23.2 C
Shimoga
Sunday, November 27, 2022

ಮೂಲಸೌಕರ್ಯ ಕಲ್ಪಿಸಿಕೊಡುವಂತೆ ಆದುವಳ್ಳಿ ಗ್ರಾಮಸ್ಥರ ಮನವಿ

ಹೊಸನಗರ: ತಾಲೂಕಿನ ಕೆರೆಹಳ್ಳಿ ಹೋಬಳಿ ಸೊನಲೆ ಗ್ರಾ.ಪಂ. ವ್ಯಾಪ್ತಿಯ ಕುಗ್ರಾಮ ಆದುವಳ್ಳಿಗೆ ಮೂಲ ಸೌಕರ್ಯ ಕಲ್ಪಿಸುವಂತೆ ಗ್ರಾಮಸ್ಥರು ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರು.

ಎಲೆಚುಕ್ಕೆ ರೋಗತಡೆ ಕುರಿತು ತಾಲೂಕಿನ ನಿಟ್ಟೂರಿನಲ್ಲಿ ಇರುವಕ್ಕಿ ಕೃಷಿ ಮತ್ತು ತೋಟಗಾರಿಕೆ ವಿಶ್ವ ವಿದ್ಯಾಲಯದ ಸಹಯೋಗದಲ್ಲಿ ಅಡಿಕೆ ಬೆಳೆಗಾರರು ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದ ವೇಳೆ ಆದುವಳ್ಳಿ ಗ್ರಾಮಸ್ಥರು ಗೃಹಸಚಿವ ಆರಗ ಜ್ಙಾನೇಂದ್ರ, ಸಂಸದ ಬಿ.ವೈ.ರಾಘವೇಂದ್ರ ಹಾಗೂ ಶಾಸಕ ಹರತಾಳು ಹಾಲಪ್ಪ ಅವರಿಗೆ ಗ್ರಾಮಕ್ಕೆ ಕೂಡಲೇ ಮೂಲಸೌಕರ್ಯ ಒದಗಿಸುವಂತೆ ಕೋರಿದರು.

ಸ್ವಾತಂತ್ರ್ಯ ಬಂದು 75 ವರ್ಷಗಳೇ ಕಳೆದರೆ ಗ್ರಾಮಕ್ಕೆ ಕುಡಿಯುವ ನೀರು, ಬೀದಿ ದೀಪ, ರಸ್ತೆ, ಚರಂಡಿಯಂತ ಮೂಲ ಸೌಕರ್ಯಗಳೇ ಇಂದಿಗೂ ಮರೀಚಿಕೆ ಆಗಿದೆ. ನಾಗರೀಕ ಸಮಾಜದಿಂದ ಈ ಗ್ರಾಮ ಬಹಳ ದೂರವೇ ಉಳಿದಿದೆ ಎಂಬ ಭಾವನೆ ಗ್ರಾಮಸ್ಥರನ್ನು ಕಾಡುತ್ತಿದ್ದು, ಚುನಾವಣೆ ನಂತರ ಯಾವುದೇ ಜನಪ್ರತಿನಿಧಿಗಳು ಇತ್ತ ಮುಖ ಮಾಡದೇ ಇರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ. ಕನಿಷ್ಟ ಸೊನಲೆ-ಆದುವಳ್ಳಿ ಸಂಪರ್ಕ ರಸ್ತೆಯನ್ನಾಗಲಿ ದುರಸ್ತಿಗೊಳಿಸಲಿ ಎಂಬುದು ಮತದಾರರ ಅಳಲಾಗಿದ್ದು, ತಪ್ಪಿದಲ್ಲಿ ಮುಂಬರುವ ಎಲ್ಲಾ ಚುನಾವಣೆಗಳನ್ನು ಬಹಿಷ್ಕರಿಸುವ ಎಚ್ಚರಿಕೆಯನ್ನು ಗ್ರಾಮಸ್ಥರು ನೀಡಿದ್ದಾರೆ.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!