ಮೂಲೆಗದ್ದೆ ಮಠಾಧೀಶರಿಂದ ನಂದಿ ವಿಗ್ರಹ ಪ್ರತಿಷ್ಠಾಪನೆ

0
276

ಸಾಗರ: ತಾಲೂಕಿನ ಕುಡಿಗೇರಿ-ಸಾವೆಹಕ್ಕಲು ಗ್ರಾಮದಲ್ಲಿ ಬಸವಣ್ಣನ (ನಂದಿ) ವಿಗ್ರಹ ಪ್ರತಿಷ್ಠಾಪನೆಯನ್ನ ಮಲೆನಾಡಿನ ಖ್ಯಾತ ಮಠ ಮೂಲೆಗದ್ದೆ ಸದಾನದಂದ ಶಿವಯೋಗಾಶ್ರಮದ ಅಭಿನವ ಚನ್ನಬಸವ ಮಹಾಸ್ವಾಮಿಗಳು ನೆರವೇರಿಸಿದರು.

ಸೋಮವಾರ ಬ್ರಾಹ್ಮಿ ಮಹೋತ್ಸವದಲ್ಲಿ ನೂತನ ಬಸವೇಶ್ವರ ದೇವರಿಗೆ ಕಲಾನ್ಯಾಸ, ತತ್ವನ್ಯಾಸ, ರುದ್ರಾಭಿಷೇಕ, ಹೋಮ-ಹವನಗಳು ಶ್ರೀಗಳ ಸಾನ್ನಿಧ್ಯದಲ್ಲಿ ಜರುಗಿದವು.

ಊರಿನ ಗ್ರಾಸ್ಥರನ್ನುದ್ದೇಶಿಸಿ ಶ್ರೀಗಳು ಒಂದು ಗಂಟೆ ಪ್ರವಚನ ನೀಡಿ, ಹಿಂದೂ ಪರಂಪರೆ ದೇವರು, ನಂಬಿಕೆ ಕುರಿತು ಜನರಿಗೆ ವಿವರಿಸಿದರು. ನಮ್ಮಲ್ಲಿರುವ ಕಿಚ್ಚನ್ನ ಹೇಗೆ ಸುಟ್ಟುಕೊಳ್ಳಬೇಕು ಎಂಬುದರ ಬಗ್ಗೆ ಹಳ್ಳಿ ಜನರಿಗೆ ಮನಮುಟ್ಟುವಂತೆ ವಿವರಿಸಿದರು.

ಶ್ರೀಗಳು ಮಾತನಾಡಿ, ಭಾರತಕ್ಕೆ ಬೆಲೆ ಬಂದಿದ್ದು ಮಹಾನ್‌ ದಾರ್ಶನಿಕರು, ಸಂತರು, ಮಹಾತ್ಮ ಗಾಂಧಿಯಂಥವರು, ತೀರ್ಥಕ್ಷೇತ್ರಗಳಂಥವುಗಳಿಂದ. ವಿಶೇಷವಾಗಿ ಮಹಿಳೆಯರು ಸಂಸ್ಕಾರ ಹಾಗೂ ಸಂಸ್ಕೃತಿ ಬೆಳೆಸಿಕೊಂಡು ಬಂದಿದ್ದಾರೆ.

ನಮ್ಮ ದೇಶದಲ್ಲಿ ಪೂಜೆ-ಪುನಸ್ಕಾರಗಳನ್ನ ಉಳಿಸಿಕೊಂಡು ಹೋಗುತ್ತಿದ್ದಾರೆ. ನಮಗೆ ನೆಮ್ಮದಿ ಇಲ್ಲದಿದ್ದಾಗ ದೇವಸ್ಥಾನಗಳನ್ನ ಸುತ್ತುತ್ತೇವೆ, ದಾನ-ಧರ್ಮಗಳನ್ನ ನೀಡುತ್ತೇವೆ. ಇದೇ ನಮ್ಮ ಸಂಸ್ಕೃತಿ..! ಬಸವಣ್ಣನವರ ಕಲಬೇಡ, ಕೊಲಬೇಡ ಹುಸಿಯ ನುಡಿಯಲು ಬೇಡ ವಚನದ ಜೊತೆಯಲ್ಲಿ ಇನ್ನೊಂದು ಸಾಲನ್ನ ನಾವು ಸೇರಿಸಿಕೊಳ್ಳಬೇಕಿದೆ ಅದು ಇನ್ನೊಬ್ಬರ ಮನೆಗೆ ಲಿಂಬೆಹಣ್ಣು ಹಾಕಬೇಡ..! ಪಕ್ಕದ ಮನೆಯವರು ಉದ್ಧಾರವಾದರೆ ನಮಗೆ ಕಿಚ್ಚು ಹೊತ್ತಿಕೊಂಡು ಬಿಡುತ್ತೆ. ಇದನ್ನ ನಾವು ಶಮನ ಮಾಡಿಕೊಂಡರೆ ಮಾತ್ರ ಉದ್ಧಾರವಾಗುತ್ತೇವೆ.

ನಾವು ಸಾವಿರಾರು ದೇವಸ್ಥಾನಗಳನ್ನ ಪ್ರತಿಷ್ಠಾಪನೆ ಮಾಡುತ್ತೇವೆ ಆದರೆ ಬಸವಣ್ಣನ ಪರಿಕಲ್ಪನೆಯೇ ಬೇರೆಯಾಗಿತ್ತು. ಬಸವಣ್ಣ ದೇಹವೇ ದೇಗುಲ ಎಂದು ಹೇಳುತ್ತಾರೆ. ಸ್ಥಾವರಕ್ಕಳಿವುಂಟು, ಜಂಗಮಕ್ಕಿಲ್ಲ ಎನ್ನುತ್ತಾರೆ. ದೇವಸ್ಥಾನಗಳಿಗೂ ಅಳಿವಿದೆ. ಭಗವಂತನನ್ನ ಮೆಚ್ಚಿಸುವ ಶಕ್ತಿಯೂ ಗುರುವಿನಲ್ಲಿ ಅಡಕವಾಗಿರುತ್ತದೆ. ಪುರೋಹಿತ ಎಂದರೆ ಪುರದ ಹಿತ ಕಾಯುವವನು ಆತನ ಪೂಜೆ ಪುನಸ್ಕಾರಗಳಿಂದ ನಮ್ಮ ಊರು ಉದ್ದಾರವಾಗುತ್ತದೆ. ಬಸವಣ್ಣನ ದೇಗುಲ ಪೂಜೆಯೂ ಸಹ ಪುರೋಹಿತರ ಸಮ್ಮುಖದಲ್ಲಿ ನಡೆದಿದೆ. ಖಂಡಿತಾ ಒಳಿತಾಗುತ್ತೆ ಎಂದರು.

ಒಟ್ಟಿನಲ್ಲಿ ಮೂಲೆಗದ್ದೆ ಶ್ರೀಗಳ ಖ್ಯಾತಿ ಸಾಗರದ ಹಳ್ಳಿಗಳಿಗೂ ವ್ಯಾಪಿಸಿದ್ದು ಜನರೂ ಕೂಡ ಗುರು ಬೋಧನೆಯಿಂದ ಸಂತೃಪ್ತರಾದರು.

ಪ್ರತಿಷ್ಠಾಪನೆಗೊಂಡ ಬಸವಣ್ಣನ ದರ್ಶನಕ್ಕೆ ಬಂದ ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ತಾವು ಅಧಿಕಾರದಲ್ಲಿದ್ದಾಗ ಊರಿಗೆ ಮಾಡಿದ ಕಾರ್ಯಗಳನ್ನ ನೆನಪು ಮಾಡಿಕೊಂಡರು.

ಜಾಹಿರಾತು

LEAVE A REPLY

Please enter your comment!
Please enter your name here