ಮೂಲೆಗದ್ದೆ ಮಠದಲ್ಲಿ ಸಂಕ್ರಾಂತಿ ಹಬ್ಬದ ಸಮಾರಂಭವಿಲ್ಲ

0
386

ಹೊಸನಗರ: ಪ್ರತಿ ವರ್ಷ ಸಂಕ್ರಾಂತಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು ಆದರೆ ರಾಜ್ಯದಲ್ಲಿ ಕೊರೊನಾ ಇರುವುದರಿಂದ ಸರ್ಕಾರದ ಸುತ್ತೋಲೆಯಂತೆ ಸಂಕ್ರಾಂತಿ ಹಬ್ಬದ ದಿನದಂದು ನಡೆಯಬೇಕಿದ್ದ ಸಮಾರಂಭವನ್ನು ರದ್ದುಪಡಿಸಲಾಗಿದೆ. ಪೂಜೆ ಕಾರ್ಯ ಎಂದಿನಂತೆ ನಡೆಯಲಿದೆ ಎಂದು ಮೂಲಗದ್ದೆ ಮಠದ ಅಭಿನವ ಚನ್ನಬಸವ ಸ್ವಾಮೀಜಿಯವರು ತಿಳಿಸಿದ್ದಾರೆ.

ಜನವರಿ 15ನೇ ಶನಿವಾರ ಬೆಳಿಗ್ಗೆ ದೇವಸ್ಥಾನದ ಮೂಲ ದೇವಸ್ಥಾನದಲ್ಲಿ ಪೂಜಾ ಕಾರ್ಯ ಸರಳ ರೀತಿಯಲ್ಲಿ ನಡೆಯಲಿದ್ದು 11 ಗಂಟೆಯಿಂದ ಮಠದ ಆವರಣದಲ್ಲಿ ಭಕ್ತರುಗಳಿಗೆ ಪ್ರಸಾದ ವಿನಿಯೋಗ ಹಾಗೂ ಆಶೀರ್ವಚನ ನೀಡಲಾಗುವುದು.

ಅಂದು ಕತೃ ಶ್ರೀ ಚನ್ನಬಸವೇಶ್ವರ ಸ್ವಾಮಿಗಳ ಗದ್ದುಗೆಗೆ ಪೂಜೆ ಸರಳ ಸಂಪ್ರದಾಯದಂತೆ ಆಚರಿಸಲಾಗುತ್ತಿದ್ದು ಬರುವ ಭಕ್ತಾಧಿಗಳಿಗೆ ಗದ್ದಿಗೆಯ ದರ್ಶನಾಶೀರ್ವಾದ ಪಡೆಯಲು ಅವಕಾಶ ಇರುತ್ತದೆ ಎಂದು ಹೇಳಿದ್ದು, ಎಲ್ಲ ಕಾರ್ಯಕ್ರಮಗಳು ಕೋವಿಡ್ ಮಾರ್ಗಸೂಚಿಯಂತೆ ನಡೆಯುವುದು ಎಂದು ತಿಳಿಸಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here