23.2 C
Shimoga
Sunday, November 27, 2022

ಮೂರು ಹೆಲ್ಮೆಟ್ ಧರಿಸಿ ಬೈಕ್ ಸವಾರರಿಗೆ ವಿಭಿನ್ನ ರೀತಿಯಲ್ಲಿ ಜಾಗೃತಿ ಮೂಡಿಸಿದ ರಿಪ್ಪನ್‌ಪೇಟೆಯ ಟಿ.ಆರ್ ಕೃಷ್ಣಪ್ಪ

ರಿಪ್ಪನ್‌ಪೇಟೆ: ಇತ್ತೀಚಿನ ದಿನಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಡ್ಡಾಯವಾಗಿ ಹೆಲ್ಮೆಟ್ ಹಾಕುವಂತೆ ಆದೇಶಿಸಲಾಗಿದ್ದರೂ ಕೂಡಾ ದ್ವಿಚಕ್ರ ಸವಾರರು ಹೆಲ್ಮಟ್ ಹಾಕದೇ ನಿರ್ಲಕ್ಷ್ಯ ವಹಿಸಿರುವುದು ಮತ್ತು ನಿತ್ಯ ಸಾಕಷ್ಟು ಅಪಘಾತಗಳು ಸಂಭವಿಸಿ ಸಾವನ್ನಪ್ಪುತ್ತಿರುವುದರ ಬಗ್ಗೆ ಇಲ್ಲಿನ ಜನಪರ ಹೋರಾಟಗಾರ ಸಾಮಾಜಿಕ ಕಾರ್ಯಕರ್ತ
ಟಿ.ಆರ್.ಕೃಷ್ಣಪ್ಪ ಸೈಕಲ್ ಸವಾರಿಯ ಮೂಲಕ ಮೂರು ಹೆಲ್ಮೆಟ್ ಹಾಕಿಕೊಂಡು ವಿಭಿನ್ನ ರೀತಿಯಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಮಹಾತ್ಕಾರ್ಯಕ್ಕೆ ಮುಂದಾಗಿದ್ದಾರೆ.


ಸುಮಾರು 72 ವರ್ಷ ಪ್ರಾಯದ ವಯೋ ವೃದ್ದರಾಗಿದ್ದರೂ ಕೂಡಾ 17 ವರ್ಷದ ನವಯುವಕರಂತೆ ಸೈಕಲ್ ಮೇಲೆ ತಿರುಗುವ ಆರೋಗ್ಯವಂತ ಸದೃಢ ದೇಹ ಹೊಂದಿರುವ ಟಿ.ಆರ್.ಕೃಷ್ಣಪ್ಪನವರು ಇಂದಿನ ಯುವಜನಾಂಗವನ್ನು ನಾಚಿಸುವಂತೆ ಮಾಡಿದ್ದಾರೆ.


ಇವರ ಲವಲವಿಕೆ ಜೀವನ ಶೈಲಿ ಎಂತವರನ್ನು ಬೆರಗುಗೊಳಿಸುತ್ತದೆ. ಬೆಳಗ್ಗೆ ನಿಯತಕಾಲಿಕ ಸುದ್ದಿ ಪತ್ರಿಕೆಗಳನ್ನು ಮನೆಮನೆಗೆ ತಲುಪಿಸುವುದರೊಂದಿಗೆ ಪ್ರಯಾಣಿಕರಿಗೆ ಮಾರಾಟ ಮಾಡಿ ಮಾದರಿಯಾಗಿದ್ದಾರೆ.


ಇವರ ಈ ವಿನೂತನ ವಿಭಿನ್ನ ರೀತಿಯ ಜನಜಾಗೃತಿಯಿಂದಾಗಿ ಪೊಲೀಸ್ ಇಲಾಖೆಯವರು ದ್ವಿಚಕ್ರ ಸವಾರರನ್ನು ತಡೆದು ಕೇಸ್ ದಾಖಲಿಸುವುದು ಮತ್ತು ವಿಮೆ ಮಾಡಿಸುವಂತೆ ಅರಿವು ಮೂಡಿಸುತ್ತಿದ್ದರೂ ಇನ್ನೂ ಜಾಗೃತರಾಗದಿರುವುದು ವಿಪರ್ಯಾಸವೆ ಸರಿ.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!