20.6 C
Shimoga
Friday, December 9, 2022

ಮೂಲೆಗದ್ದೆ ; ಮಾವಿನಹೊಳೆ ತೆಪ್ಪೋತ್ಸವ ಕಾರ್ತಿಕಾ ದೀಪೋತ್ಸವ

ರಿಪ್ಪನ್‌ಪೇಟೆ: ಸರ್ವಜನಾಂಗದ ಶಾಂತಿಯ ತೋಟ ಮೂಲೆಗದ್ದೆ ಮಠ ಸರ್ವ ಜನಾಂಗದವರನ್ನು ಪ್ರೀತಿಸಿ ಸೌಹಾರ್ದತೆ ಸಾಮರಸ್ಯದ ಪ್ರತೀಕವಾಗಿರುವ ಮೂಲೆಗದ್ದೆ ಮಠದಲ್ಲಿ ಜಗಜ್ಯೋತಿ ಬಸವಣ್ಣನವರ ವಚನದಂತೆ ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ, ಜ್ಯೋತಿಯ ಬಲದಿಂದ ತಮ್ಮಂದದ ಕೇಡು ನೋಡಯ್ಯ ನಮ್ಮಲ್ಲಿರುವ ಅಂದಕಾರವನ್ನು ದೂರಮಾಡಿ ಜ್ಞಾನದ ದೀವಿಗೆಯೊಂದಿಗೆ
ಅಜ್ಞಾನದ ಕತ್ತಲೆ ಕಳೆದು ಬದುಕು ಹಸನಾಗಿಸಲು ಕಾರ್ತಿಕ ದೀಪೋತ್ಸವ ಸಹಕಾರಿಯೆಂದು ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಅಭಿನವ ಚನ್ನಬಸವ ಮಹಾಸ್ವಾಮೀಜಿ ಹೇಳಿದರು.

ಮೂಲೆಗದ್ದೆ ಶ್ರೀಸದಾನಂದ ಶಿವಯೋಗಾಶ್ರಮದಲ್ಲಿ ಕಾರ್ತಿಕ ದೀಪೋತ್ಸವ ಮತ್ತು ಮಾವಿನಹೊಳೆಯಲ್ಲಿ ತೆಪ್ಪೋತ್ಸವ ಲಿಂಗೈಕೈ ಚನ್ನಬಸವ ಮಹಾಶಿವಯೋಗಿಗಳ ಪುಣ್ಯಾರಾದನಾ ಕಾರ್ಯಕ್ರಮದ ದಿವ್ಯಸಾನಿದ್ಯ ವಹಿಸಿ ಆಶೀರ್ವಚನ ನೀಡಿದರು.


ವೀರಶೈವ ಸಮಾಜದ ಜಿಲ್ಲಾ ಮುಖಂಡ ಬಿ.ಯುವರಾಜಗೌಡ,ರುದ್ರಪ್ಪಗೌಡ ಜಬ್ಬಗೋಡು,ತಮ್ಮಣ್ಣಪ್ಪಗೌಡ, ಈಶ್ವರಗೌಡ ಹೊಸನಗರ,ಹಾಲೇಶಗೌಡರು ಸುತ್ತಾ, ಅನಿಲ್‌ಗೌಡ ಬರದಳ್ಳಿ, ಶಿವಪ್ರಕಾಶಪಾಟೀಲ್ ಕಗ್ಗಲಿ, ವೀರೇಶ್ ಗೌಡ ಬೆನವಳ್ಳಿ, ರಾಜಶೇಖರ ಹಾಲಂದೂರು, ವಿನಯಕುಮಾರ್‌ದುಮ್ಮಾ, ಕೇಶವ ದೇವರಸಲಕೆ, ಸಂತೋಷ ಶೆಟ್ಟಿಬೈಲು, ಸೂರ್ಯ ಕುಮಾರ್ ಗವಟೂರು, ಸುಧಾಕರ ಬೆನವಳ್ಳಿ, ಮಲ್ಲಿಕಾರ್ಜುನ ಗವಟೂರು, ಎಂ.ನವೀನಕುಮಾರ್ ಇನ್ನಿತರರು ಹಾಜರಿದ್ದರು.


ಸಾಮೂಹಿಕ ಅನ್ನ ಸಂತರ್ಪಣೆಯೊಂದಿಗೆ ಭಕ್ತರ ಸಿಡಿಮದ್ದು ಪ್ರದರ್ಶನ ಹಾಗೂ ಕೋಲಾಟ ಪ್ರದರ್ಶನ ಜನಾಕರ್ಷಣೆಗೊಂಡಿತು.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!