ಮೂರು ದಿನಗಳಿಂದ ಕೇರೆಹಾವು ಇರಬಹುದು ವಿಷವಿರಲ್ಲ ಅದಾಗೇ ಹೋಗಿಬಿಡುತ್ತದೆ ಎಂದುಕೊಂಡ ಮನೆಯವರಿಗೆ ಬಿಗ್ ಶಾಕ್!

0
9175

ಶೃಂಗೇರಿ: ಮನೆಯೊಳಗೆ ಮೂರು ದಿನಗಳಿಂದ ಸುಮಾರು ಏಳು ಅಡಿ ಉದ್ದದ ಕಾಳಿಂಗ ಸರ್ಪ ಅಡಗಿ ಕುಳಿತುಕೊಂಡಿತ್ತು. ಕೇರೆಹಾವು ಇರಬಹುದು, ವಿಷವಿರಲ್ಲ, ಅದಾಗೇ ಹೋಗಿಬಿಡುತ್ತದೆ ಎಂದುಕೊಂಡ ಮನೆಯವರಿಗೆ ಇಂದು ಅದು ಕಾಳಿಂಗ ಸರ್ಪ ಎಂಬುದು ಗೊತ್ತಾಗಿದೆ.

ತಾಲೂಕಿನ ರಾಜನಗರದ ಮನೆಯೊಂದರಲ್ಲಿ ಇಂಥದ್ದೊಂದು ಭಾರಿ ಕಾಳಿಂಗ ಸರ್ಪ ಕಂಡುಬಂದಿದೆ. ಇಲ್ಲಿನ ಸುಬ್ರಹ್ಮಣ್ಯ ಆಚಾರ್ ಎಂಬುವವರ ಮನೆಯಲ್ಲಿ ಈ ಕಾಳಿಂಗ ಸರ್ಪವಿತ್ತು.‌ ಮನೆಯವರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಬಂದ ಸ್ನೇಕ್ ಅರ್ಜುನ್, ವಿಷಕಾರಿ ಕಾಳಿಂಗ ಸರ್ಪವನ್ನು ಹುಷಾರಾಗಿ ಹಿಡಿದು ಅರಣ್ಯಕ್ಕೆ ಕೊಂಡೊಯ್ದು ಬಿಟ್ಟುಬಂದಿದ್ದಾರೆ.

ಹಾವು ಹಿಡಿಯುವುದರಲ್ಲಿ ಪರಿಣತರಾಗಿರುವ ಸ್ನೇಕ್ ಅರ್ಜುನ್ ಇದುವರೆಗೂ ನೂರಾರು ಕಾಳಿಂಗ ಸರ್ಪವನ್ನು ಹಿಡಿದಿದ್ದು, ಬಹಳಷ್ಟು ಮನೆಯವರನ್ನು ಅಪಾಯದಿಂದ ಪಾರು ಮಾಡಿರುತ್ತಾರೆ.

ಜಾಹಿರಾತು

LEAVE A REPLY

Please enter your comment!
Please enter your name here