23.2 C
Shimoga
Sunday, November 27, 2022

ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದ ಮಹಿಳೆ‌ ಇಂದು ಕೆರೆಯಲ್ಲಿ ಶವವಾಗಿ ಪತ್ತೆ !

ಹೊಸನಗರ : ಕಳೆದ ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಮಹಿಳೆ ಇಂದು ಇಟ್ಟಕ್ಕಿ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ತಾಲೂಕಿನ ಬಿಳ್ಳೋಡಿ ಗ್ರಾಮದ ಮತ್ತಿಗ ನಿವಾಸಿ ಮಂಗಳ (36) ಮೃತ ಮಹಿಳೆಯಾಗಿದ್ದು ಈಕೆಯನ್ನು ಎನ್.ಆರ್ ಪುರ ತಾಲ್ಲೂಕಿನ ಬಿ.ಹೆಚ್ ಕೈಮರಕ್ಕೆ ಮದು‌ವೆ ಮಾಡಿ ಕೊಟ್ಟಿದ್ದು ತನ್ನ ಗಂಡನೊಂದಿಗೆ ಕಳೆದ ಎರಡ್ಮೂರು ವರ್ಷಗಳಿಂದ ತಾಯಿ ಮನೆ ಮತ್ತಿಗದಲ್ಲಿ ವಾಸ ಮಾಡುತ್ತಿದ್ದರು.

ಮಾನಸಿಕವಾಗಿ ದುರ್ಬಲರಾಗಿದ್ದ ಈಕೆ ನ.03 ರಂದು ಮಧ್ಯಾಹ್ನ 2:30ರ ಸುಮಾರಿಗೆ ಬಿಳ್ಳೋಡಿ ಗ್ರಾಮದಿಂದ ಕಾಣೆಯಾಗಿದ್ದರು. ಸಂಬಂಧಿಕರು ಎಲ್ಲ ಕಡೆ ಹುಡುಕಿದರು ಪತ್ತೆಯಾಗದೆ ಇದ್ದು ನಿನ್ನೆ ಹೊಸನಗರ ಠಾಣೆಯಲ್ಲಿ ಮೃತಳ ಪತಿ ನಾಗರಾಜ್ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಆದರೆ ಇಂದು ಬೆಳಗ್ಗೆ ಇವರ ಮನೆಯಿಂದ ಸುಮಾರು 3 ಕಿ.ಮೀ. ದೂರದಲ್ಲಿರುವ ಇಟ್ಟಕ್ಕಿ ಕೆರೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.

ಮೃತರು ಪತಿ, ಇಬ್ಬರು ಪುತ್ರಿಯರು, ತಂದೆ ಮತ್ತು ತಾಯಿ ಹಾಗೂ ಅಪಾರ ಬಂಧು – ಬಳಗವನ್ನು ಅಗಲಿದ್ದಾರೆ.

ಹೊಸನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!