘೋಷಿಸಿದ್ದಾರೆ.

ಹೊಸನಗರದ ಗಣಪತಿ ದೇವಸ್ಥಾನದ ಆವರಣದಲ್ಲಿ ದೇವಸ್ಥಾನ ಕಮಿಟಿಯ ಅಧ್ಯಕ್ಷರಾದ ಕನಕರಾಜ್‌ರವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗಿದ್ದು ಈ ನಿರ್ಧಾರವನ್ನು ಕೃಷ್ಣಮೂರ್ತಿಯವರು ತೆಗೆದುಕೊಂಡಿದ್ದು ನಮ್ಮ ಕುಟುಂಬದಲ್ಲಿರುವ ಗಂಡು ಮಕ್ಕಳು ಉದ್ಯೋಗದಲ್ಲಿದ್ದು ಅವರು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ನನಗೂ ವಯಸ್ಸಾಗಿದೆ ನಾನು ಹೊರಗಡೆ ಪೂಜೆ ಪುನಸ್ಕಾರಗಳ ಕಾರ್ಯಕ್ರಮಗಳಿರುವುದರಿಂದ ದೇವಸ್ಥಾನದ ಅರ್ಚಕರಾಗಿ ಪೂಜೆ ಸಲ್ಲಿಸಲು ಸಾಧ್ಯವಾಗದೇ ಇರುವುದರಿಂದ ದೇವಸ್ಥಾನದ ಅರ್ಚಕ ವೃತ್ತಿಗೆ ಸ್ವಇಚ್ಛೆಯಿಂದ ನಿವೃತ್ತಿ ಘೋಷಿಸಿದ್ದು ಹೊಸನಗರದ ಕೆಲವರ ಕುಟುಂಬಗಳಿಗೆ ಪುರೋಹಿತರಾಗಿ ಸೇವೆಯನ್ನು ಮುಂದುವರೆಸಲಿದ್ದೇವೆ ಎಂದು ತಿಳಿಸಿದ್ದಾರೆ.

ಶನಿವಾರದಿಂದ ಕಟ್ಟಿನಹೊಳೆಯ ಗಾಂಡಿವ ಭಟ್‌ರವರು ದೇವಸ್ಥಾನದ ಪೂಜೆಯನ್ನು ಮುಂದುವರೆಸಿದ್ದಾರೆ.

ದೇವಸ್ಥಾನದ ಕಮಿಟಿಯ ಪ್ರಧಾನ ಕಾರ್ಯದರ್ಶಿಯಾಗಿ ಶ್ರೀನಿವಾಸ್ ಕಾಮತ್, ಕಮಿಟಿಯ ಸದಸ್ಯರಾದ ಎನ್ ಶ್ರೀಧರ ಉಡುಪ, ಡಾ|| ರಾಮಚಂದ್ರರಾವ್, ಎನ್.ಆರ್.ದೇವಾನಂದ್, ವರ್ತಕರ ಸಂಘದ ಅಧ್ಯಕ್ಷರಾದ ವಿಜೇಂದ್ರಶೇಟ್, ವಿಘ್ನೇಶ್ವರ ಸೇವಾ ಸಮಿತಿಯ ಅಧ್ಯಕ್ಷ ಸದಸ್ಯರುಗಳು ಉಪಸ್ಥಿತರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here